Back to List

Upcomming Events Details

ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ, ಕೋಟೇಶ್ವರ ಘಟಕದ ಮಹಾಸಭೆ ಮತ್ತು ನೂತನ ಪದಾಧಿಕಾರಗಳ ಪದಪ್ರಧಾನ ಸಮಾರಂಭ.

ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ, ಕೋಟೇಶ್ವರ ಘಟಕದ ಮಹಾಸಭೆ ಮತ್ತು ನೂತನ ಪದಾಧಿಕಾರಗಳ ಪದಪ್ರಧಾನ ಸಮಾರಂಭ. ಕಾರ್ಯಕ್ರಮವು ಕೋಟೇಶ್ವರದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಸಂಘಟನೆಯ ಮಾರ್ಗದರ್ಶಕರಾದ ಡಾ.ಜಿ.ಶಂಕರ್ ರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಅವರು ಮಾತನಾಡುತ್ತಾ, ಕೋಟೇಶ್ವರ ಘಟಕವು ಎಲ್ಲಾ ವಿಭಾಗಗಳಲ್ಲೂ ಉತ್ತಮವಾಗಿ ಜನರಿಗೆ ಸ್ಪಂದಿಸುತ್ತಾ ಜನರ ಸೇವೆಯಲ್ಲಿ ತೊಡಗಿಕೊಳ್ಳುವ ಮೂಲಕ ಜನಪರ ಕಾಳಜಿ ಮೆರೆದಿದೆ. ಮುಂದೆಯೂ ಕೂಡಾ ನೂತನ ಅಧ್ಯಕ್ಷರು ಹಾಗೂ ಅವರ ತಂಡ ಉತ್ತಮವಾಗಿ ಕಾರ್ಯನಿರ್ವಹಿಸಲಿ ಎಂದು ಶುಭ ಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ನೂತನ ಅಧ್ಯಕ್ಷರಾದ ಶ್ರೀ ಶ್ರೀಧರ ಮೆಂಡನ್ ರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉಡುಪಿ ಜಿಲ್ಲಾ ಸಂಘಟನೆಯ ಅಧ್ಯಕ್ಷರಾದ ಶ್ರೀ ಗಣೇಶ್ ಕಾಂಚನ್ ರವರು ನೂತನ ಪದಾಧಿಕಾರಿಗಳಿಗೆ ಪ್ರತಿಜ್ಣಾವಿಧಿ ಬೋಧಿಸಿದರು. ಶ್ರೀ ಅಶೋಕ್ ತೆಕ್ಕಟ್ಟೆ, ನಿರ್ಗಮನ ಅಧ್ಯಕ್ಷರು, ಶ್ರೀ ಆನಂದ್ ಸಿ.ಕುಂದರ್, ಉದ್ಯಮಿಗಳು ಕೋಟ, ಎಂ.ಎಂ.ಸುವರ್ಣ, ಶಾಖಾಧ್ಯಕ್ಷರು, ಬಗ್ವಾಡಿ ಹೋಬಳಿ, ಶ್ರೀ ಬಿ.ಎನ್.ನರಸಿಂಹ ಅಧಕ್ಷರು ಮೊಗವೀರ ಸಂಘ ಬೆಂಗಳೂರು, ಬಿ.ಹಿರಿಯಣ್ಣ, ಅಧ್ಯಕ್ಷರು ಕೆ.ಎಫ್.ಡಿ.ಸಿ. ಮಂಗಳೂರು, ಯಶ್ ಪಾಲ್ ಸುವರ್ಣ, ಅಧ್ಯಕ್ಷರು ಮೀನುಹಾರಿಕಾ ಫೆಡರೇಷನ್, ಹಾಗೂ ಶ್ರೀ ಶೇಖರ್ ಕಾಂಚನ್ ಕೊಮೆ. ಉಪಸ್ಥಿತರಿದಗದರು. ಇದೆ ಸಂದರ್ಭದಲ್ಲಿ ಮಹಿಳಾ ಘಟಕದ ಅಧ್ಯಕ್ಷರಾದ ಕು. ಪ್ರೇಮಾರವರ ತಂಡಕ್ಕೆ ಪ್ರತಿಜ್ಣಾವಿಧಿ ಬೋಧಿಸಲಾಯಿತು. ನಿರ್ಗಮನ ಅಧ್ಯಕ್ಷರಾದ ಶ್ರೀ ಅಶೋಕ್ ತೆಕ್ಕಟ್ಟೆ, ಶ್ರೀಮತಿ ಹೇಮಾ ತೆಕ್ಕಟ್ಟೆ, ನಿರ್ಗಮನ ಕಾರ್ಯದರ್ಶಿ ನಾಗಾರಾಜ್ ಹಾಗು ಗಾಯತ್ರಿ ಅವರನ್ನು ಗೌರವಿಸಲಾಯಿತು.
🕔24 October 2016