Back to List

Upcomming Events Details

Mastyajyothi Puraskara.

ಮೀನಕ್ಕನಿಗೆ ಮತ್ಸ್ಯಜ್ಯೋತಿ ಪುರಸ್ಕಾರ ಪ್ರದಾನ ಮಾಡಿರುವುದು ನನ್ನ ಜೀವಮಾನದ ಸಾಧನೆಯಾಗಿದೆ. ಇದೊಂದು ವಿನೂತನ ಮನ ಮಿಡಿಯುವ ಸಮಾಜಮುಖಿ ಕಾರ್ಯ ಎಂದು ಡಾ.ಜಿ. ಶಂಕರ್ ಹೇಳಿದರು. ಅವರು ಭಾನುವಾರ ಸಾಲಿಗ್ರಾಮ ಹಳೆಕೋಟೆ ಮೈದಾನದಲ್ಲಿ ಉಡುಪಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್, ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ, ಕೋಟ ಕರಾವಳಿ ಮೊಗವೀರ ಮಹಾಜನ ಸಂಘ, ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ ಸಾಲಿಗ್ರಾಮ, ಕೋಟ ಘಟಕ, ಮಹಿಳಾ ಸಂಘಟನೆ ಸಾಲಿಗ್ರಾಮ-ಕೋಟ ಘಟಕ ಹಾಗೂ ಉಡುಪಿ ಜಿಲ್ಲೆಯ ಎಲ್ಲ ಮೀನುಗಾರ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಮೀನುಗಾರಿಕಾ ವೃತ್ತಿಯ ತಿಲಕ, 82 ರ ಹರೆಯದ ಮೀನಕ್ಕ ಎಂದು ಹೆಸರಾದ ಮೀನಕ್ಕ ಮರಕಾಲ್ತಿ ಅವರಿಗೆ ಮತ್ಸ್ಯಜ್ಯೋತಿ ಗೌರವ ಪುರಸ್ಕಾರ ಸಮಾರಂಭವನ್ನು ಮೀನಿನ ತುಲಾಭಾರ ಮಾಡಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಮೀನಕ್ಕನನ್ನು ನೋಡಿದಾಗ ನನ್ನ ತಾಯಿ ಲಕ್ಷ್ಮೀ ಬಂಗೇರ ನನ್ನ ಕಣ್ಣೆದುರು ಕಂಡು ಬರುತ್ತಾರೆ. ಆ ತಾಯಿ ಮೀನು ಮಾರಿ ನಮ್ಮನು ಸಾಕಿ ಬೆಳೆಸಿದ್ದಾರೆ. ಇಂತಹ ಕಾರ್ಯಕ್ರಮದ ಮೂಲಕ ಸಮಾಜದ ಒಗ್ಗಟ್ಟು ಬಲಗೊಳ್ಳುತ್ತದೆ. ಮಹಿಳೆಯರು ಜಾಗೃತರಾಗಬೇಕು ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ಗಣೇಶ್‌ ಕಾಂಚನ್ ವಹಿಸಿದ್ದರು. ಕರಾವಳಿ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಆನಂದ ಸಿ. ಕುಂದರ್, ಉಚ್ಚಿಲ ದ.ಕ. ಮೊಗವಿರ ಮಹಾಜನ ಸಂಘದ ಅಧ್ಯಕ್ಷ ಗಂಗಾಧರ ಎಚ್‌. ಕರ್ಕೆರ, ಮಾಜಿ ಅಧ್ಯಕ್ಷ ಕೇಶವ ಕುಂದರ್, ಬಾರಕೂರು ಮೊಗವೀರ ಸಂಯುಕ್ತ  ಸಭೆಯ ಅಧ್ಯಕ್ಷ ವಿಶ್ವನಾಥ ಮಾಸ್ಟರ್, ಬಗ್ವಾಡಿ ಹೋಬಳಿ ಮೊಗವೀರ ಮಹಾಜನ ಸೇವಾ ಸಂಘದ ಅಧ್ಯಕ್ಷ ಕೆ.ಕೆ. ಕಾಂಚನ್, ಹೆಮ್ಮಾಡಿ ಮೀನುಗಾರಿಕಾ ಸಂಘದ ಪ್ರಧಾನ ವ್ಯವಸ್ಥಾಪಕ ಉದಯ ಕುಮಾರ ಹಟ್ಟಿಯಂಗಡಿ, ಮಹಿಳಾ ಸಂಘಟನೆ ಸಾಲಿಗ್ರಾಮ ಘಟಕದ ಅಧ್ಯಕ್ಷೆ ಗೀತಾ ಭಾಸ್ಕರ್, ಕೋಟ ಘಟಕದ ಅಧ್ಯಕ್ಷೆ ಗುಲಾಬಿ ದೇವದಾಸ್ ಬಂಗೇರ, ಬೀಜಾಡಿ ಮೀನುಗಾರಿಕಾ ಸಹಕಾರಿ ಸಂಘದ ಅಧ್ಯಕ್ಷ ಗಣಪತಿ.ಟಿ. ಶ್ರೀಯಾನ್, ಕೋಟ ಅಮೃತೇಶ್ವರೀ ಮೀನುಗಾರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಸುಶೀಲ ಸೋಮಶೇಖರ್, ಹಸಿಮೀನು ಮಾರಾಟಗಾರರ ಸಹಕಾರಿ ಸಂಘದ ಅಧ್ಯಕ್ಷೆ ಬೇಬಿ ಸಾಲಿಯಾನ್, ಮೀನುಗಾರ ಮುಖಂಡರಾದ ಅಜಿತ್ ಸುವರ್ಣ, ಗೋಪಾಲ್ ಪುತ್ರನ್, ಕೆ.ಎಲ್. ಬಂಗೇರ, ಬಾಬಣ್ಣ ಕಾವಡಿ ಮತ್ತಿತರರು ಉಪಸ್ಥಿತರಿದ್ದರು. ಹಿರಿಯ ಮೀನು ಮಾರಾಟಗಾರ ಮಹಿಳೆಯರಾದ ಗೋಪಿ, ಲಕ್ಷ್ಮೀ, ಸಂಕು, ದುರ್ಗಿ, ಲಕ್ಷ್ಮೀಅಲೆಬೆಟ್ಟು, ನಾಗು ಮಧುವನ, ಬೋಳು, ಭಾಗಿ, ಭಾಗಿ ಅಲೆಬೆಟ್ಟು, ಅಂಬೆ ಮರಕಾಲ, ಅಕ್ಕಯ್ಯ ಮರಕಾಲ, ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ ಸಾಲಿಗ್ರಾಮ ಘಟಕದ ಅಧ್ಯಕ್ಷ ಸತೀಶ್ ಮರಕಾಲ ಸ್ವಾಗತಿಸಿದರು. ಕೋಟ ಘಟಕದ ಅಧ್ಯಕ್ಷ ಗಿರೀಶ್ ಬಂಗೇರ ವಂದಿಸಿದರು. ಶಿವರಾಮ್ ಕೆ.ಎಂ. ಕಾರ್ಯಕ್ರಮ ನಿರೂಪಿಸಿದರು.🕔10 May 2017