Back to homepage

BLOOD DONATION

ಕುಂದಾಫುರ ಘಟಕದ ವತಿಯಿಂದ ದಿನಾಂಕ 13-10-2016ರಂದು ನಡೆದ ರಕ್ತದಾನ ಶಿಭಿರ

ಮೋಗವೀರ ಯುವ ಸಂಘಟನೆ (ರಿ) ಉಡುಪಿ ಜಿಲ್ಲೆ, ಕುಂಂದಾಪುರ ಘಟಕ, ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಫುರ ಮತ್ತು  ಮತ್ತು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ) ಅಂಬಲಪಾಡಿ,ಉಡುಪಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ದಿನಾಂಕ 13-10-2016 ರಂದು ಬೃಹತ್ ರಕ್ತದಾನ ಶಿಬಿರವು ಕುಂದಾಪುರದ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜನಲ್ಲಿ ಜರಗಿತು. ಶಿಬಿರವನ್ನು ಕುಂದಾಪುರ ಎಜುಕೇಷನ್‌ ಸೊಸೈಟಿ ಅಧ್ಯಕ್ಷ ಬಿ. ಎಂ. ಸುಕುಮಾರ ಶೆಟ್ಟಿ ಉದ್ಘಾಟಿಸಿ "ಉಡುಪಿ ರಕ್ತ ದಾನಿಗಳ ಜಿಲ್ಲೆ ಎಂದು ಘೋಷಿಸಲು ಜಿ.ಶಂಕರ್ ಟ್ರಸ್ಟ್‌ ಪ್ರಮುಖ ಕಾರಣವಾಗಿದೆ. ಹಲವು ದಾನಗಳ ಪೈಕಿ ರಕ್ತದಾನ  ಶ್ರೇಷ್ಟವಾಗಿದ್ದು, ಆ ಮೂಲಕ ಇನ್ನೊಬ್ಬರ ಜೀವ ಉಳಿಸುವ ಕೈಂಕರ್ಯದಲ್ಲಿ ಮೊಗವೀರ ಯುವ ಸಂಘಟನೆ, ಜಿ.ಶಂಕರ್ ಟ್ರಸ್ಟ್‌ ಜಿಲ್ಲೆಯಲ್ಲಿ ಕ್ರಾಂತಿಯನ್ನೇ ಮಾಡಿದೆ ಎಂದರು. ಪ್ರಿನ್ಸಿಪಾಲ್‌ ಪ್ರೊ. ದೋಮ ಚಂದ್ರ ಶೇಖರ್‌ ಅದ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಘಟನೆ ಅಧ್ಯಕ್ಷ ಗಣೇಶ್‌ ಕಾಂಚನ್‌ ಜಿಲ್ಲಾ ಮೀನುಗಾರಿಕಾ ಪ್ರಕೋಷ್ಠದ ಅಧ್ಯಕ್ಷ ಸದಾನಂದ ಬಳ್ಕೂರು, ಕುಂದಾಪುರ ಘಟಕದ ಅಧ್ಯಕ್ಷ ಕೆ. ಆರ್ ರಮೇಶ್‌, ಮಣಿಪಾಲ ರಕ್ತನಿಧಿ ವೈದ್ಯೆ ಡಾ. ದೀಪಿಕಾ ಉಪಸ್ಥಿತರಿದ್ದರು. 


ಬ್ರಹ್ಮಾವರ ಘಟಕದ ವತಿಯಿಂದ ದಿನಾಂಕ 21-08-2016ರಂದು ನಡೆದ ರಕ್ತದಾನ ಶಿಭಿರ

ಮೋಗವೀರ ಯುವ ಸಂಘಟನೆ (ರಿ) ಉಡುಪಿ ಜಿಲ್ಲೆ, ಬ್ರಹ್ಮಾವರ ಘಟಕ ಮತ್ತು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ) ಅಂಬಲಪಾಡಿ,ಉಡುಪಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ದಿನಾಂಕ 21-08-2016 ರಂದು ಆದಿತ್ಯವಾರದಂದು ಬೃಹತ್ ರಕ್ತದಾನ ಶಿಬಿರವು ಬ್ರಹ್ಮಾವರದ ರೋಟರಿ ಭವನದಲ್ಲಿ ಜರಗಿತು. ಶಿಬಿರವನ್ನು ನಾಡೋಜ ಡಾ!ಜಿ.ಶಂಕರ್ ರವರು ಉದ್ಘಾಟಿಸಿದರು. ಅತಿಥಿಗಳಾಗಿ ಮೋಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ಗಣೇಶ್ ಕಾಂಚನ್, ಬ್ರಹ್ಮಾವರ ರೋಟರಿ ಅಧ್ಯಕ್ಷ ಅಲ್ವಿನ್ ಅಂದ್ರಾದೆ, ಜಿಲ್ಲಾ ಮೀನುಗಾರಿಕಾ ಪ್ರಕೋಷ್ಠದ ಅಧ್ಯಕ್ಷ ಸದಾನಂದ ಬಳ್ಕೂರು, ಮಾಜಿ ಅಧ್ಯಕ್ಷ ಜಯ ಸಿ.ಕೋಟ್ಯನ್, ಬ್ರಹ್ಮಾವರ ಘಟಕದ ಅಧ್ಯಕ್ಷ ಮಂಜುನಾಥ್ ಸುವರ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಸುವರ್ಣ ಬೈಕಾಡಿ, ಸಿ.ಎ.ಪದ್ಮನಾಭ ಕಾಂಚನ್, ಕಿಟ್ಟಪ್ಪ ಅಮೀನ್, ಬ್ರಹ್ಮಾವರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಯೋಜನಾಧಿಕಾರಿ ಸವಿತಾ ಎರ್ಮಾಳ್, ದಿನೇಶ್ ಅಮೀನ್ ಬ್ರಹ್ಮಾವರ ಮೊದಲಾದವರು ಉಪಸ್ಥಿತರಿದ್ದರು. ಶಿಬಿರದಲ್ಲಿ ಸುಮಾರು 382 ಯೂನಿಟ್ ರಕ್ತ ಸಂಗ್ರಹಿಸಲಾಯಿತುಉಪ್ಪೂರು ಘಟಕದ ವತಿಯಿಂದ ದಿನಾಂಕ 15-08-2016ರಂದು ನಡೆದ ರಕ್ತದಾನ ಶಿಭಿರ

