Back to List

Upcomming Events Details

ಮೊಗವೀರ ಯುವ ಸಂಘಟನೆ, ಕುಂದಾಪುರ ಘಟಕದ ವತಿಯಿಂದ ವೃತ್ತಿ ಮಾರ್ಗದರ್ಶನ ಶಿಬಿರ.ಮೊಗವೀರ ಯುವ ಸಂಘಟನೆ, ಕುಂದಾಪುರ ಘಟಕ, ಜಿ.ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಉಡುಪಿ,ರೋಟರಿ ಕ್ಲಬ್‌ ಕುಂದಾಪುರ, ಸರಕಾರಿ ಪದವಿಪೂರ್ವ ಕಾಲೇಜು ಫ್ರೌಢ ಶಾಲೆ ವಿಭಾಗ, ಶೈಕ್ಷಣಿಕ ವೃತ್ತಿ ಮಾರ್ಗದರ್ಶನ ಹಾಗೂ ಅಪ್ತ ಸಲಹಾ ಕೇಂದ್ರ ಇದರ ಸಂಯುಕ್ತ ಆಶ್ರಯದಲ್ಲಿ ಕುಂದಾಪುರದ ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ದಿನಾಂಕ 04/11/2016ರಂದು 9 ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ವೃತ್ತಿ ಮಾರ್ಗದರ್ಶನ ಶಿಬಿರ ನಡೆಯಿತು. ಈ ಶಿಬಿರದಲ್ಲಿ ಮಾತನಾಡಿದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಿನ್ಸಿಪಾಲ್‌ ಶ್ರೀ ಸುಬ್ರಹ್ಮಣ್ಯ ರವರು ವಿದ್ಯಾರ್ಥಿಗಳಲ್ಲಿ ಕೀಳರಿಮೆ ಭಾವ ಬಂದಲ್ಲಿ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಿಲ್ಲ,ಮಾನಸಿಕವಾಗಿ ಸದೃಢ ಹೊಂದಿದ್ದರೆ ಜೀವನದಲ್ಲಿ ಪ್ರಭುತ್ವ ಸಾಧಿಸುತ್ತೀರಿ ಎಂದು ತಿಳಿಸಿದರು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಮುಗಿದ ತಕ್ಷಣ ಯಾವ ವಿಷಯ ಆಯ್ಕೆ ಮಾಡಿಕೊಳ್ಳಬೇಕು? ಮುಂದಿನ ಶಿಕ್ಷಣ ಯಾವ ರೀತಿಯಲ್ಲಿರಬೇಕು ಎನ್ನುವ ಗೊಂದಲ ವಿದ್ಯಾರ್ಥಿಗಳಿಗೆ ಇರುವುದು ಸಹಜ.ಇಂತಹ ಅನುಮಾನಗಳ ನಿವಾರಣೆಗೆ ಇಂತಹ ಶಿಬಿರಗಳು ಹೆಚ್ಚು ಸಹಾಯಕವಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೊಗವೀರ ಯುವ ಸಂಘಟನೆ ಕುಂದಾಪುರ ಘಟಕದ ಅಧ್ಯಕ್ಷರಾದ ರಮೇಶ್‌ ಟಿ.ಟಿ. ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಾಳಾದ ಅಶೋಕ್‌ ಕುಮಾರ್‌ ಶೆಟ್ಟಿ ವೈದ್ಯರಾದ ಡಾ. ಪ್ರಕಾಶ್‌ ತೋಳಾರ್‌ ವೃತ್ತಿ ಮಾರ್ಗದರ್ಶನದ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್‌ ದಕ್ಷಿಣ ಅಧ್ಯಕ್ಷ ಓಜಲಿನ್‌ ರೆಬೆಲ್ಲೋ, ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷರಾದ ಗಣೇಶ್‌ ಕಾಂಚನ್‌ ಫ್ರೌಢ ಶಾಲಾ ಮುಖ್ಯ ಶಿಕ್ಷಕ ಅರುಣ್‌‌ ಕುಮಾರ್‌ ಶೆಟ್ಟಿ,ವೈದ್ಯರಾದ ಡಾ. ಸತೀಶ್‌ ಪೂಜಾರಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

🕔15 November 2016