Back to List

Upcomming Events Details

Free Notebook Distribution - 2017.

ಡಾ. ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ನಿಂದ ಉಚಿತ ನೋಟ್‌ ಪುಸ್ತಕ ವಿತರಣೆ

ಡಾ. ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಹಾಗೂ ಮೊಗವೀರ ಯುವ ಸಂಘಟನೆ ಉಡುಪಿ ಇದರ ವತಿಯಿಂದ ಆಯೋಜಿಸಿದ್ದ ಪ್ರತಿಭಾವಂತ ಹಾಗೂ ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ ಪುಸ್ತಕ ವಿತರಣೆ ಸಮಾರಂಭವನ್ನು ಉಡುಪಿಯ ಶ್ಯಾಮಿಲಿ ಸಭಾಂಗಣ ಹಾಗೂ ಕುಂದಾಪುರದ ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ದಿನಾಂಕ 27/05/2017ರಂದು ಹಮ್ಮಿಕೊಳ್ಳಲಾಗಿತ್ತು.

ಉಡುಪಿಯಲ್ಲಿ ಸಮಾರಂಭವನ್ನು ಉದ್ಘಾಟಿಸಿದ ರಾಜ್ಯ ಕಾನೂನು ಆಯೋಗದ ಅಧ್ಯಕ್ಷ ಎಸ್‌.ಆರ್‌. ನಾಯಕ್‌ ರವರು “ಶಿಕ್ಷಣ, ತರಬೇತಿ ಹಾಗೂ ಕಾಯಕ ಗೌರವಯುತ ಬದುಕಿಗೆ ಅವಶ್ಯವಾಗಿದ್ದು, ಇದು ಸಮಾಜದ ಮುಖ್ಯವಾಹಿನಿಯಲ್ಲಿ ಜೀವಿಸಲು ಅಗತ್ಯ” ಎಂದು ತಿಳಿಸಿದರು. ಸಮಾರಂಭದಲ್ಲಿ ಆರ್ಹ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಿಸಿದರು. ಉಡುಪಿಯ ಸಮಾರಂಭದಲ್ಲಿ ಡಾ. ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ನ ಡಾ. ಜಿ ಶಂಕರ್‌ರವರು ಪ್ರಸ್ತಾವಿಕವಾಗಿ ಮಾತನಾಡಿದರು ಹಾಗೂ ಉಡುಪಿ ಜಿಲ್ಲಾ ಮೊಗವೀರ ಸಂಘಟನೆಯ ಅಧ್ಯಕ್ಷರಾದ ಗಣೇಶ್‌ ಕಾಂಚನ್‌ರವರು   ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಯ ಮಾಜಿ ಅಧ್ಯಕ್ಷರಾದ ಜಯ ಸಿ ಕೋಟ್ಯಾನ್‌ರವರು ಉಪಸ್ಥಿರಿದ್ದರು.

ಕುಂದಾಪುರದಲ್ಲಿ ಸಮಾರಂಭವನ್ನು ಉದ್ಘಾಟಿಸಿದ ಡಾ. ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕರಾದ ನಾಡೋಜ ಡಾ. ಜಿ ಶಂಕರ್‌ರವರು ಉದ್ಘಾಟಿಸಿ “ಶಿಕ್ಷಣವೇ ನಮ್ಮ ಆಸ್ತಿಯಾಗಬೇಕು, ಶಿಕ್ಷಣಕ್ಕಿಂತ ಮಿಗಿಲಾದ ಆಸ್ತಿ ಬೇರೊಂದಿಲ್ಲ, ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಬೇಕು. ಅದಕ್ಕಾಗಿ ತ್ಯಾಗಕ್ಕೂ ಸಿದ್ದರಾಗಿರಬೇಕು. ಟ್ರಸ್ಟ್‌ ಕಳೆದ ಹಲವಾರು ವರ್ಷಗಳಿಂದ ಜಿಲ್ಲೆಯ ಎಲ್ಲ ವರ್ಗದ ಬಡ ಮಕ್ಕಳಿಗೆ ಉಚಿತ ನೋಟ್‌ ಪುಸ್ತಕ ವಿತರಿಸುತ್ತಾ ಬಂದಿದೆ. ಈ ಬಾರಿ 10 ಸಾವಿರ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಿದ್ದಾರೆ. ಶಾಲೆ ಆರಂಭಕ್ಕೆ ಮೊದಲೇ ಪುಸ್ತಕ ವಿತರಿಸಬೇಕೆಂಬ ನಮ್ಮ ಆಶಯ ಈ ಬಾರಿ ಈಡೇರಿದೆ.  ಪುಸ್ತಕ ಮಕ್ಕಳ ಪಾಲಿಗೆ ಸರಸ್ವತಿ ಇದ್ದಂತ,ನೋಟ್‌ ಪುಸ್ತಕ ಪಡೆದ ವಿದ್ಯಾರ್ಥಿಗಳು ಬದುಕಿನಲ್ಲಿ ಉನ್ನತ ಶಿಕ್ಷಣ ಪಡೆದು ಮುಂದೆ ಸಮಾಜಕ್ಕೆ ನೇರವಾಗಬೇಕು.  ಈ ಬಾರಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆ ಪ್ರಥಮ ಸ್ಥಾನವನ್ನು ಕಾಯ್ದುಕೊಂಡಿದ್ದು, ಶಿಕ್ಷಣಕ್ಕಾಗಿ ಟ್ರಸ್ಟ್‌ ನಡೆಸುತ್ತಿರುವ ಚಟುವಟಿಕೆಗಳಿಗೆ ಇದು ಬಲ ನೀಡಿದೆ. ಎಂದು ತಿಳಿಸಿದರಲ್ಲದೇ ಅರ್ಹ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ನೋಟ್‌ ಪುಸ್ತಕ ವಿತರಿಸಿ ಶುಭ ಹಾರೈಸಿದರು.

ಈ ಬಾರಿ ಒಟ್ಟು8600 ವಿದ್ಯಾರ್ಥಿಗಳಿಗೆ ನೋಟ್‌ ಪುಸ್ತಕ ವಿತರಣೆ ಆಗಲಿದ್ದು, ಉಡುಪಿಯ 2230, ಕುಂದಾಪುರದ 1500, ವಿಜಯಪುರದ 3500 ಹಾಗೂ ಶಿವಮೊಗ್ಗ, ಶೃಂಗೇರಿ, ಚಿಕ್ಕಮಗಳೂರು, ಸಾಗರ, ಹೊಸ ನಗರ,ತೀರ್ಥಹಳ್ಳಿ ಗಂಗಾಮತಸ್ತರು 1370 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ.



🕔28 May 2017