Back to homepage

Local Gataka Activities

ಮೊಗವೀರ ಯುವ ಸಂಘಟನೆ (ರಿ) ಉಡುಪಿ ಜಿಲ್ಲೆ ಇದರ ಅಧೀನ ಬರುವ ವಿವಿಧ ಘಟಕಗಳ ಕಾರ್ಯಕ್ರಮಗಳ ವಿವರ

2015-ರ-ಸಾಲಿನಲ್ಲಿ-ಘಟಕಗಳ-ಕಾರ್ಯಕ್ರಮಗಳ-ವಿವರ--2-:

2015 ರ ಸಾಲಿನಲ್ಲಿ ಮೊಗವೀರ ಯುವ ಸಂಘಟನೆ (ರಿ) ಉಡುಪಿ ಜಿಲ್ಲೆ ಇದರ  ವ್ಯಾಪ್ತಿಯಲ್ಲಿ ಬರುವ ಎಲ್ಲಾ ಘಟಕಗಳ ವೈಭವಯುತ ಕಾರ್ಯವೈಖರಿಗಳ ನೋಟ : ಘಟಕಗಳ ಕಾರ್ಯಕ್ರಮಗಳ ವಿವರ -2 :

11. ಮಂದಾರ್ತಿ ಘಟಕ  :- ಈ ಘಟಕವು 4 ರಕ್ತದಾನ ಶಿಬಿರಗಳ ಮೂಲಕ 1029 ಯೂನಿಟ್ ರಕ್ತ ನೀಡಿ ಹಲವು ಜೀವಿಗಳಿಗೆ ಆಸರೆಯಾದರು. ಉಡುಪಿ ಜಿಲ್ಲೆಯು ರಕ್ತದಾನಿಗಳ ಜಿಲ್ಲೆ ಎಂದು ಘೋಷಿಸುವಂತಾಗಲು ತಮ್ಮ ಸೇವೆಯನ್ನು ನೀಡಿದೆ. ಕ್ರೀಡಾ ಸಂಗಮದಲ್ಲಿ ತಮ್ಮ ಘಟಕದ ವತಿಯಿಂದ 40 ಕ್ರೀಡಾಪಟುಗಳು ಹಾಗೂ  ಸದಸ್ಯರೊಂದಿಗೆ ಭಾಗವಹಿಸಿದ್ದಾರೆ. ಕೋಟೇಶ್ವರದಲ್ಲಿ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ 4 ವಿಭಾಗಗಳಲ್ಲಿ ಭಾಗವಹಿಸಿ ಜನಮೆಚ್ಚುಗೆಯ ಕಾರ್ಯಕ್ರಮವನ್ನು ನೀಡಿರುತ್ತಾರೆ. ಸ್ಥಳೀಯ ಸಮಸ್ಯೆಗಳ ಬಗ್ಗೆ ಗುರಿಕಾರರು ಮತ್ತು ಸಮಾಜದ ಮುಖಂಡರೊಂದಿಗೆ ಸಭೆ ನಡೆಸಿ ಪರಿಹಾರ ಕಂಡುಕೊಂಡಿದ್ದಾರೆ. 2015ರ ಸಾಲಿನಲ್ಲಿ 1951 ಮಣೆಪಾಲ ಆರೋಗ್ಯ ಸುರಕ್ಷಾ ಕಾರ್ಡುಗಳನ್ನು  ವಿತರಿಸಲಾಗಿದೆ.

12.  ಉಪ್ಪೂರು ಘಟಕ :- ಈ ಘಟಕವು ಗತ ವರ್ಷದಲ್ಲಿ ಒಂದು ರಕ್ತದಾನ ಶಿಬಿರ ನಡೆಸುವ ಮೂಲಕ 205 ಯೂನಿಟ್ನಷ್ಟು  ರಕ್ತವನ್ನು ದಾನವಾಗಿ ನೀಡಿ ಮಾನವೀಯತೆ ಮರೆದಿದೆ. ಕ್ರೀಡಾ ಸಂಗಮದಲ್ಲಿ ತಮ್ಮ ಘಟಕದ ವತಿಯಿಂದ 30 ಹಾಗೂ  ಸದಸ್ಯರೊಂದಿಗೆ ಭಾಗವಹಿಸಿದ್ದಾರೆ.  2015ರ ಸಾಲಿನಲ್ಲಿ 376 ಮಣೆಪಾಲ ಆರೋಗ್ಯ ಸುರಕ್ಷಾ ಕಾರ್ಡುಗಳನ್ನು ವಿತರಿಸಲಾಗಿದೆ.