ದಿನಾಂಕ 15.08.2016 ರ ಸೋಮವಾರದಂದು ಸ್ವಾತಂತ್ಯೋತ್ಸವ ದಿನದಂದು ಉಪ್ಪೂರು ಘಟಕದ ವತಿಯಿಂದ ಬೃಹತ್ ರಕ್ತದಾನ ಶಿಬಿರ ನಡೆಯಿತು. ಶಿಬಿರವನ್ನು ಮೊಗವೀರ ಯುವ ಸಂಘಟನೆಯ ಮಾರ್ಗದರ್ಶಕರಾದ ನಾಡೋಜ ಡಾ.ಜಿ.ಶಂಕರ್ ರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಜಿಲ್ಲೆಯಲ್ಲಿ ರಕ್ತದ ಅಭಾವದ ಅನುಭವ ಆಗುವುದು ರಕ್ತದ ಅವಶ್ಯಕತೆ ಇರುವವರಿಗೆ ಮಾತ್ರ. ಹಾಗಾಗಿ ಅಂತಹ ಸಂದರ್ಭಗಳಲ್ಲಿ ತುರ್ತಾಗಿ ರಕ್ತ ನೀಡಲು ಬೇಕಾದ ಒಂದು ತಂಡವನ್ನು ಪ್ರತಿ ಘಟಕದಲ್ಲಿ ಮಾಡಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷರಾದ ಶ್ರೀ ಗಣೇಸ್ ಕಾಂಚನ್, ಮಾಜಿ ಅಧ್ಯಕ್ಷರಾದ ಶ್ರೀ ಜಯ ಸಿ.ಕೋಟ್ಯಾನ್, ರಕ್ತನಿಧಿಯ ಡಾ.ಶಮ್ಮಿ ಶಾಸ್ತ್ರಿ ಪ್ರಧಾನ ಕಾರ್ಯದರ್ಶಿ  ಶ್ರೀ ರಾಘವೇಂದ್ರ ಬೈಕಾಡಿ ಉಪಸ್ಥಿತರಿದ್ದರು. ಉಪ್ಪೂರು ಘಟಕದ ಅಧ್ಯಕ್ಷರಾದ ಶ್ರೀ ರಮೇಶ ಅಧ್ಯಕ್ಷತೆಯನ್ನು ವಹಿಸಿದ್ದರು. ಶಿಬಿರದಲ್ಲಿ 242 ಯೂನಿಟ್ ರಕ್ತದಾನವಾಯಿತು.ಕುಂದಾಪುರ ಘಟಕದ ವತಿಯಿಂದ ದಿನಾಂಕ 30-07-2016ರಂದು ನಡೆದ ರಕ್ತದಾನ ಶಿಭಿರ

ಮೊಗವೀರ ಯುವ ಸಂಘಟನೆ (ರಿ.)ಉಡುಪಿ ಜಿಲ್ಲೆ, ಕುಂದಾಪುರ ಘಟಕ, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.) ಉಡುಪಿ, ಜಿಲ್ಲಾಡಳಿತ ಉಡುಪಿ, ಕೆ.ಎಂ.ಸಿ. ರಕ್ತನಿಧಿ ಮಣಿಪಾಲದ ಮತ್ತು ಭಾರತೀಯ ರಡ್ ಕ್ರಾಸ್ ಕುಂದಾಪುರ ಘಟಕ ಇವರ ಆಶ್ರಯದಲ್ಲಿ ಕುಂದಾಪುರದ ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ಬೃಹತ್‌ ರಕ್ತದಾನ ಶಿಭಿರ ನಡೆಯಿತು. ಈ ಕಾರ್ಯಕ್ರಮವನ್ನು ರಕ್ತದಾನ ಶಿಬಿರಗಳ ಪ್ರೋತ್ಸಾಹಕರಾದ ಡಾ.ಜಿಶಂಕರ್ ರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಜಿಲ್ಲೆಯಲ್ಲಿ ರಕ್ತದ ಅಗತ್ಯತೆ ಕಂಡುಬರುವುದು ರೋಗಿಗಳಿಗೆ. ಆ ನಿಟ್ಟಿನಲ್ಲಿ ಅದರ ನಿವಾರಣೆಗಾಗಿ ಮೊಗವೀರ ಯುವ ಸಂಘಟನೆಯು ಜಿಲ್ಲೆಯಾದ್ಯಂತ ಅನೇಕ ಶಿಬಿರಗಳನ್ನು ಆಯೋಜಿಸುತ್ತಿದೆ. ಇಂತಹ ಎಲ್ಲಾ ಶಿಬಿರಗಳಲ್ಲಿ ಅನೇಕ ರಕ್ತದಾನಿಗಳು ಬಂದು ರಕ್ತದಾನ ಮಾಡುವ ಮೂಲಕ ಈ ಕಾರ್ಯಕ್ರಮಗಳನ್ನು ಒಂದು ಹಬ್ಬದ ರೀತಿಯಲ್ಲಿ ನಡೆಸಿಕೊಡುತ್ತಿದ್ದಾರೆಎಂದು ತಿಳಿಸಿದರು. ಈ ಶಿಬರದಲ್ಲಿ ಮುಖ್ಯ ಅತಿಥಿಗಳಾಗಿ ಭಾರತೀಯ ರೆಡ್ ಕ್ರಾಸ್ ನ ಸಭಾಪತಿ ಶ್ರೀ ಜಯಂತಿ ಶೆಟ್ಟಿ, ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆಯ ಅಧ್ಯಕ್ಷ ಶ್ರೀ ಗಣೇಶ್ ಕಾಂಚನ್, ಉದ್ಯಮಿಗಳಾದ ಕೆ.ಕೆ.ಕಾಂಚನ್, ಡಾ.ಉಮೇಶ್ ಪುತ್ರನ್, ಸದಾನಂದ ಬಳ್ಕೂರು, ಡಾ.ಮನೀಶ್, ಮತ್ತಿತರರು ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆಯನ್ನು ಕುಂದಾಪುರ ಘಟಕಾಧ್ಯಕ್ಷರಾದ ಶ್ರೀ ರಮೇಶ್ ಟಿ. ವಹಿಸಿದ್ದರು.

ಸಾಲಿಗ್ರಾಮ ಘಟಕದ ವತಿಯಿಂದ ದಿನಾಂಕ 24-07-2016ರಂದು ನಡೆದ ರಕ್ತದಾನ ಶಿಭಿರ

ದಿನಾಂಕ 24.07.2016 ರ ಭಾನುವಾರ ಕೋಟೇಶ್ವರದ ಶಾರದಾ ಕಲ್ಯಾಣ ಮಂಟಪದಲ್ಲಿ ಮೊಗವೀರ ಯುವ ಸಂಘಟನೆ(ರಿ.) ಉಡುಪಿ ಜಿಲ್ಲೆ, ಕೋಟೇಶ್ವರ ಘಟಕದ ಆತಿಥ್ಯದಲ್ಲಿ ಬೃಹತ್ ರಕ್ತದಾನ ಶಿಬಿರ ಜರುಗಿತು. ಈ ಕಾರ್ಯಕ್ರಮದ ಜೊತೆಗೆ ರಕ್ತದಾನಿಗಳಿಗೆ ಉಚಿತವಾಗಿ ಸಸಿ ವಿತರಿಸುವ ಮೂಲಕ ವನಮಹೋತ್ಸವವನ್ನು ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಸಸಿಗಳನ್ನು ಕೊಡುಗೆ ನೀಡಿದ ಉದ್ಯಮಿ ಶ್ರೀ ಆನಂದ್ ಸಿ.ಕುಂದರ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ಸಸಿಗಳನ್ನು ವಿತರಿಸಿದರು ಹಾಗೂ ಮೊಗವೀರ ಯುವ ಸಂಘಟನೆಯ ನಿರಂತರ ರಕ್ತದಾನ ಶಿಬಿರ ಮತ್ತು ಸಮಾಜಮುಖಿ ಕಾರ್ಯಕ್ರಮಗಳನ್ನು ಶ್ಲಾಘಿಸಿದರುಮುಖ್ಯ ಅತಿಥಿಗಳಾಗಿ ಭಾಗವಹಿಸಿದ ರಕ್ತದಾನ ಶಿಬಿರಗಳ ಪ್ರೋತ್ಸಾಹಕರಾದ ಡಾ.ಜಿ.ಶಂಕರ್ ರವರು ಮಾತನಾಡುತ್ತಾ, ಮೊಗವೀರ ಯುವ ಸಂಘಟನೆಯ ಈ ಕಾರ್ಯಕ್ರಮಗಳಲ್ಲಿ ಜೊತೆಯಾದ ಎಲ್ಲಾ ರಕ್ತದಾನಿಗಳಿಗೆ ಶುಭ ಕೋರಿದರು ಹಾಗೂ ಇಂತಹ ಕಾರ್ಯಕ್ರಮಗಳನ್ನು ಇನ್ನಷ್ಟು ಮಾಡುವವರನ್ನು ಪ್ರೋತ್ಸಾಹಿಸಲಾಗುವುದೆಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ ಇದರ ಅಧ್ಯಕ್ಷರಾದ ಗಣೇಶ್ ಕಾಂಚನ್, ಕೆ.ಎಪ್.ಡಿ.ಸಿ.ಅಧ್ಯಕ್ಷರಾದ ಬಿ.ಹಿರಿಯಣ್ಣ, ಜಿಲ್ಲಾ ಪಂಚಾಯತದ ಸದಸ್ಯೆ ಶ್ರೀಲತಾ ಶೆಟ್ಟಿ, ರೋಟರಿ ಕ್ಲಬ್ ಕೋಟೇಶ್ವರ ಇದರ ಅಧ್ಯಕ್ಷರಾದ ಶಂಕರ್ ನಾಯ್ಕ್, ಸದಾನಂದ ಬಳ್ಕೂರು, ರಕ್ತನಿಧಿಯ ವೈದ್ಯೆ ಡಾ. ವಿದ್ಯಾ, ಸತೀಶ್ ಎಂ.ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಅಶೋಕ್ ತೆಕ್ಕಟ್ಟೆ ವಹಿಸಿದ್ದರು. ಈ ಶಿಬಿರದಲ್ಲಿ ದಾಖಲೆಯ 440 ಯೂನಿಟ್ ರಕ್ತದಾನ ನಡೆಯಿತು.

