ಮೊಗವೀರ ಸಮಾಜದಲ್ಲಿ ’ ಬಳಿ ’ ಅಥವಾ ’ ಬರಿ ’

ದ.ಕ. ಉಡುಪಿ ಜಿಲ್ಲೆಯ ದ್ರಾವಿಡ ಸಂಸ್ಕೃತಿಗೆ ಸೇರಿದ ಬಿಲ್ಲವ, ತುಳುವ, ಕುಡುವ, ನಾಡವ ಮೊದಲಾದವರಲ್ಲಿ ಇರುವಂತೆ ಮೊಗವೀರ ಸಮಾಜದಲ್ಲಿ ’ಕುಲ’ ಅಥವಾ ’ಗೋತ್ರ’ ಎಂಬ ಹೆಸರು ಕೇಳಿರುತ್ತಿರುತ್ತೇವೆ.ಈ ಕುಲಗಳಿಗೆ ನಾಡಿನ ಬಾಷೆಯಲ್ಲಿ ’ಬರಿ’ ಅಥವಾ ’ಬಳಿ’ ಎನ್ನುತ್ತಾರೆ.

’ಬಳಿ’ ಎಂದರೆ ವಂಶ ಅಥವಾ ಗೋತ್ರವೆಂದು ಅರ್ಥ. ಹಾಗೆಯೇ ’ಬರಿ’ ಎಂಬ ಪದವು ಬಡಿ, ಬದಿ, ಪಕ್ಷ, ಮಗ್ಗಲು ಎಂಬರ್ಥವನ್ನಿತ್ತು ಯಾವ ವಂಶಕ್ಕೆ ಸೇರಿದ್ದು ಎಂಬ ಸೂಚಿತಾರ್ಥವನ್ನೀಯುತ್ತದೆ. (Kittel Dictionary Page 1082 & 1098 ) ಒಂದೊಂದು ಸಮಾಜದಲ್ಲಿ ಅನೇಕ ಕುಟುಂಬಗಳಿರುವುದರಿಂದ ಈ ಕುಟುಂಬಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ಗುರುತಿಸಲು ಬೇರೆ ಬೇರೆ ಹೆಸರಿನ ಅಗತ್ಯತೆ ಉಂಟಾಗಿ ಕುಲ-ಗೋತ್ರದ ಹೆಸರಿನ ಉಗಮಕ್ಕೆ ಕಾರಣವಾಗಿದೆ ಎಂಬುದರಲ್ಲಿ ಸತ್ಯತೆ ಇದೆ ಎನ್ನಬಹುದು.

ಇಂದು ಮೊಗವೀರ ಸಮಾಜದಲ್ಲಿ ಅನೇಕ ’ಬಳಿ’ಗಳ ನಾಮಧೇಯ ಹೊಂದಿದ ಕುಟುಂಬಗಳನ್ನು ಜಿಲ್ಲೆಯಲ್ಲಿ ಕಾಣಬಹುದು. ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೇನೆಂದರೆ ಒಂದು ಬಳಿಗೆ ಸೇರಿದವರೆಲ್ಲರೂ ಒಂದೇ ರಕ್ತದ ಕುಟುಂಬದವರಾಗಿರುತ್ತಾರೆ ಎಂಬುದು ವೈಜ್ಞಾನಿಕವಾಗಿ ನಡೆದ ಹಲವು ಸಂಶೋಧನೆಗಳು ಕೂಡ ಇದಕ್ಕೆ ಪುಷ್ಟಿ ನೀಡುತ್ತವೆ. ಸಂಸ್ಕೃತಿಯೊಳಗೆ ಕೆಲವು ಉಪ-ಸಂಸ್ಕೃತಿ ಇದ್ದಂತೆ, ಉಪ-ಸಂಸ್ಕೃತಿಯೊಳಗೆ ಹಲವು ಜಾತಿಗಳಿರುವಂತೆ ; ಹಲವು ಜಾತಿಗಳೊಳಗೆ ಅನೇಕ ಕುಟುಂಬಳಿದ್ದು, ಈ ಅನೇಕ ಕುಟುಂಬದಲ್ಲಿ ಬೇರೆ ಬೇರೆ ಕುಟುಂಬಕ್ಕೊಂದರಂತೆ ಬಳಿ ಗಳಿರುವುದು ಸರ್ವೇ ಸಾಮಾನ್ಯವಾಗಿ ಕೇಳುವ ಸಂಗತಿ. ಜನರು ತಮ್ಮ ಬದುಕಿನ ನಿರ್ವಹಣೆಯಲ್ಲಿ ವಿವಿಧ ಉದ್ಯೋಗ, ವೃತ್ತಿ, ಕಸುಬುಗಳಿಗನುಗುಣವಾಗಿ ಹುಟ್ಟಿಕೊಂಡ ಜಾತಿ ವ್ಯವಸ್ಥೆಯಲ್ಲಿ ಮೀನುಗಾರಿಕೆ ವೃತ್ತಿಯನ್ನು ಬದುಕಿನಾಸರೆಯಾಗಿ ಸ್ವೀಕರಿಸಿದ ದ.ಕ., ಉಡುಪಿ ಜಿಲ್ಲೆಯ ಮೊಗವೀರರಲ್ಲೂ ಇತರ ಜಾತಿಗಳಲ್ಲಿ ಇರುವಂತೆ ಅನೇಕ ’ಬಳಿ’ ಪ್ರಚಲಿತಲ್ಲಿದೆ-