13. ಬಡಾನಿಡಿಯೂರು ಘಟಕ :- ಈ ಘಟಕವು, ಒಂದು ರಕ್ತದಾನ ಶಿಬಿರದ ಮೂಲಕ 92 ಯೂನಿಟ್ ಗಳಷ್ಟು ರಕ್ತ ಸಂಗ್ರಹಿಸಿದೆ. ಕ್ರೀಡಾ ಸಂಗಮದಲ್ಲಿ ಎಲ್ಲಾ ಕ್ರೀಡೆಗಳಲ್ಲಿ ಭಾಗವಹಿಸಿ ಪುರುಷರ ವಿಭಾಗದಲ್ಲಿ ಸತೀಶ್ ಸುವರ್ಣ ಮತ್ತು ಮಹಿಳೆಯರ ವಿಭಾಗದಲ್ಲಿ ಕುಮಾರಿ ಚೇತನಾ ವೈಯಕ್ತಿಕ ಚಾಂಪಿಯನ್ ಪಡೆದಿರುತ್ತಾರೆ. ಕೋಟೇಶ್ವರದಲ್ಲಿ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ನಾಲ್ಕು ವಿಭಾಗಗಳಲ್ಲಿ ಭಾಗವಹಿಸಿ ಚಾಂಪಿಯನ್ ಆಗಿ ಹೊರಹೂಮ್ಮಿದೆ. 2015ರ ಸಾಲಿನಲ್ಲಿ 613 ಮಣೆಪಾಲ ಆರೋಗ್ಯ ಸುರಕ್ಷಾ ಕಾರ್ಡುಗಳನ್ನು ವಿತರಿಸಲಾಗಿದೆ.

 

14.  ಹಿರಿಯಡ್ಕ ಘಟಕ  :- ಘಟಕ ವ್ಯಾಪ್ತಿಯಲ್ಲಿ 4 ಶಿಬಿರಗಳಿಂದ ಸುಮಾರು 335 ಯೂನಿಟ್‍ಗಳಷ್ಟು ರಕ್ತ ಸಂಗ್ರಹಿಸಿದ್ದು ಮಾತ್ರವಲ್ಲದೆ ಸಾಮೂಹಿಕ ಸತ್ಯನಾರಾಯಣ ಪೂಜೆಯನ್ನು ನಡೆಸಲಾಗಿದೆ. ಈ ಘಟಕವು  ಮಲ್ಪೆಯಲ್ಲಿ ನಡೆದ ಕ್ರೀಡಾ ಸಂಗಮದಲ್ಲಿ ಭಾಗವಹಿಸಿದ್ದಾರೆ. 2015ರ ಸಾಲಿನಲ್ಲಿ 537 ಮಣೆಪಾಲ ಆರೋಗ್ಯ ಸುರಕ್ಷಾ ಕಾರ್ಡುಗಳನ್ನು  ವಿತರಿಸಲಾಗಿದೆ.

15.  ದೊಡ್ಡಣಗುಡ್ಡೆ ಘಟಕ :-  ಘಟಕ ವ್ಯಾಪ್ತಿಯಲ್ಲಿ 4 ಶಿಬಿರವನ್ನು ಆಯೋಜಿಸಿ 453 ಯೂನಿಟ್ ರಕ್ತ ಸಂಗ್ರಹಿಸಿ ಮನುಕುಲದ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಕ್ರೀಡಾ ಸಂಗಮದಲ್ಲಿ ಎಲ್ಲಾ ಕ್ರೀಡೆಗಳಲ್ಲಿ ಭಾಗವಹಿಸಿ 2 ಪದಕಗಳನ್ನು ಪಡೆದಿರುತ್ತಾರೆ. 2015ರ ಸಾಲಿನಲ್ಲಿ 583 ಮಣೆಪಾಲ ಆರೋಗ್ಯ ಸುರಕ್ಷಾ ಕಾರ್ಡುಗಳನ್ನು ಎಲ್ಲಾ ವಿತರಿಸಲಾಗಿದೆ. ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಮೂರು ವಿಭಾಗಗಳಲ್ಲಿ ಭಾಗವಹಿಸಿ, ಜನಮೆಚ್ಚುಗೆಯ ಕಾರ್ಯಕ್ರಮವನ್ನು ನೀಡಿರುತ್ತಾರೆ.

