Back to List

Upcomming Events Details

Mogaveera Yuva Sanghatane Sports - 2017.

ಮೊಗವೀರ ಕ್ರೀಡೋತ್ಸವ - 2017 ಮಂದಾರ್ತಿ ಘಟಕದ ಆತಿಥ್ಯದಲ್ಲಿ ದಿನಾಂಕ 22/01/2017ರಂದು ಮಂದಾರ್ತಿಯ ಶ್ರೀ ದುರ್ಗಾಪರಮೇಶ್ವರಿ ಫ್ರೌಢ ಶಾಲೆಯ ಕ್ರೀಡಾಂಗಣದಲ್ಲಿ ನಡೆಯಿತು. ಕ್ರೀಡಾಕೂಟವನ್ನು ಉದ್ಘಾಟಿಸಿದ ಉಡುಪಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕರಾದ ಡಾ. ಜಿ. ಶಂಕರ್ ಮಾತನಾಡಿ “ಕ್ರೀಡೆಯಿಂದ ನಾವೆಲ್ಲರೂ ಒಂದು ಎಂಬ ಭಾವನೆ ಮೂಡುತ್ತದೆ. ಇದರಿಂದ ಸಂಘಟನಾತ್ಮಕವಾಗಿ ಬೆಳೆಯಲು ಸಾಧ್ಯ” ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವ ಸಂಘಟನೆ ಜಿಲ್ಲಾಧ್ಯಕ್ಷ ಶ್ರೀ ಗಣೇಶ್ ಕಾಂಚನ್ ವಹಿಸಿದ್ದರು. ದ.ಕ. ಮೊಗವೀರ ಮಹಾಜನ ಸಂಘದ ಆಧ್ಯಕ್ಷರಾದ ಶ್ರೀ ಗಂಗಾಧರ್ ಕರ್ಕೆರ ರವರು ಕ್ರೀಡಾಜ್ಯೋತಿ ಬೆಳಗಿಸಿದರು.  ಮಂದಾರ್ತಿ ಶ್ರೀದುರ್ಗಾಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಧನಂಜಯ ಶೆಟ್ಟಿ ಧ್ವಜರೋಹಣ ನೆರವೇರಿಸಿದರು. ದ.ಕ. ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಎ. ಸುವರ್ಣ ಗೌರವ ವಂದನೆ ಸ್ವೀಕರಿಸಿದರು. ಕ್ರೀಡಾಪಟುಗಳಾದ ಉಮೇಶ್ ಕುಂದರ್ಶಿಲ್ಪಾ, ದೀಕ್ಷಾ ನೇತೃತ್ವದಲ್ಲಿ ಕ್ರೀಡಾಜ್ಯೋತಿಯನ್ನು ಮೆರವಣಿಗೆಯಲ್ಲಿ ಕ್ರೀಡಾಂಗಣಕ್ಕೆ ತರಲಾಯಿತು. ಕಾರ್ಯಕ್ರಮದಲ್ಲಿ ಮೊಗವೀರ ಸಂಯುಕ್ತ ಸಭಾದ ಅಧ್ಯಕ್ಷ ವಿಶ್ವನಾಥ ಮಾಸ್ಟರ್ಉದ್ಯಮಿಗಳಾದ ಉಮೇಶ್ ಕುಂದರ್ ಬೆಂಗಳೂರು,ಧನಂಜಯ ಅಮೀನ್ ಪೇತ್ರಿಕೆ.ಗುಣಕರ ಬೆಂಗಳೂರುಸುಧಾಕರ್ ಬಂಗೇರ ಬೆಂಗಳೂರುಮಹಾಬಲದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಸಂತೋಷ್ ಕುಮಾರ್ ಶೆಟ್ಟಿಜಿಪಂ ಮಾಜಿ ಸದಸ್ಯ ಪ್ರಕಾಶ್ ಮೆಂಡನ್ಯುವ ಸಂಘಟನೆಯ ಸರ್ವೋತ್ತಮ್ ಮತ್ತಿತರರು ಹಾಗೂ ಯುವ ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಸುವರ್ಣ ಬೈಕಾಡಿಕ್ರೀಡಾ ಕಾರ್ಯದರ್ಶಿ ಕೃಷ್ಣ ಮೊಗವೀರಮಂದಾರ್ತಿ ಘಟಕದ ಅಧ್ಯಕ್ಷ ರಾಘವ ಮೆಂಡನ್ ಮತ್ತಿತರರು ಉಪಸ್ಥಿತರಿದ್ದರು. ಮಾಜಿ ಜಿಲ್ಲಾಧ್ಯಕ್ಷ ಜಯ ಸಿ. ಕೋಟ್ಯಾನ್ ಸ್ವಾಗತಿಸಿದರು. ಮಂದಾರ್ತಿ ಘಟಕದ ಸ್ಥಾಪಕಾಧ್ಯಕ್ಷ ಅಶೋಕ್ ಎಲ್. ಕುಂದರ್ ಸಂಯೋಜಿಸಿದರು. ಸತೀಶ್ಚಂದ್ರ ಶೆಟ್ಟಿ ಚಿತ್ರಪಾಡಿ ಮತ್ತು ಶಿವರಾಮ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು.

ಈ ಕ್ರೀಡಾಕೂಟದಲ್ಲಿ ಮೊಗವೀರ ಯುವ ಸಂಘಟನೆಯ ಎಲ್ಲಾ ಘಟಕಗಳು ಬಾಗವಹಿಸಿದ್ದವು. ಸಮಗ್ರ ಚಾಂಪಿಯನ್‌ ಆಗಿ ಬೈಂದೂರು - ಶಿರೂರು ಘಟಕ ಹಾಗೂ ದ್ವೀತಿಯ ಸ್ಥಾನವನ್ನು ಬಡನಿಡಿಯೂರು ಘಟಕ ಪಡೆದುಕೊಂಡಿತು.


ಅಂತಿಮ ಪಲಿತಾಂಶ ಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Photo Gallary Click here


🕔01 February 2017