ಕೋಟ ಘಟಕದ ವತಿಯಿಂದ ದಿನಾಂಕ 19-06-16ರಂದು ನಡೆದ ರಕ್ತದಾನ ಶಿಭಿರ

ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ, ಕೋಟ ಘಟಕ, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.) ಉಡುಪಿ, ಜಿಲ್ಲಾಡಳಿತ ಉಡುಪಿ ಹಾಗೂ ರಕ್ತನಿಧಿ ಕೆ. ಎಮ್.ಸಿ. ಮಣಿಪಾಲ ಇವರ ಆಶ್ರಯದಲ್ಲಿ ದಿನಾಂಕ 19.06.2016 ರಂದು ಕೋಟಾದ ಮಾಂಗಲ್ಯ ಮಂದಿರದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು. ಈ ಕಾರ್ಯಕ್ರಮವನ್ನು ಗೀತಾನಂದ ಪೌಂಡೆಶನ್ (ರಿ.) ಕೋಟ ಇದರ ಪ್ರವರ್ತಕರಾದ ಶ್ರೀ ಆನಂದ್ ಸಿ ಕುಂದರ್ ರವರು ಉದ್ಘಾಟಿಸಿದರು ರಕ್ತದಾನಿಗಳಿಗೆ ಶುಭ ಹಾರೈಸಿದರು. ಇದೆ ಸಂದರ್ಭದಲ್ಲಿ ಗೀತಾನಂದ ಫೌಂಡೇಶನ್ನಿಂದ ವತಿಯಿಂದ ಸಸಿ ವಿತರಣೆ ಮಾಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟ ಘಟಕದ ಅಧ್ಯಕ್ಷರಾದ ಶ್ರೀ ಗಿರೀಶ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಂಘಟನೆಯ ಅಧ್ಯಕ್ಷರಾದ ಶ್ರೀ ಗಣೇಶ್ ಕಾಂಚನ್, ಜಿಲ್ಲಾ ಪಂಚಾಯತದ ಸದಸ್ಯರಾದ ಶ್ರೀ ರಾಘವೇಂದ್ರ ಕಾಂಚನ್, ನಿಕಟಪೂರ್ವ ಅಧ್ಯಕ್ಷರಾದ ಶ್ರಿ ಸದಾನಂದ ಬಳ್ಕೂರು, ಸಂಜೀವ ಎಮ್.ಎಸ್. ಶ್ರೀ ಸತೀಶ್ ಎಮ್ ನಾಯಕ್, ಮಹಿಳಾ ಘಟಕದ ಅಧ್ಯಕ್ಷೆ ಶಾರದಾ ಮೊದಲಾದವರು ಉಪಸ್ಥತರಿದ್ದರು

2015-16 ನೇ ಸಾಲಿನ ಸರಣಿ ರಕ್ತದಾನ ಶಿಬಿರಗಳ ಸಮಾರೋಪ ಸಮಾರಂಭ

ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ ಮತ್ತು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ನ ನೇತೃತ್ವದಲ್ಲಿ 2015-16 ನೇ ಸಾಲಿನ ಸರಣಿ ರಕ್ತದಾನ ಶಿಬಿರಗಳ ಸಮಾರೋಪ ಸಮಾರಂಭವು ಮಂದಾರ್ತಿ ಘಟಕದ ಆತಿಥ್ಯದಲ್ಲಿ ಶ್ರೀ ಕ್ಷೇತ್ರ ಮಂದಾರ್ತಿಯಲ್ಲಿ ದಿನಾಂಕ 29.05.2016 ರಂದು ನಡೆಯಿತು. ಈ ಕಾರ್ಯಕ್ರಮವನ್ನು ಡಾ. ಜಿ.ಶಂಕರ್ ರವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೊಗವೀರ ಯುವ ಸಂಘಟನೆಯ ಅಧ್ಯಕ್ಷರಾದ ಶ್ರೀ ಗಣೇಶ್ ಕಾಂಚನ್ ರವರು ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿದರು ಡಾ. ಜಿ ಶಂಕರ್ ರವರು ಕಳೆದ ಸಾಲಿನಲ್ಲಿ 10000 ಕ್ಕೂ ಅಧಿಕ ಯೂನಿಟ್ ರಕ್ತದಾನ ಮಾಡುವಲ್ಲಿ ಎಲ್ಲಾ ಘಟನೆಗಳು ಮತ್ತು ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗಳು ಸಹಕರಿಸಿದ್ದಾರೆ.  ಮುಂದಿನ ವರ್ಷಗಲ್ಲಿ ಒಟ್ಟು ಒಮದು ಲಕ್ಷ ಯೂನಿಟ್ ದಾನ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು. ಇದೆ ಸಂದರ್ಭದಲ್ಲಿ ಮೊಗವೀರರ ಕುಲಗುರುಗಳಾದ ಮಾಧವ ಮಂಗಲಾಚಾರ್ಯರ ಮೂರ್ತಿಗೆ ದಾನವಾದ ರಕ್ತದಿಂದ ತುಲಾಭಾರ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಧನಂಜಯ್ ಶೆಟ್ಟಿ, ಮಂದಾರ್ತಿ, ಶ್ರೀ ಕರ್ನಲ್ ದಯಾನಂದ್, ವೈದ್ಯಕೀಯ ಅಧೀಕ್ಷಕರು, ಕೆ.ಎಮ್.ಸಿ.ಮಣಿಪಾಲ, ಡಾ.ನಾಗಾನಂದ್ ಭಟ್, ಮಂದಾರ್ತಿ, ಡಾ.ಶಮ್ಮಿ ಶಾಸ್ತ್ರಿ, ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಅತೀ ಹೆಚ್ಚು ಬಾರಿ ರಕ್ತದಾನ ಮಾಡಿದ ಆಯ್ದ ರಕ್ತದಾನಿಗಳನ್ನು ಸನ್ಮಾನಿಸಲಾಯಿತು ಹಾಗೂ ಎಲ್ಲಾ ಘಟಕಗಳನ್ನು ಗೌರವಿಸಲಾಯಿತು.

