Back to List

Upcomming Events Details

Manipal Arogya Suraksha Card for Police & Retired Police.

ಸಮಾಜದ ಸ್ವಾಸ್ಥ ಕಾಪಾಡುವಲ್ಲಿ ಹಗಲು ರಾತ್ರಿ ಲೆಕ್ಕಿಸದೇ ದುಡಿಯುತ್ತಿರುವ ಪೋಲಿಸರ ಆರೋಗ್ಯ ರಕ್ಷಣೆಗೆ ಸಹಾಯಹಸ್ತ ನೀಡಲು ಸರಕಾರ ಮುಂದಾಗಬೇಕೆಂದು ಡಾ.ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ ಅಧ್ಯಕ್ಷ ಡಾ. ಜಿ. ಶಂಕರ್ ತಿಳಿಸಿದ್ದಾರೆ. ಅಂಬಲಪಾಡಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್, ಮೊಗವೀರ ಯುವ ಸಂಘಟನೆ, ಮಣಿಪಾಲ ವಿಶ್ವವಿದ್ಯಾಲಯದ ವತಿಯಿಂದ ಜಿಲ್ಲಾ ಪೋಲಿಸ್  ಅಧೀಕ್ಷಕರ  ಕಚೇರಿಯಲ್ಲಿ 01/05/2017ರಂದು ನಡೆದ ಉಡುಪಿ ಜಿಲ್ಲಾ ಪೋಲಿಸ್ ಹಾಗೂ ನಿವೃತ್ತ ಪೋಲೀಸ್  ಸಿಬ್ಬಂದಿಗೆ ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್‌ಗಳ ವಿತರಣಾ ಸಮಾರಂಭ ಉದ್ಘಾಟಿಸಿ ಮಾತಾನಾಡಿದರು. ಪೋಲೀಸರಿಗೆ ನೀಡುವ ಹೆಲ್ತ್ ಕಾರ್ಡ್‌ 50 ಸಾವಿರ ರೂ. ಮೌಲ್ಯದಾಗಿದ್ದು, ಇದು ಎಟಿಎಂನಂತೆ ಕಾರ್ಯನಿರ್ವಹಿಸುತ್ತದೆ. ಆರೋಗ್ಯದ ಸಮಸ್ಯೆ ಉಂಟಾದರೆ  ಈ ಕಾರ್ಡ್‌ ಬಳಕೆ ಮಾಡಿಕೊಂಡು ಚಿಕಿತ್ಸೆ ಪಡೆಯುವಂತೆ ಪೋಲೀಸರಿಗೆ ತಿಳಿಸಿದರು. ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಕೆ.ಟಿ. ಬಾಲಕೃಷ್ಣ ಮಾತಾನಾಡಿ, ಒತ್ತಡದಲ್ಲಿ ಕೆಲಸ ಮಾಡುವ ಪೋಲೀಸರಿಗೆ ಸೇವೆ ಮಾಡುತ್ತಿರುವಾಗಲೇ ಬಿಪಿ, ಸಕ್ಕರೆ ಕಾಯಿಲೆ ಬರುವುದು ಸಾಮಾನ್ಯ. ಸೇವೆಯಲ್ಲಿರುವಾಗ ಇಲಾಖೆಯಿಂದ ಸಿಗುವ ಆರೋಗ್ಯ ಭಾಗ್ಯದಿಂದ ಲಾಭವಾದರೆ ನಿವೃತ್ತಿ ಬಳಿಕ ಪೋಲೀಸರ ಸ್ಥಿತಿ ಶೋಚನಿಯವಾಗಿರುತ್ತದೆ. ಈ ದೃಷ್ಠಿಯಲ್ಲಿ ಇಂತಹ ಆರೋಗ್ಯ ಕಾರ್ಡ್‌ಗಳು ನಿವೃತ್ತ ಅಧಿಕಾರಿಗಳ ಜೀವರಕ್ಷಾ ಕವಚದಂತೆ ಕೆಲಸ ಮಾಡುತ್ತದೆ ಎಂದು ಅಭಿಪ್ರಾಯಪಟ್ಟರು. ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಎನ್ . ವಿಷ್ಣುವರ್ಧನ್, ಮಣಿಪಾಲ ವಿಶ್ವವಿದ್ಯಾಲಯದ ಸಹಕುಲಪತಿ ಡಾ. ಜಿ.ಕೆ ಪ್ರಭು, ಮೊಗವೀರ ಯುವ ಸಂಘಟನೆ ಅಧ್ಯಕ್ಷ ಗಣೇಶ್ ಕಾಂಚನ್, ನಿವೃತ್ತ ಪೋಲೀಸ್ ಸಿಬ್ಬಂದಿ ಸಂಘದ ಅಧ್ಯಕ್ಷ ಡಾ. ಪ್ರಭುದೇವ ಮಾನೆ ಉಪಸ್ಥಿತರಿದ್ದರು. ಚಂದ್ರೇಶ್ ಪಿತ್ರೋಡಿ ಕಾರ್ಯಕ್ರಮ ನಿರೂಪಿಸಿದರು.
🕔10 May 2017