16.  ಕೋಡಿಬೆಂಗ್ರೆ ಘಟಕ:-  ಜಿಲ್ಲೆಯಲ್ಲಿಯೇ ಅತಿ ಚಿಕ್ಕ ಘಟಕವೆನಿಸಿಕೊಂಡ ಈ ಘಟಕವು 2 ರಕ್ತದಾನ ಶಿಬಿರದ ಮೂಲಕ 95 ಯೂನಿಟ್ ರಕ್ತ ಸಂಗ್ರಹಿಸಿದೆ ಮತ್ತು ಕ್ರೀಡಾ ಸಂಗಮದಲ್ಲಿ ಎಲ್ಲಾ ಕ್ರೀಡೆಗಳಲ್ಲಿ ಭಾಗವಹಿಸಿದ್ದಾರೆ. ಗ್ರಾಮದಲ್ಲಿ ಪ್ರತಿಭಾನ್ವಿತ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ. ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಗೌರವ ಧನ ನೀಡಲಾಗಿದೆ. ಸಾಂಸ್ಕøತಿಕ ಕಾರ್ಯಕ್ರಮದಲ್ಲಿ 4 ವಿಭಾಗಗಳಲ್ಲಿ ಭಾಗವಹಿಸಿದ್ದಾರೆ. 2015ರ ಸಾಲಿನಲ್ಲಿ 185 ಮಣೆಪಾಲ ಆರೋಗ್ಯ ಸುರಕ್ಷಾ ಕಾರ್ಡುಗಳನ್ನು ವಿತರಿಸಲಾಗಿದೆ.

17.  ಪಡುತೋನ್ಸೆ ಬೆಂಗ್ರೆ ಘಟಕ:- ಈ ಘಟಕವು ಸಣ್ಣ ಪ್ರಮಾಣದ ರಕ್ತದಾನ ಶಿಬಿರವನ್ನು ಕೆ.ಎಂ.ಸಿ.ಯಲ್ಲಿ ನಡೆಸಿದೆ. ಹಾಗೂ ಸಂಘದ ಸದಸ್ಯರು ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. 2015ರ ಸಾಲಿನಲ್ಲಿ 103 ಮಣೆಪಾಲ ಆರೋಗ್ಯ ಸುರಕ್ಷಾ ಕಾರ್ಡುಗಳನ್ನು ವಿತರಿಸಲಾಗಿದೆ.

18.  ಉದ್ಯಾವರ ಘಟಕ :- ಈ ಘಟಕವು ಒಂದು ರಕ್ತದಾನ ಶಿಬಿರದ ಮೂಲಕ  148 ಯೂನಿಟ್ ರಕ್ತ ಸಂಗ್ರಹಿಸಿದೆ. ಕ್ರೀಡಾ ಸಂಗಮದಲ್ಲಿ ಎಲ್ಲಾ ಕ್ರೀಡೆಗಳಲ್ಲಿ ಭಾಗವಹಿಸಿ ವಾಲಿಬಾಲ್ ಹಾಗೂ ಮಹಿಳೆಯರ ಹಗ್ಗ ಜಗ್ಗಾಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಮತ್ತು ಬಾಲಕಿಯರ ಜೂನಿಯಾರ್ ವಿಭಾಗದಲ್ಲಿ ಮಹಿಮಾ ಎಂಬವರು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. 2015ರ ಸಾಲಿನಲ್ಲಿ 1002 ಮಣೆಪಾಲ ಆರೋಗ್ಯ ಸುರಕ್ಷಾ ಕಾರ್ಡುಗಳನ್ನು ವಿತರಿಸಲಾಗಿದೆ.

19.  ಕಲ್ಯಾಣಪುರ ಘಟಕ :- ಒಂದು ರಕ್ತದಾನ ಶಿಬಿರದ ಮೂಲಕ  141 ಯೂನಿಟ್ ರಕ್ತವನ್ನು ನೀಡುವ ಮೂಲಕ ಜಿಲ್ಲೆಯಲ್ಲಿ ರಕ್ತದಾನಿಗಳ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಪ್ರಧಾನ ಪಾತ್ರವಹಿಸಿದ್ದಾರೆ. ತಮ್ಮ ಘಟಕದ ನಿಕಟ ಪೂರ್ವ ಅಧ್ಯಕ್ಷರ ಪತ್ನಿಗೆ ವೈದ್ಯಕೀಯ ಚಿಕಿತ್ಸೆಗೆ ಆರ್ಥಿಕ ಸಹಾಯವನ್ನು ನೀಡಿದ್ದಾರೆ. ಕ್ರೀಡಾ ಸಂಗಮದಲ್ಲಿ 2 ಪದಕಗಳನ್ನು ಪಡೆದಿರುತ್ತಾರೆ. ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಮೂರು ವಿಭಾಗಗಳಲ್ಲಿ ಭಾಗವಹಿಸಿದ್ದಾರೆ. 2015ರ ಸಾಲಿನಲ್ಲಿ 524 ಮಣೆಪಾಲ ಆರೋಗ್ಯ ಸುರಕ್ಷಾ ಕಾರ್ಡುಗಳನ್ನು ಎಲ್ಲಾ ವರ್ಗದ ಸಮಾಜ ಭಾಂಧವರಿಗೆ ವಿತರಿಸಲಾಗಿದೆ.