ಬೈಂದೂರು ಶಿರೂರು ಘಟಕದ ವತಿಯಿಂದ ದಿನಾಂಕ 26-06-16ರಂದು ನಡೆದ ರಕ್ತದಾನ ಶಿಭಿರ

ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ, ಬೈಂದೂರು ಶಿರೂರು ಘಟಕದ ವತಿಯಿಂದ ದಿನಾಂಕ 26.06.2016 ರಂದು ಬೈಂದೂರಿನ ಜೆ.ಎನ್.ಆರ್. ಹಾಲ್ ನಲ್ಲಿ ನಡೆಯಿತು. ಸುಮಾರು 266 ಯೂನಿಟ್ ನಷ್ಟು ರಕ್ತದಾನವಾಗಿದ್ದು ಕಾರ್ಯಕ್ರಮವನ್ನು ಶ್ರೀ ಜಗನ್ನಾಥ ರವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ ಇದರ ಅಧ್ಯಕ್ಷರಾದ ಶ್ರೀ ಗಣೇಶ್ ಕಾಂಚನ್, ಮತ್ತಿತರರು ಉಪಸ್ಥಿತರಿಸ್ಸರು. ಘಟಕದ ಅಧ್ಯಕ್ಷರಾದ ಶ್ರೀ ಗಂಗಾಧರ ಮೊಗವೀರರವರು ನೇತ್ರತ್ವವನ್ನು ವಹಿಸಿದ್ದರು.

ಸಾಲಿಗ್ರಾಮ ಘಟಕದ ವತಿಯಿಂದ ದಿನಾಂಕ 03-07-16ರಂಂದು ನಡೆದ ರಕ್ತದಾನ ಶಿಭಿರ.

ಮೊಗವೀರ ಯುವ ಸಂಘಟನೆ (ರಿ.)ಉಡುಪಿ ಜಿಲ್ಲೆ, ಸಾಲಿಗ್ರಾಮ ಘಟಕ ಮತ್ತು ಮಹಿಳಾ ಸಂಘಟನೆ ಸಾಲಿಗ್ರಾಮ ಇವರ ಆಶ್ರಯದಲ್ಲಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.)ಅಂಬಲಪಾಡಿ- ಉಡುಪಿ, ಜಿಲ್ಲಾಡಳಿತ ಉಡುಪಿ, ಕೆ.ಎಮ್.ಸಿ.ಮಣಿಪಾಲ ಇವರ ಸಹಯೋಗದೊಂದಿಗೆ, ರಕ್ತದಾನಿಗಳ ಸಹಕಾರದೊಂದಿಗೆ ಬೃಹತ್ ರಕ್ತದಾನ ಶಿಬಿರವನ್ನು ದಿನಾಂಕ 03-07-2016ನೇ ಭಾನುವಾರ ಕರಾವಳಿ ಮೊಗವೀರ ಸಭಾಭವನ ಡಿವೈನ್ ಪಾರ್ಕ್ ಎದುರು ಗುಂಡ್ಮಿ- ಸಾಲಿಗ್ರಾಮದಲ್ಲಿ ಡಾ. ಜಿ.ಶಂಕರ್, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್(ರಿ.) ಅಂಬಲಪಾಡಿ, ಉಡುಪಿ ಇವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಆನಂದ ಸಿ. ಕುಂದರ್ ಪ್ರವರ್ತಕರು ಗೀತಾನಂದ ಟ್ರಸ್ಟ್(ರಿ.) ಕೋಟ ಇವರು ರಕ್ತದಾನಿಗಳಿಗೆ ಸಸಿ ವಿತರಿಸುವುದರ ಮೂಲಕ ವನಮಹೋತ್ಸಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಶ್ರೀ ಗಣೇಶ್ ಕಾಂಚನ್, ಜಿಲ್ಲಾಧ್ಯಕ್ಷರು, ಮೊಗವೀರ ಯುವಸಂಘಟನೆ ಉಡುಪಿ, ಶ್ರೀ ಜಯ ಸಿ.ಕೋಟ್ಯಾನ್ ಮಾಜಿ ಅಧ್ಯಕ್ಷರು ಮೊಗವೀರ ಯು.ಸಂ.ಉಡುಪಿ, ಶ್ರೀ ರಾಘವೇಂದ್ರ ಸುವರ್ಣ ಬೈಕಾಡಿ, ಪ್ರಧಾನ ಕಾರ್ಯದರ್ಶಿ, ಮೊಗವೀರ ಯು.ಸಂ.ಉಡುಪಿ, ಶ್ರೀ ಶಿವ ಕರ್ಕೇರ ಉದ್ಯಮಿ, ಡಾ.ದಿವ್ಯ ಅಸಿಸ್ಟೆಂಟ್ ಪ್ರೊಫೆಸರ್  ಕೆ.ಎಮ್.ಸಿ.ಮಣಿಪಾಲ, ಶ್ರೀ ಶಂಕರ್ ಕುಂದರ್ ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಕೋಟ, ಶ್ರೀ ವಿಜಯ ಕುಮಾರ್ ಮಂಜ ಗ್ರಾಮಕ್ಷೇಮ ಚಾರಿಟೇಬಲ್ ಟ್ರಸ್ಟ್ ಪಾಂಡೇಶ್ವರ, ಶ್ರೀಮತಿ ವಸುಮತಿ ನಾಯರಿ ಅಧ್ಯಕ್ಷರು ಪಟ್ಟಣ ಪಂಚಾಯತ್ ಸಾಲಿಗ್ರಾಮ, ಶ್ರೀ ಎಮ್.ಎಸ್.ಸಂಜೀವ ಮಾಜಿ ಜಿಲ್ಲಾಧ್ಯಕ್ಷರು, ಶ್ರೀ ಯತೀಶ್ ಜಿಲ್ಲಾ ಉಪಾಧ್ಯಕ್ಷರು, ಶ್ರೀ ಸತೀಶ್ ಮರಕಾಲ ಅಧ್ಯಕ್ಷರು ಮೊಗವೀರ ಯು.ಸಂ. ಸಾಲಿಗ್ರಾಮ, ಶ್ರೀ ಶೇಖರ ಮರಕಾಲ ಗೌರವಾಧ್ಯಕ್ಷರು ಮೊಗವೀರ ಯು.ಸಂ.,ಶ್ರೀ ಕೃಷ್ಣಮೂರ್ತಿ ಮರಕಾಲ ನಿಕಟಪೂರ್ವಾಧ್ಯಕ್ಷರು, ಶ್ರೀ ಸುರೇಶ ಮರಕಾಲ ಮಾಜಿ ಅಧ್ಯಕ್ಷರು, ಶ್ರೀಮತಿ ರೇವತಿರಾಜ್, ಅಧ್ಯಕ್ಷರು, ಮಹಿಳಾ ಘಟಕ, ಶ್ರೀಮತಿ ಗೀತಾ ಭಾಸ್ಕರ್ ನಿಯೋಜಿತ ಅಧ್ಯಕ್ಷರು, ಶ್ರೀಮತಿ ಗಿರಿಜಾ ಸುವರ್ಣ ಗೌರವಾಧ್ಯಕ್ಷರು, ಶ್ರೀದಿನೇಶ ಬಂಗೇರ ಗುಂಡ್ಮಿ, ಜಿಲ್ಲಾ ಘಟಕದ ಎಲ್ಲಾ ಪದಾದಿಕಾರಿಗಳು,ಸಾಲಿಗ್ರಾಮ ಘಟಕದ ಸರ್ವಸದಸ್ಯರು ಉಪಸ್ಥಿತರಿದ್ದರು. ಚಂದ್ರ ಮರಕಾಲ ಕಾರ್ಯದರ್ಶಿ ಸ್ವಾಗತಿಸಿ, ವಂದಿಸಿದರು.ಈ ಶಿಭಿರದಲ್ಲಿ ಓಟ್ಟು 301 ಯುನಿಟ್‌ಗಳ ರಕ್ತವನ್ನು ಸಂಗ್ರಹಿಸಲಾಯಿತು. 