1. ಕಾಂಚನ್ನಾಯ- ಕಾಂಚನ್
2. ಸಿರಿಯನ್ನಾಯ- ಶ್ರೀಯಾನ್
3. ದೋರಣ್ಣಾಯಂ - ಸುವರ್ಣ
4. ಕುಂದಲಾಯ- ಕುಂದರ್
5. ಮಂದಣ್ಣಾಯ - ಮೆಂಡನ್
6. ಪುತ್ರನ್ನಾಯ - ಪುತ್ರನ್
7. ಸಾಲಿಯನ್ನಾಯ - ಸಾಲಿಯಾನ್
8. ಬಂಗಾರಣ್ಣಾಯ - ಬಂಗೇರ (ಬಡಲಾಗಿ ಗಂಗರ)
9. ತಿಂಗಳನ್ನಾಯ - ತಿಂಗಳಾಯ
10.ತೆಳಂಬನ್ನಾಯ - ತೋಳಾರ್
11.ಕರ್ಬುರನ್ನಾಯ - ಕರ್ಕೇರ

ಮೊಗವೀರ ಸಮಾಜದಲ್ಲಿ ಕಂಡು ಬರುವ ಕೌಟುಂಬಿಕ ಹೆಸರುಗಳಾದ ಮೊಗೇರ, ಮರಕಾಲ, ಬೋವಿ, ಬಂಗೇರ, ಬೆನ್ನು, ಕೋಟಿಯಾನ್, ಸಾಲಿಯಾನ್, ಪುತ್ರನ್, ಸುವರ್ಣ, ಕರ್ಕೇರ, ಕುಂದರ್, ಕಾಂಚನ್, ತೋಳಾರ್, ಅಮೀನ್, ಶ್ರೀಯಾನ್, ಮೆಂಡನ್ ಮೊದಲಾದವುಗಳು ಬಳಿಗಳ ಆಧಾರದಲ್ಲಿ ಕರೆಯಲ್ಪಡುವ ಹೆಸರು (sur name)ಗಳಾಗಿವೆ ಎಂಬುದು ಸ್ವಷ್ಟವಾಗಿದೆ.

ದೊರೆತ ಮಾಹಿತಿಯ ಪ್ರಕಾರ ಬಳಿಗಳು ಈ ಕೆಳಗಿನಂತಿವೆ :


ಕಾಂಚನ್ ಬಳಿ - ಕಂಚಿನ ಬಳಿ, ಕೌಂಚಿನ ಬಳಿ (ಕಾಡಿ, ಕಾಳಿ)
ಚಂದನ್ ಬಳಿ - ಚಂದಿ ಬಳಿ
ಮೆಂಡನ್ ಬಳಿ - ಶೆಟ್ಟಿ ಬಳಿ
ಸುವರ್ಣ ಬಳಿ - ಹೊನ್ನು ಬಳಿ
ಶ್ರೀಯಾನ್ ಬಳಿ - ಸಿರಿನ್ ಬಳಿ
ಬಂಗೇರ ಬಳಿ - ಗಂಗರ ಬಳಿ, ಗಂಗಸರ
ಪುತ್ರನ್ ಬಳಿ - ಚಿತ್ತಾನ್ ಬಳಿ
ಕುಂದರ್ ಬಳಿ - ಹೊಲಿ ಬಳಿ
ಬನ್ನು - ಬೆನ್ನು ಬಳಿ
ಹಾಲಿನ ಬಳಿ (ತೋಡಾರ)
ಅಮಿನ್ ಬಳಿ
ಕರ್ಕೇರ ಬಳಿ
ಕೋಟ್ಯಾನ್ ಬಳಿ
ತಿಂಗಳಾಯ ಬಳಿ
ತೋಳಾರ್ ಬಳಿ
ಮೈಂದನ್ ಬಳಿ
ಸಾಲಿಯಾನ್ ಬಳಿ
ಗುಜರಾನ್ ಬಳಿ
ಆನೆ ಬಳಿ