🕔16 June 2016

2015-ರ-ಸಾಲಿನಲ್ಲಿ-ಘಟಕಗಳ-ಕಾರ್ಯಕ್ರಮಗಳ-ವಿವರ--1:

2015 ರ ಸಾಲಿನಲ್ಲಿ ಮೊಗವೀರ ಯುವ ಸಂಘಟನೆ (ರಿ) ಉಡುಪಿ ಜಿಲ್ಲೆ ಇದರ  ವ್ಯಾಪ್ತಿಯಲ್ಲಿ ಬರುವ ಎಲ್ಲಾ ಘಟಕಗಳ ವೈಭವಯುತ ಕಾರ್ಯವೈಖರಿಗಳ ನೋಟ.

1.ಮಲ್ಪೆ ಘಟಕ :- ಈ ಘಟಕವು ಮಹಿಳಾ ಘಟಕದೊಂದಿಗೆ ಕೂಡಿಕೊಂಡು ದಿನಾಂಕ 19-04-2015ರಂದು ಜಿಲ್ಲಾ ಮಟ್ಟದ ಮೊಗವೀರ ಕ್ರೀಡಾ ಕೂಟವನ್ನು ಆಯೋಜಿಸಲು ಸೂಚಿಸಿದಂತೆ, ಕ್ರೀಡಾಕೂಟವನ್ನು ಮಲ್ಪೆಯಲ್ಲಿ ಅತ್ಯಂತ ಂiÀiಶಸ್ವಿಯಾಗಿ ನಿರ್ವಹಿಸಿದೆ.  ಹಾಗೂ ಸಾರ್ವಜನಿಕರಿಗೆ ಚಿತ್ರಕಲಾ ಸ್ಪರ್ಧೆಯನ್ನು ಮತ್ತು ಮರಳು ಶಿಲ್ಪವನ್ನು ಮಲ್ಪೆ ಬೀಚ್‍ನಲ್ಲಿ ಆಯೋಜಿಸಿದ್ದು, ವಿದ್ಯಾರ್ಥಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುತ್ತಾರೆ.  ಭಾಗವಹಿಸಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಗಿರುತ್ತದೆ. ಈ ಕ್ರೀಡಾಕೂಟದ ಸಮಾರೋಪ ಸಮಾರಂಭವು ಅದ್ದೂರಿಯಾಗಿ ಮಲ್ಪೆ ಬೀಚ್‍ನಲ್ಲಿ ನಡೆಯಿತು. ಅಲ್ಲದೆ ಪ್ರತೀ ವರ್ಷದಂತೆ ಈ ವರ್ಷವೂ ವರಮಹಾಲಕ್ಷ್ಮೀ ಪೂಜೆ  ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಕ್ರೀಡಾಕೂಟ ಹಾಗೂ ಕೋಟೇಶ್ವರದಲ್ಲಿ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ನಾಲ್ಕು ವಿಭಾಗಗಳಲ್ಲಿ ಭಾಗವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮೊಗವೀರ ಯುವ ಸಂಘಟನೆಯ ನೇತೃತ್ವದಲ್ಲಿ ನೇಪಾಳದ ಭೂಕಂಪ ಸಂತೃಸ್ಥರಿಗೆ ಸಂಘಟನೆಯ ಸದಸ್ಯರಿಂದ ಹಾಗೂ ಸಾರ್ವಜನಿಕರಿಂದ ಪರಿಹಾರ ನಿಧಿಯನ್ನು ಸಂಗ್ರಹಿಸಿ ಅದನ್ನು ಉಡುಪಿಯ ಜಿಲ್ಲಾಧಿಕಾರಿಯವರ ಮೂಲಕ ಕೊಡ ಮಾಡಿರುತ್ತಾರೆ. 2015ರ ಸಾಲಿನಲ್ಲಿ 722 ಮಣೆಪಾಲ ಆರೋಗ್ಯ ಸುರಕ್ಷಾ ಕಾರ್ಡುಗಳನ್ನು ಎಲ್ಲಾ ವರ್ಗದ ಸಮಾಜ ಭಾಂಧವರಿಗೆ ವಿತರಿಸಲಾಗಿದೆ.

2. ಕೋಟೇಶ್ವರ ಘಟಕ :-  ಈ ಘಟಕವು ಮಹಿಳಾ ಘಟಕದೊಂದಿಗೆ ಕೂಡಿಕೊಂಡು  ದಿನಾಂಕ: 24-10-2015 ರಂದು  ಸಾಂಸ್ಕøತಿಕ ಕಾರ್ಯಕ್ರಮವನ್ನು ಆಯೋಜಿಸಿದ್ದುಎಲ್ಲರ ಮೆಚ್ಚುಗೆಗೆ ಪಾತ್ರರಗಿದ್ದಾರೆ. ಅಲ್ಲದೆ  ಈ ಕಾರ್ಯಕ್ರಮದಲ್ಲಿ ರನ್ನರ್ಸ್ ಅಪ್ ಪ್ರಶಸ್ತಿಯನ್ನು ಪಡೆದಿದ್ದಾರೆ. 2 ರಕ್ತದಾನ ಶಿಬಿರದÀ ಮೂಲಕ 482 ರಕ್ತದಾನಿಗಳನ್ನು ಜಿಲ್ಲೆಗೆ ನೀಡಿದೆ.  ಮಲ್ಪೆಯಲ್ಲಿ ನಡೆದ ಕ್ರೀಡಾ ಸಂಗಮದಲ್ಲಿ ಅಧಿಕ ಸಂಖ್ಯೆಯ ಕ್ರೀಡಾಪಟುಗಳೊಂದಿಗೆ ಭಾಗವಹಿಸಿ 10 ಪದಕಗಳನ್ನು ಪಡೆದಿರುತ್ತಾರೆ.  2015ರ ಸಾಲಿನಲ್ಲಿ 1081 ಮಣೆಪಾಲ ಆರೋಗ್ಯ ಸುರಕ್ಷಾ ಕಾರ್ಡುಗಳನ್ನು ವಿತರಿಸಲಾಗಿದೆ. ಸ್ಥಳೀಯ ಸಮಸ್ಯೆಗಳ ಬಗ್ಗೆ ಗುರಿಕಾರರು ಮತ್ತು ಸಮಾಜದ ಮುಖಂಡರೊಂದಿಗೆ ಸಭೆ ನಡೆಸಿ ಪರಿಹಾರ ಕಂಡುಕೊಂಡಿದ್ದಾರೆ. ಎಸ್‍ಎಸ್‍ಎಲ್‍ಸಿ. ವಿದ್ಯಾರ್ಥಿಗಳಿಗೆ ಪರೀಕ್ಷಾ ತರಬೇತಿ ಶಿಬಿರವನಮಹೋತ್ಸವ ಕಾರ್ಯಕ್ರಮ, ಮನೆ ಮನೆ ಸಮೀಕ್ಷೆಸಾಮೂಹಿಕ ವಿವಾಹದಲ್ಲಿ 4 ಜೋಡಿಗಳನ್ನು ನೀಡಿರುತ್ತಾರೆ.  ಮಹಾಸಭೆಯಲ್ಲಿ ನಮ್ಮ ಸಮಾಜದ ಸ್ಥಳೀಯ ಜನ ಪ್ರತಿನಿಧಿಗಳನ್ನು ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಂಡಿರುತ್ತಾರೆ. 

3. ಬೆಳ್ಳಂಪಳ್ಳಿ ಘಟಕ  :- ಈ ಘಟಕವು ಗತ ವರ್ಷದಲ್ಲಿ ನಿರಂತರವಾಗಿ ರಕ್ತದಾನ ಮಾಡುವ ಮೂಲಕ  ಹಾಗೂ ರಕ್ತದಾನಿಗಳನ್ನು ಒದಗಿಸುವ ಮೂಲಕ 1064 ಯೂನಿಟ್ ಗಳಷ್ಟು ರಕ್ತ ಸಂಗ್ರಹಿಸಿದೆ.  ಉಡುಪಿ ಜಿಲ್ಲೆಯು ರಕ್ತದಾನಿಗಳ ಜಿಲ್ಲೆ ಎಂದು ಘೋಷಿಸುವಂತಾಗಲು ತಮ್ಮ ಸೇವೆಯನ್ನು ನೀಡಿದೆ.  ಕ್ರೀಡಾ ಸಂಗಮದಲ್ಲಿ ಎಲ್ಲಾ ಕ್ರೀಡೆಗಳಲ್ಲಿ ಭಾಗವಹಿಸಿದ್ದಾರೆ. ವನಮಹೋತ್ಸವ ಕಾರ್ಯಕ್ರಮ ಮತ್ತು ಸ್ವಚ್ಚತಾ ಆಂದೋಲನಾ ಕಾರ್ಯಕ್ರಮವನ್ನು ತಮ್ಮ ಘಟಕ ವ್ಯಾಪ್ತಿಯಲ್ಲಿ ನಡೆಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಸ್ಥಳೀಯ ಸಮಸ್ಯೆಗಳ ಬಗ್ಗೆ ಗುರಿಕಾರರು ಮತ್ತು ಸಮಾಜದ ಮುಖಂಡರೊಂದಿಗೆ ಸಭೆ ನಡೆಸಿ ಪರಿಹಾರ ಕಂಡುಕೊಂಡಿದ್ದಾರೆ. 2015ರ ಸಾಲಿನಲ್ಲಿ 2018 ಮಣೆಪಾಲ ಆರೋಗ್ಯ ಸುರಕ್ಷಾ ಕಾರ್ಡುಗಳನ್ನು ವಿತರಿಸಲಾಗಿದೆ.  ಕೋಟೇಶ್ವರದಲ್ಲಿ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ 3  ವಿಭಾಗಗಳಲ್ಲಿ ಭಾಗವಹಿಸಿದ್ದಾರೆ.

4. ಕುಂದಾಪುರ ಘಟಕ :- ಈ ಘಟಕವು 2 ರಕ್ತದಾನ ಶಿಬಿರಗಳ ಮೂಲಕ 308 ಯೂನಿಟ್ ರಕ್ತ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ. ಮತ್ತು ಆರೋಗ್ಯ ತಪಸಣಾ ಶಿಬಿರವನ್ನು ನಡೆಸಲಾಗಿದೆ. ಈ ಘಟಕದ ವತಿಯಿಂದ ಸ್ವಚ್ಛಾತಾ ಆಂದೋಲನವನ್ನು ಕುಂದಾಪುರದ ಸರಕಾರಿ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ.  ಕ್ರೀಡಾ ಸಂಗಮದಲ್ಲಿ ಭಾಗವಹಿಸಿ ನಾಲ್ಕು ಪದಕಗಳನ್ನು ಪಡೆದಿರುತ್ತಾರೆ.  ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ನಾಲ್ಕು ವಿಭಾಗಗಳಲ್ಲಿ ಭಾಗವಹಿಸಿ ಮೆಚ್ಚುಗೆಗೆ ಪಾತ್ರರಗಿದ್ದಾರೆ. 2015ರ ಸಾಲಿನಲ್ಲಿ 662 ಮಣೆಪಾಲ ಆರೋಗ್ಯ ಸುರಕ್ಷಾ ಕಾರ್ಡುಗಳನ್ನು ವಿತರಿಸಲಾಗಿದೆ.

5.  ಹಾಲಾಡಿ ಘಟಕ :- ಜಿಲ್ಲೆಯ ಅತ್ಯಂತ ಗ್ರಾಮೀಣ ಪ್ರದೇಶಗಳನ್ನು ಹೊಂದಿರುವ ಈ ಘಟಕ ವ್ಯಾಪ್ತಿಯಲ್ಲಿ 6 ರಕ್ತದಾನ ಶಿಬಿರಗಳ ಮೂಲಕ 819 ಯೂನಿಟ್ ರಕ್ತ ಸಂಗ್ರಹಿಸಿದೆ. ಉಡುಪಿ ಜಿಲ್ಲೆಯು ರಕ್ತದಾನಿಗಳ ಜಿಲ್ಲೆ ಎಂದು ಘೋಷಿಸುವಂತಾಗಲು ತಮ್ಮ ಸೇವೆಯನ್ನು ನೀಡಿದೆ. ಅಲ್ಲದೆ ಕ್ರೀಡಾ ಸಂಗಮದಲ್ಲಿ ಭಾಗವಹಿಸಿ 2 ಪದಕಗಳನ್ನು ಪಡೆದಿರುತ್ತಾರೆ. ಸ್ಥಳೀಯ ಸಮಸ್ಯೆಗಳ ಬಗ್ಗೆ ಗುರಿಕಾರರು ಮತ್ತು ಸಮಾಜದ ಮುಖಂಡರೊಂದಿಗೆ ಸಭೆ ನಡೆಸಿ ಪರಿಹಾರ ಕಂಡುಕೊಂಡಿದ್ದಾರೆ. 2015ರ ಸಾಲಿನಲ್ಲಿ 482 ಮಣೆಪಾಲ ಆರೋಗ್ಯ ಸುರಕ್ಷಾ ಕಾರ್ಡುಗಳನ್ನು ವಿತರಿಸಲಾಗಿದೆ.  ಸಾಂಸ್ಕøತಿಕ ಕಾರ್ಯಕ್ರಮದಲ್ಲಿ 4 ವಿಭಾಗಗಳಲ್ಲಿ ಭಾಗವಹಿಸಿ ಜನಮೆಚ್ಚುಗೆಯ ಕಾರ್ಯಕ್ರಮವನ್ನು ನೀಡಿರುತ್ತಾರೆ.

6.  ಸಾಲಿಗ್ರಾಮ ಘಟಕ:- ಘಟಕವು ಮಹಿಳಾ ಘಟಕದೊಂದಿಗೆ, ಅತ್ಯುತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, 1 ರಕ್ತದಾನ ಶಿಬಿರ ನಡೆಸುವ ಮೂಲಕ 246 ಯೂನಿಟ್ ರಕ್ತ ಸಂಗ್ರಹಿಸಿದೆ. ಈ ಘಟಕವು ನೂತನ ಪದ ಪ್ರಧಾನ ಮತ್ತು ವನಮಹೋತ್ಸವ ಕಾರ್ಯಕ್ರಮವನ್ನು ನಡೆಸಲಾಗಿದೆ. ಹಾಗೂ ಕ್ರೀಡಾ ಸಂಗಮದಲ್ಲಿ ತಮ್ಮ ಘಟಕದ ವತಿಯಿಂದ 45 ಸದಸ್ಯರು ಭಾಗವಹಿಸಿದ್ದಾರೆ. ಪ್ರತಿಷ್ಠಿತ ಪಥಸಂಚಲನದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಕೋಟೇಶ್ವರದಲ್ಲಿ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ನಾಲ್ಕು ವಿಭಾಗಗಳಲ್ಲಿ ಭಾಗವಹಿಸಿ ಜನಮೆಚ್ಚುಗೆಯ ಕಾರ್ಯಕ್ರಮವನ್ನು ನೀಡಿರುತ್ತಾರೆ. 2015ರ ಸಾಲಿನಲ್ಲಿ 1682 ಮಣೆಪಾಲ ಆರೋಗ್ಯ ಸುರಕ್ಷಾ ಕಾರ್ಡುಗಳನ್ನು ವಿತರಿಸಲಾಗಿದೆ. ಸ್ಥಳೀಯ ಸಮಸ್ಯೆಗಳ ಬಗ್ಗೆ ಗುರಿಕಾರರು ಮತ್ತು ಸಮಾಜದ ಮುಖಂಡರೊಂದಿಗೆ ಸಭೆ ನಡೆಸಿ ಪರಿಹಾರ ಕಂಡುಕೊಂಡಿದ್ದಾರೆ. 

7. ಕೋಟ ಘಟಕ  :- ಅತಿ ಹೆಚ್ಚು ಜಾತಿ ಭಾಂದವರನ್ನು ಹೊಂದಿದ ಈ ಘಟಕ ಮಹಿಳಾ ಘಟಕದ ಜೊತೆ ಜಂಟಿಯಾಗಿ ರಕ್ತದಾನ  ಶಿಬಿರಗಳಿಂದ 336 ರಕ್ತದಾನಿಗಳನ್ನು ಸೃಷ್ಟಿಸಿದೆ. ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತಯಾರಿಯ ಕುರಿತು ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡುವ ಕಾರ್ಯಕ್ರಮವನ್ನು ನಡೆಸಿದೆ. ಸಾಂಸ್ಕøತಿಕ ಕಾರ್ಯಕ್ರಮದಲ್ಲಿ 50 ಸ್ಪರ್ಧಾಳುಗಳು ಭಾಗವಹಿಸಿರುತ್ತದೆ. ಪ್ರತಿಷ್ಠಿತ ಪಥಸಂಚಲನದಲ್ಲಿ ತೃತೀಯ ಸ್ಥಾನವನ್ನು ಪಡೆದಿದ್ದಾರೆ. ಸ್ಥಳೀಯ ಸಮಸ್ಯೆಗಳ ಬಗ್ಗೆ ಗುರಿಕಾರರು ಮತ್ತು ಸಮಾಜದ ಮುಖಂಡರೊಂದಿಗೆ ಸಭೆ ನಡೆಸಿ ಪರಿಹಾರ ಕಂಡುಕೊಂಡಿದ್ದಾರೆ.  ಅಲ್ಲದೆ ಸಿನಿಮೇತರ ವಿಭಾಗದಲ್ಲಿ ದ್ವಿತೀಯ ಹಾಗೂ ಪ್ರಹಸನದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. 2015ರ ಸಾಲಿನಲ್ಲಿ 2663 ಮಣೆಪಾಲ ಆರೋಗ್ಯ ಸುರಕ್ಷಾ ಕಾರ್ಡುಗಳನ್ನು ವಿತರಿಸಲಾಗಿದೆ.

8.  ಬೈಂದೂರು ಘಟಕ  :-  ಜಿಲ್ಲೆಯ ಅತಿ ದೂರದ ಘಟಕವಾದ ಬೈಂದೂರು-ಶಿರೂರು ಘಟಕವು ಈ ವರ್ಷವೂ ಮಲ್ಪೆಯಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಅಧಿಕ ಸಂಖ್ಯೆಯ ಸ್ಪರ್ದಾಳುಗಳು ಹಾಗೂ ಸದಸ್ಯರೊಂದಿಗೆ ಭಾಗವಹಿಸಿಅನೇಕ ಪ್ರಶಸ್ತಿಯನ್ನು ಬಾಚಿಕೂಂಡು ಸಮಗ್ರ ಚಾಂಪಿಯನ್ ಆಗಿ ಹೊರಹೂಮ್ಮಿದೆ. ಅಲ್ಲದೆ ಪ್ರತಿಷ್ಠಿತ ಪಥಸಂಚಲನದಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. 2015ರ ಸಾಲಿನಲ್ಲಿ 314 ಮಣೆಪಾಲ ಆರೋಗ್ಯ ಸುರಕ್ಷಾ ಕಾರ್ಡುಗಳನ್ನು ವಿತರಿಸಲಾಗಿದೆ. ಸಾಂಸ್ಕøತಿಕ ಕಾರ್ಯಕ್ರಮದಲ್ಲಿ 4 ವಿಭಾಗಗಳಲ್ಲಿ ಭಾಗವಹಿಸಿ ತಮ್ಮ ಕಲೆಯನ್ನು ಪ್ರದೇಶಿಸಿರುತ್ತಾರೆ. ಮತ್ತು  2 ರಕ್ತದಾನ ಶಿಬಿರಗಳ ಮೂಲಕ 237 ಯೂನಿಟ್ ರಕ್ತ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ.

9.  ಹೆಮ್ಮಾಡಿ ಘಟಕ  :- ವಿಶಾಲ ವ್ಯಾಪ್ತಿಯನ್ನು ಹೊಂದಿದ ಈ ಘಟಕವು, 3 ರಕ್ತದಾನ ಶಿಬಿರವನ್ನು ಹಮ್ಮಿಕೊಂಡು 435 ಯೂನಿಟ್ ರಕ್ತದಾನ ಮಾಡಿ ಮೆರೆದಿದೆ. ಮತ್ತು ಆರೋಗ್ಯ ತಪಸಣಾ ಶಿಬಿರವನ್ನು ನಡೆಸಲಾಗಿದೆ. ಕ್ರೀಡಾ ಸಂಗಮದಲ್ಲಿ 29 ಕ್ರೀಡಾಪಟುಗಳು ಭಾಗವಹಿಸಿದ್ದಾg.É ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ನಿಮ್ಮ ಆಯ್ಕೆ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. 2015ರ ಸಾಲಿನಲ್ಲಿ 542 ಮಣೆಪಾಲ ಆರೋಗ್ಯ ಸುರಕ್ಷಾ ಕಾರ್ಡುಗಳನ್ನು ವಿತರಿಸಲಾಗಿದೆ.

10.  ಬ್ರಹ್ಮಾವರ ಘಟಕ  :- ಈ ಘಟಕವು ಎರಡು  ರಕ್ತದಾನ ಶಿಬಿರಗಳ ಮೂಲಕ 302 ಯೂನಿಟ್ ರಕ್ತ ನೀಡಿ ಹಲವು ಜೀವಿಗಳಿಗೆ ಆಸರೆಯಾದರು ಹಾಗೂ ಕ್ರೀಡಾ ಸಂಗಮದಲ್ಲಿ ತಮ್ಮ ಘಟಕದ ವತಿಯಿಂದ 33 ಕ್ರೀಡಾಟುಗಳು ಹಾಗೂ  ಸದಸ್ಯರೊಂದಿಗೆ ಭಾಗವಹಿಸಿ, 7 ಪದಕಗಳನ್ನು ಪಡೆದಿರುತ್ತಾರೆ. ಜೂನಿಯಾರ್ ವಿಭಾಗದಲ್ಲಿ ಸುಶಾಂತ್ ಎಂಬವರು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. 2015ರ ಸಾಲಿನಲ್ಲಿ 950 ಮಣೆಪಾಲ ಆರೋಗ್ಯ ಸುರಕ್ಷಾ ಕಾರ್ಡುಗಳನ್ನು ವಿತರಿಸಲಾಗಿದೆ. ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಒಂದು ವಿಭಾಗದಲ್ಲಿ ಭಾಗವಹಿಸಿದ್ದಾರೆ.


🕔16 June 2016