2014-15 ರಲ್ಲಿ ನಡೆದ ಬೃಹತ್ ಸರಣಿ ರಕ್ತದಾನ ಶಿಬಿರಗಳು

ರಕ್ತದಾನ ಮಹಾದಾನ- ರಕ್ತದಾನದಿಂದ ಜೀವದಾನ , ರಕ್ತದಾನದ ಅಭಿಯಾನ- ಸರ್ವರಿಗೂ ವರದಾನ”  ಎಂಬ ಧ್ಯೇಯ ವಾಕ್ಯದೊಂದಿಗೆ ನಾಡೋಜ ಡಾ.ಜಿ.ಶಂಕರ್ ರವರ ಮಾರ್ಗದರ್ಶನದೊಂದಿಗೆ ನಡೆಸಲಾಗುತ್ತಿರುವ ಸರಣಿ ರಕ್ತದಾನ ಶಿಬಿರಗಳು ನಮ್ಮ ಸಂಘಟನೆ ಹಾಗೂ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.) ಉಡುಪಿ, ಇವರುಗಳ ನೇತೃತ್ವದಲ್ಲಿ, ಉಡುಪಿ ಜಿಲ್ಲಾಡಳಿತ ಹಾಗೂ ರಕ್ತನಿಧಿ ಕೆ.ಎಂ.ಸಿ.ಮಣಿಪಾಲ ಇವುಗಳ ಸಹಯೋಗದೊಂದಿಗೆ ವಿವಿಧ ಘಟಕಗಳ ಆಶ್ರಯದಲ್ಲಿ, ಘಟಕ ವ್ಯಾಪ್ತಿಯ ವಿವಿಧ ಸಂಘ ಸಂಸ್ಥೆಗಳ ನೆರವಿನೊಂದಿಗೆ ಬೃಹತ್ ರಕ್ತದಾನ ಶಿಬಿರಗಳು ನಡೆಯುತ್ತಿದ್ದು, ವರದಿ ವರ್ಷದಲ್ಲಿ  19 ಘಟಕಗಳ ಆಶ್ರಯದಲ್ಲಿ ಹಲವಾರು ಶಿಬಿರಗಳು ನಡೆದಿದ್ದು, ದಾಖಲೆಯ 15,427 ಯೂನಿಟ್ ರಕ್ತ ಸಂಗ್ರಹಿಸಲಾಯಿತು.

          ಘಟಕಗಳು ತಮ್ಮ ವ್ಯಾಪ್ತಿಯಲ್ಲಿ 3 ರಿಂದ 5 ಶಿಬಿರಗಳನ್ನು ಆಯೋಜಿಸುತ್ತಿವೆ.  ಯುವ ಸಂಘಟನೆ ವತಿಯಿಂದ ವಿವಿಧ ಕಡೆ ಕೆ.ಎಂ.ಸಿ. ವತಿಯಿಂದ ಸಂಗ್ರಹಿಸಲಾದ ರಕ್ತದಲ್ಲಿ  25% ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆ ರಕ್ತನಿಧಿ ಕೇಂದ್ರಕ್ಕೆ  ಕೆ.ಎಂ.ಸಿ.  ಮಣಿಪಾಲ ರವರು  ನೀಡುತ್ತಿದ್ದಾರೆ. ಇದರಿಂದಾಗಿ ಸಾರ್ವಜನಿಕರು ಉಡುಪಿ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲೂ ರಕ್ತವನ್ನು ಪಡೆಯಲು ಸಹಕಾರಿಯಾಗಿದೆ.  ಈಗಾಗಲೇ ಘಟಕಗಳು ಈ ಕೆಳಕಂಡಂತೆ ಶಿಬಿರಗಳನ್ನು ಆಯೋಜಿಸಿ ರಕ್ತವನ್ನು ಸಂಗ್ರಹಿಸಿ ರಕ್ತನಿಧಿ ಮಣಿಪಾಲ, ಜಿಲ್ಲಾಸ್ಪತ್ರೆ ಉಡುಪಿ, ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ ಮುಂತಾದ ರಕ್ತನಿಧಿಗಳಿಗೆ ನೀಡಲಾಯಿತು. 

ಕ್ರ.ಸಂ.

ಘಟಕದ ಹೆಸರು

2014-15 ರ ಸಾಲಿನಲ್ಲಿ

1

ಬೆಳ್ಳಂಪಳ್ಳಿ

1420

2

ಬೈಂದೂರು

580

3

ಕೋಡಿ ಬೆಂಗ್ರೆ

306

4

ಕೋಟ

782

5

ಸಾಲಿಗ್ರಾಮ

860

6

ಕುಂದಾಪುರ

1080

7

ಕೋಟೇಶ್ವರ

958

8

ಉಪ್ಪೂರು

407

9

ಹೆಮ್ಮಾಡಿ

639

10

ಕಲ್ಯಾಣಪುರ

457

11

ಬ್ರಹ್ಮಾವರ

744

12

ಹಿರಿಯಡ್ಕ

559

13

ದೊಡ್ಡಣಗುಡ್ಡೆ

989

14

ಹಾಲಾಡಿ

945

15

ಮಲ್ಪೆ

738

16

ಮಂದಾರ್ತಿ

1196

17

ಬಡನಿಡಿಯೂರು

492

18

ಉದ್ಯಾವರ

448

 

19

ಪಿ.ಟಿ ಬೆಂಗ್ರೆ

160

20

ಉಡುಪಿ-ಮಂಗಳೂರು

1480

21

ತೀರ್ಥಹಳ್ಳಿ

187

 

ಒಟ್ಟು

15427

 

ಉಡುಪಿ ಜಿಲ್ಲೆ “ ರಕ್ತದಾನಿಗಳ ಜಿಲ್ಲೆ ” ಎಂದು ಘೋಷಣೆ

ಉಡುಪಿ ಜಿಲ್ಲೆ ರಕ್ತದಾನಿಗಳ ಜಿಲ್ಲೆ ಎಂದು ಘೋಷಣೆ :-

ಮೊಗವೀರ ಯುವ ಸಂಘಟನೆಯು  ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಸಹಯೋಗದೊಂದಿಗೆ ರಕ್ತ ನಿಧಿ, ಮಣಿಪಾಲ ಮತ್ತು ಜಿಲ್ಲಾಡಳಿತದ ಸಹಕಾರದೊಂದಿಗೆ  ರಕ್ತದಾನ ಶಿಬಿರಗಳನ್ನು ಜಿಲ್ಲೆಯ ವಿವಿಧ ಭಾಗಗಳಲ್ಲಿ ಆಯೋಜಿಸಿಕೊಂಡು ಬರುತ್ತಿದ್ದುಮಾರ್ಗದರ್ಶಕರಾದ ಡಾ: ಜಿ.ಶಂಕರ್ ಇವರು 1.00 ಲಕ್ಷ ಯೂನಿಟ್ ರಕ್ತ ಸಂಗ್ರಹಿಸುವ ಗುರಿ ನಿಗದಿ ಪಡಿಸಿದಂತೆ ಈಗಾಗಲೇ ಸರಣಿ ರಕ್ತದಾನ ಶಿಬಿರಗಳನ್ನು ಆಯೋಜಿಸಿದ್ದು, ಈಗಾಗಲೇ 60 ಸಾವಿರ ಯೂನಿಟ್ ರಕ್ತ ಸಂಗ್ರಹಿಸಿ, ಉಡುಪಿ ಜಿಲ್ಲೆ ಹಾಗೂ ಅಕ್ಕಪಕ್ಕದ ಜಿಲ್ಲೆಯ ರೋಗಿಗಳಿಗೆ ರಕ್ತದ ಕೊರತೆ ನೀಗಿಸುವಲ್ಲಿ ಯಶಸ್ವಿಯಾಗಿದೆ.  ಈ ಬಗ್ಗೆ ದಿನಾಂಕ 19-09-2015 ರಂದು ಶ್ಯಾಮಿಲಿ ಸಭಾಂಗಣದಲ್ಲಿ ಕರ್ನಾಟಕ ಸರಕಾರದ ಮಾನ್ಯ ಆರೋಗ್ಯ ಸಚಿವರಾದ ಶ್ರೀ ಯು. ಟಿ. ಖಾದರ್ ರವರು ಉಡುಪಿ ಜಿಲ್ಲೆಯನ್ನು ರಾಜ್ಯದ ಮೊದಲ ರಕ್ತದಾನಿಗಳ ಜಿಲ್ಲೆ ಎಂದು ಘೋಷಣೆಯನ್ನು ಮಾಡಿದ್ದಾರೆ.  ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸುತ್ತಾ, ಯುವ ಸಂಘಟನೆಯ ರಕ್ತದಾನ ಶಿಬಿರದ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿರುತ್ತಾರೆ.  ಅಲ್ಲದೆ ಉಪಸ್ಥಿತರಿದ್ದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ವಿನಯ ಕುಮಾರ್ ಸೊರಕೆ ಹಾಗೂ ಉಡುಪಿ ಶಾಸಕರಾದ ಪ್ರಮೋದ್ ಮಧ್ವರಾಜ್ ಇವರು ರಕ್ತದಾನ ಶಿಬಿರಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಯುವ  ಸಂಘಟನೆಯು ರಾಜ್ಯದಲ್ಲೇ ಮಾದರಿ ಸಂಘಟನೆಯಾಗಿರುವುದಾಗಿ ಪ್ರಶಂಸೆಯನ್ನು ವ್ಯಕ್ತಪಡಿಸಿರುವುದು  ಸಂಘಟನೆಯ ಮುಕುಟಕ್ಕೆ ಒಂದು ಹೆಮ್ಮೆಯ ಗರಿಯಾಗಿದೆ

ರಕ್ತದಾನ ಶಿಬಿರ

2013-14 ರ ಸಾಲಿನ ಬೃಹತ್ ಸರಣಿ ರಕ್ತದಾನ ಶಿಬಿರಗಳು

ಈಗಾಗಲೇ 2,510 ಯೂನಿಟ್ ರಕ್ತ ಸಂಗ್ರಹಿಸಲಾಗಿದ್ದು, ರಕ್ತದಾನ ಶಿಬಿರಗಳು ಚಾಲನೆಯಲ್ಲಿವೆ

2012-13 ರ ಸಾಲಿನ ಬೃಹತ್ ಸರಣಿ ರಕ್ತದಾನ ಶಿಬಿರಗಳು

ರಕ್ತದಾನ ಮಹಾದಾನ- ರಕ್ತದಾನದಿಂದ ಜೀವದಾನ , ರಕ್ತದಾನದ ಅಭಿಯಾನ- ಸರ್ವರಿಗೂ ವರದಾನ ಎಂಬ ಧ್ಯೇಯ ವಾಕ್ಯದೊಂದಿಗೆ ನಾಡೋಜ ಡಾ.ಜಿ.ಶಂಕರ್ ರವರ ಮಾರ್ಗದರ್ಶನದೊಂದಿಗೆ 10000 ಯೂನಿಟ್ ರಕ್ತ ಸಂಗ್ರಹಿಸಿ ದಾನ ಮಾಡುವ ಗುರಿಯೊಂದಿಗೆ ನಮ್ಮ ಸಂಘಟನೆಯು, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.) ಉಡುಪಿ , ಜಿಲ್ಲಾಡಳಿತ ಹಾಗೂ ರಕ್ತನಿಧಿ ಮಣಿಪಾಲ ಇವುಗಳ ಸಹಯೋಗದೊಂದಿಗೆ ವಿವಿಧ ಘಟಕಗಳ ಆಶ್ರಯದಲ್ಲಿ, ಘಟಕ ವ್ಯಾಪ್ತಿಯ ವಿವಿಧ ಸಂಘ ಸಂಸ್ಥೆಗಳ ನೆರವಿನೊಂದಿಗೆ ಬೃಹತ್ ರಕ್ತದಾನ ಶಿಬಿರಗಳ ಸರಣಿಯನ್ನು ಆರಂಭಿಸಲಾಯಿತು. ಒಟ್ಟು 19 ಘಟಕಗಳ ಆಶ್ರಯದಲ್ಲಿ ಸುಮಾರು 48 ಶಿಬಿರಗಳು ನಡೆದಿದ್ದು, ದಾಖಲೆಯ 12,627 ಯೂನಿಟ್ ರಕ್ತ ಸಂಗ್ರಹಿಸಲಾಯಿತು.

ಬೃಹತ್ ಸರಣಿ ರಕ್ತದಾನ ಶಿಬಿರಗಳ ಚಾಲನಾ ಶಿಬಿರ

ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಹಾಗೂ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ನ ನೇತೃತ್ವದಲ್ಲಿ, ಮಣಿಪಾಲ ವಿಶ್ವವಿದ್ಯಾಲಯದ ರಕ್ತನಿಧಿ ಕೇಂದ್ರದ ಸಹಕಾರದೊಂದಿಗೆ ಬೆಳ್ಳಂಪಳ್ಳಿ ಘಟಕದ ಆತಿಥ್ಯದಲ್ಲಿ ದಿನಾಂಕ 25-03-2012 ರಂದು, ಕೆ.ಎಂ.ಸಿ. ಯ ಹಳೆ ಗ್ರಂಥಾಲಯ ಹಾಲ್ ನಲ್ಲಿ ಸರಣಿ ರಕ್ತದಾನ ಶಿ ಬಿರಗಳಿಗೆ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮವನ್ನು ನಾಡೋಜ ಡಾ. ಜಿ. ಶಂಕರ್ ರವರು ದೀಪ ಬೆಳಗಿಸಿ ಉದ್ಘಾಟಿಸಿ, 10000 ಯೂನಿಟ್ ರಕ್ತ ಸಂಗ್ರಹಿಸ ಿ, ನೀಡುವ ಕುರಿತು ವಿದ್ಯುಕ್ತವಾಗಿ ಘೋಷಣೆ ಮಾಡಿದರು ಮತ್ತು ಈ ಕಾರ್ಯಕ್ರಮವನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ತಿಳಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಜಯ ಸಿ ಕೋಟ್ಯಾನ್ ವಹಿಸಿದ್ದು, ಮಾನ್ಯ ಎಚ್.ಎಸ್.ಬಲ್ಲಾಳ್, ಆರ್.ಆರ್.ಪುಲಗಾಂವಕರ್, ಡಾ.ಸುಧಾಭಟ್, ಯಶಪಾಲ್ ಸುವರ್ಣ, ಸತೀಶ್ ಎಮ್.ನಾಯ್ಕ್ ಕೋಟೇಶ್ವರ , ಎಂ.ಎಸ್.ಸಂಜೀವ ಕೋಟ, ಮತ್ತಿತರರು ಉಪಸ್ಥಿತರಿದ್ದರು. ಈ ಶಿಬಿರದಲ್ಲಿ ಸುಮಾರು 800 ಯೂನಿಟ್ ರಕ್ತ ಸಂಗ್ರಹಿಸಿ ದಾನ ಮಾಡಲಾಯಿತು.

ಬೃಹತ್ ಸರಣಿ ರಕ್ತದಾನ ಶಿಬಿರಗಳ ಉದ್ಘಾಟನಾ ಸಮಾರಂಭ

ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಹಾಗೂ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ನ ನೇತೃತ್ವದಲ್ಲಿ, ಮಣಿಪಾಲ ವಿಶ್ವವಿದ್ಯಾಲಯದ ರಕ್ತನಿಧಿ ಕೇಂದ್ರದ ಸಹಕಾರದೊಂದಿಗೆ ಮಲ್ಪೆ ಘಟಕದ ಆತಿಥ್ಯದಲ್ಲಿ ಬೃಹತ್ ಸರಣಿ ರಕ್ತದಾನ ಶಿಬಿರಗಳ ಉದ್ಘಾಟನಾ ಸಮಾರಂಭವು ದಿನಾಂಕ 12-05-2012 ರಂದು ಏಳೂರು ಮೊಗವೀರ ಭವನ, ಮಲ್ಪೆ ಇಲ್ಲಿ ನೆರವೇರಿತು. ಈ ಕಾರ್ಯಕ್ರಮವನ್ನು ರಕ್ತದಾನ ಶಿಬಿರಗಳ ರೂವಾರಿಗಳಾದ, ಡಾ. ಜಿ. ಶಂಕರ್ ರವರು ಉದ್ಘಾಟಿಸಿದರು. ಈ ಕಾರ್ಯಕ್ರಮಕ್ಕೆ ಮಲ್ಪೆಯ ಟೆಬ್ಮಾ ದ ಶ್ರೀ ರಾಮದಾಸ್ ಭಟ್ ರವರ ಸಹಯೋಗವು ವಿಶೇಷವಾಗಿತ್ತು. ಈ ಉದ್ಘಾಟನಾ ಶಿಬಿರದಲ್ಲಿ ಸುಮಾರು 382 ಯೂನಿಟ್ ರಕ್ತ ಸಂಗ್ರಹಿಸಲಾಯಿತು

ನಂತರದ ಶಿಬಿರಗಳು

ಉದ್ಘಾಟನಾ ಶಿಬಿರದ ನಂತರ ಉಡುಪಿ ಜಿಲ್ಲೆಯಲ್ಲಿ ಸುಮಾರು 42 ಶಿಬಿರಗಳ ಮೂಲಕ 15,186 ಯೂನಿಟ್ ರಕ್ತ ಸಂಗ್ರಹಿಸಿ ರಕ್ತನಿಧಿ ಮಣಿಪಾಲ, ಜಿಲ್ಲಾಸ್ಪತ್ರೆ ಉಡುಪಿ, ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ ಮುಂತಾದ ರಕ್ತನಿಧಿಗಳಿಗೆ ನೀಡಲಾಯಿತು

ಬೃಹತ್ ಸರಣಿ ರಕ್ತದಾನ ಶಿಬಿರಗಳ ಅನುಚಾಲನಾ ಶಿಬಿರ

ಈ ವರ್ಷದ ಗುರಿಯಂತೆ, 10000 ಯೂನಿಟ್ ರಕ್ತ ಸಂಗ್ರಹಿಸುವ ಅಭಿಯಾನದಲ್ಲಿ, ಹಲವು ಶಿಬಿರಗಳ ಮೂಲಕ 5000ಕ್ಕೂ ಅಧಿಕ ಯೂನಿಟ್ ರಕ್ತ ದಾನ ಮಾಡಲಾದ ಹಿನ್ನೆಲೆಯಲ್ಲಿ ರಕ್ತದಾನ ಶಿಬಿರಗಳ ಅನುಚಾಲನಾ ಶಿಬಿರವನ್ನು ದಿನಾಂಕ 23.08.2012 ರಂದು ಉಡುಪಿಯ ಶ್ಯಾಮಿಲಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು. ಈ ಶಿಬಿರವನ್ನು ಮಾನ್ಯ ಆರೋಗ್ಯ ಸಚಿವರಾದ ಅರವಿಂದ ಲಿಂಬಾವಳಿಯವರು ಉದ್ಘಾಟಿಸಿದರು. ಈ ಶಿಬಿರದಲ್ಲಿ ಆಯಾ ಘಟಕ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಬಾರಿ ರಕ್ತದಾನ ಮಾಡಿದ ರಕ್ತದಾನಿಗಳನ್ನು ಆರೋಗ್ಯ ಸಚಿವರು ಗೌರವಿಸಿದರು. ಮತ್ತು ಶಿಬಿರಗಳಲ್ಲಿ ಶ್ರಮಿಸಿದ ಘಟಾಕಾಧ್ಯಕ್ಷರುಗಳನ್ನು ಸನ್ಮಾನಿಸಲಾಯಿತು. ಈ ಸಭೆಯ ಅಧ್ಯಕ್ಷತೆಯನ್ನು ಶ್ರೀ ಕೆ.ರಘುಪತಿ ಭಟ್ ವಿಧಾನಸಭಾ ಶಾಸಕರು ಉಡುಪಿ, ಶ್ರೀ ಜಯ ಪ್ರಕಾಶ್ ಹೆಗ್ಡೆ , ಶ್ರೀ ಲಾಲಾಜಿ ಆರ್ ಮೆಂಡನ್ , ಶ್ರೀ ಎಂ.ಟಿ.ರೇಜು , ಡಾ| ಜಿ.ಕೆ ಪ್ರಭು , ಶ್ರೀ ಪ್ರಮೋದ್ ಮಧ್ವರಾಜ್ , ಶ್ರೀ ಯು.ಆರ್ ಸಭಾಪತಿ , ಯಶ್ಪಾಲ್ ಸುವರ್ಣ ಮುಖ್ಯ ಅತಿಥಿಗಳಾಗಿ ಭಾಗಹಿಸಿದ್ದರು. ರಕ್ತದಾನ ಶಿಬಿರಗಳನ್ನು ನಡೆಸುವರೇ ವಿಶೇಷವಾಗಿ ಪರವಾನಗಿ ನೀಡಿರುವ ಮಾನ್ಯ ಆರೋಗ್ಯ ಸಚಿವರನ್ನು ಟ್ರಸ್ಟ್ ಹಾಗೂ ಸಂಘಟನೆಯ ವತಿಯಿಂದ ಗೌರವಿಸಲಾಯಿತು

ಸ್ವಯಂ ಪ್ರೇರಿತ ರಕ್ತದಾನಿಗಳ ದಿನಾಚರಣಿ

ರಾಷ್ರ್ಟೀಯ ಸ್ವಯಂ ಪ್ರೇರಿತ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ದಿನಾಂಕ 01-10-2012 ರಂದು ಬೃಹತ್ ರಕ್ತದಾನ ಶಿಬಿರವನ್ನು ಉಡುಪಿಯ ಅಜ್ಜರಕಾಡಿನಲ್ಲಿರುವ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಅಲ್ಲಿನ ರಕ್ತನಿಧಿ ಮತ್ತು ರಕ್ತನಿಧಿ ,ಕೆ.ಎಂ.ಸಿ. ಮಣಿಪಾಲ ಗಳ ನೆರವಿನೊಂದಿಗೆ ಹಮ್ಮಿಕೊಳ್ಳಲಾಯಿತು. ಈ ಶಿಬಿರವನ್ನು ಕನರ್ಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಜಗದೀಶ್ ಶೆಟ್ಟರ್ ರವರು ಉದ್ಘಾಟಿಸಿದರು. ಮಾನ್ಯ ಮುಖ್ಯಮಂತ್ರಿಗಳು, ಸಂಘಟನೆ ಹಾಗೂ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ನವರು ಆಯೋಜಿಸಿರುವ, ಇಂತಹ ಜನೋಪಯೋಗಿ ಕಾರ್ಯಕ್ರಮಗಳು ಸಮಾಜಕ್ಕೆ ಮಾದರಿಯಾಗಿದೆ, ಈ ಹಿನ್ನೆಲೆಯಲ್ಲಿ ರಕ್ತ ಸಂಗ್ರಹ, ಹಾಗೂ ಇತರೆ ರಕ್ತನಿಧಿಗಳಿಗೆ ನೀಡುವಲ್ಲಿನ ಗೊಂದಲವನ್ನು ಬಗೆಹರಿಸಿ, ಸಮಾಜಮುಖಿ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಹೊರ ಜಿಲ್ಲೆಗಳಲ್ಲಿ ರಕ್ತದಾನ ಶಿಬಿರಗಳು

ಮೊಗವೀರ ಯುವ ಸಂಘಟನೆ ಹಾಗೂ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಮಹತ್ವಪೂರ್ಣವಾದ ಕಾರ್ಯಕ್ರಮವಾದ ಬೃಹತ್ ರಕ್ತದಾನ ಶಿಬಿರಗಳು ಉಡುಪಿ ಜಿಲ್ಲೆಗೆ ಸೀಮಿತವಾಗಿರದೆ, ಹೊರ ಜಿಲ್ಲೆಗಳಿಗೂ ವಿಸ್ತರಿಸಲಾಗಿತ್ತು ಪ್ರಥಮವಾಗಿ ದಿನಾಂಕ 27.10.2012 ರಂದು ತೀರ್ಥಹಳ್ಳಿ ಮೊಗವೀರ ಸಂಘದ ಸಹಭಾಗಿತ್ವದಲ್ಲಿ, ತೀರ್ಥಹಳ್ಳಿಯ ಸುವರ್ಣ ಸಹಕಾರ ಭವನ ದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಸನ್ಮಾನ್ಯ ನಾಡೋಜ ಡಾ.ಜಿ.ಶಂಕರ್ ರವರು ಉದ್ಘಾಟಿಸಿದರು. ಈ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಟಿ.ಆರ್. ಶ್ರೀನಿವಾಸ್ ಅಧ್ಯಕ್ಷರು ಮೊಗವೀರ ಮಹಾಜನ ಸಂಘ(ರಿ.),ತೀರ್ಥಹಳ್ಳಿ ರವರು ವಹಿಸಿದ್ದರು ಹಾಗೂ ಮುಖ್ಯ ಅತಿಥಿಗಳಾಗಿ ಜಯ ಸಿ ಕೋಟ್ಯಾನ್, ಶ್ರೀ ಕಿಮ್ಮನೆ ರತ್ನಾಕರ್, ಶ್ರೀ ಆರಗ ಜ್ಙಾನೇಂದ್ರ , ಶ್ರೀಮತಿ ಲಕ್ಷ್ಮೀ ವೆಂಕಟಪ್ಪ , ಶ್ರೀ ರಾಘವೇಂದ್ರ ,ಶ್ರೀಮತಿ ಇಂದಿರಮ್ಮ , ಶ್ರೀ ಅಶೋಕ ಕುಂದರ್ ,ಡಾ| ಸುಧಾ ಭಟ್ , ಡಾ| ಗಿರೀಶ್ ಮತ್ತಿತರರು ವಹಿಸಿದ್ದರು. ಈ ಶಿಬಿರದಲ್ಲಿ ದಾಖಲೆಯ 610 ಯೂನಿಟ್ ರಕ್ತ ಸಂಗ್ರಹಿಸಿ ಕೆ.ಎಂ.ಸಿ. ಮಣಿಪಾಲ, ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗಗಳಿಗೆ ನೀಡಲಾಯಿತು.

ನಂತರ ದಿನಾಂಕ 07-12-2012 ರಂದು ಉಳ್ಳಾಲದಲ್ಲಿ ರಕ್ತದಾನ ಶಿಬಿರವನ್ನು ಆಯೊಜಿಸಿ ಸುಮಾರು 400 ಯೂನಿಟ್ ರಕ್ತ ಸಂಗ್ರಹಿಸಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು, ಕೆ.ಎಂ.ಸಿ.ಆಸ್ಪತ್ರೆ ಮಂಗಳೂರು, ಕೆ.ಎಸ್.ಹೆಗ್ಡೆ ಚಾರಿಟೇಬಲ್ ಹಾಸ್ವಿಟಲ್, ದೇರಳಕಟ್ಟೆ ಮುಂತಾದ ಆಸ್ಪತ್ರೆಗಳ ರಕ್ತನಿಧಿಗಳಿಗೆ ದಾನ ಮಾಡಲಾಯಿತು. ಹಾಗೂ ದಿನಾಂಕ 15-12-2012 ರಂದು ಮೊಗವೀರ ಮಹಾಜನ ಸಂಘ ಶಿವಮೊಗ್ಗ, ಸಾಗರ ತಾಲೂಕು ಮೊಗವೀರ ಸಂಘ, ಹೊಸನಗರ ತಾಲೂಕು ಮೊಗವೀರ ಸಂಘ ಗಳ ಆಶ್ರಯದೊಂದಿಗೆ ಕೃಷ್ಣ ಸರಸ ಕನ್ವೆನ್ಷಲ್ ಹಾಲ್, ಆನಂದಪುರ, ಸಾಗರ ತಾಲೂಕು, ಶಿವಮೊಗ್ಗ ಜಿಲ್ಲೆ ಎಂಬಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಸಲಾಗಿ, ಶಿಬಿರವನ್ನು ಸಮಾಜದ ಕಣ್ಮಣಿ ಡಾ.ಜಿ.ಶಂಕರ್ ರವರು ