Back to List

Upcomming Events Details

Mass Marriage - 2017.

ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ ನಿಂದ 9ನೇ ವರ್ಷದ ಉಚಿತ ಸಾಮೂಹಿಕ ವಿವಾಹ

ಸಾಮೂಹಿಕ ಹಸೆಮಣೆ ಏರಿದ 22 ಜೋಡಿಗಳು

ಅಂಬಲಪಾಡಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಹಾಗೂ ಮೊಗವೀರ ಯುವ ಸಂಘಟನೆ ಜಂಟಿಯಾಗಿ ಶ್ಯಾಮಿಲಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ 9ನೇ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ 22 ನವ ದಂಪತಿ ಹಸೆಮಣೆಏರಿದರು.ಚೆಂಡೆ, ವಾದ್ಯ, ಮಂತ್ರಘೋಷ ಮೊಳಗುತ್ತಿದ್ದಂತೆ ವರ ವಧುವಿನ ಕೊರಳಿಗೆ ಬಾಂಧವ್ಯದ ಮಾಂಗಲ್ಯಧಾರಣೆಯ 3 ಗಂಟು ಹಾಕಿ ಸತಿ ಪತಿಗಳಾದರು.ಶ್ರೀ ಅನಂತೇಶ್ವರ ದೇವಸ್ಥಾನದ ಮುಖ್ಯ ಅರ್ಚಕ ವೇಮೂ ವೇದವ್ಯಾಸ ಐತಾಳ್ ನೇತೃತ್ವದಲ್ಲಿ ನಡೆದ ಸಾಮೂಹಿಕ ವಿವಾಹಕ್ಕೆ ಸಾವಿರಾರು ಮಂದಿ ಸಾಕ್ಷಿಯಾದರು. ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ ಜಿ. ಶಂಕರ್ ಹಾಗೂ ಶಾಲಿನಿ ಶಂಕರ್ ವಧೂವರರಿಗೆ ಮಾಂಗಲ್ಯ ನೀಡಿ ಶುಭ ಹಾರೈಸಿದರು. ವಧುವಿಗೆ ಸೀರೆ, ಕಾಲುಂಗುರ, ರವಿಕೆ, ತಾಳಿ, ವರನಿಗೆ ಪೇಟಾ, ಅಂಗಿಯನ್ನು ಉಚಿತವಾಗಿ ನೀಡಲಾಯಿತು. ವಧೂವರರ ಮನೆಯವರಿಗೆ ಉಚಿತ ಊಟದ ವ್ಯವಸ್ಥೆ ಮಾಡಲಾಯಿತು. ಐವರು ಮಹಿಳೆಯರಿಂದ ಆರತಿ ಬೆಳಗಿಸಿ, ಅಕ್ಷತೆ ಹಾಕಿ ವಧೂವರರಿಗೆ ನೂರು ಕಾಲ ಸುಖವಾಗಿ ಬಾಳಿಎಂದು ಶುಭ ಹಾರೈಸಿದರು. ಆಧುನಿಕತೆ ಭರಾಟೆಯಲ್ಲಿರುವ ನಾವು ವೈಭವದ ಮದುವೆ, ವರದಕ್ಷಿಣೆ ಕಿರುಕುಳ ತಪ್ಪಿಸುವ ನಿಟ್ಟಿನಲ್ಲಿ ಸರಳ ವಿವಾಹದತ್ತ ಮುಖ ಮಾಡಬೇಕು. ಇದರಿಂದ ಬಡ ಮನೆತನದಲ್ಲಿ ಹುಟ್ಟಿರುವ ಹೆಣ್ಣು ಮಗಳಿಗೂ ಕಂಕಣ ಭಾಗ್ಯ ಸಿಗುತ್ತದೆ ಎಂದು ಡಾ.ಜಿ. ಶಂಕರ್ ತಿಳಿಸಿದರು. ಈ ಹೊತ್ತಿನಲ್ಲಿ ಹಸೆಮಣೆ ಏರಿದ ನವದಂಪತಿಗಳು  ಸೇರಿದಂತೆ ಈವರೆಗೆ ಒಟ್ಟು 218 ಜೋಡಿಗಳಿಗೆ ಉಚಿತ ವಿವಾಹ ಮಾಡಿದ್ದೇವೆ. ಒಂದೇ ವೇದಿಕೆಯಲ್ಲಿ 101 ಜೋಡಿಗಳಿಗೆ ವಿವಾಹ ಆಸೆ ಹೊಂದಿದ್ದು, ಶ್ರೀಘ್ರವೇ ಇದಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದರು. ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಕೆಎಂಸಿ ಆಸ್ಪತ್ರೆಯ ಎಂ. ಎಸ್. ದಯಾನಂದ್, ಮೊಗವೀರಯುವ ಸಂಘಟನೆ ಜಿಲ್ಲಾಧ್ಯಕ್ಷ ಗಣೇಶ್ ಕಾಂಚನ್, ಗಂಗಾಧರ ಎಚ್. ಕರ್ಕೇರ, ವಿಶ್ವನಾಥ್ ಮಾಸ್ತರ್, ಕೆ.ಕೆ ಕಾಂಚನ್, ಆನಂದ ಮರಕಾಲ, ಶಿವ ಜಿ. ಕರ್ಕೇರ, ಶಿವಪ್ಪ ಜಿ. ಕೋಟ್ಯಾನ್, ಸತೀಶ್ ಆಮೀನ್ ಪಡುಕೆರೆ ಉಪಸ್ಥಿತರಿದ್ದರು. 














🕔06 May 2017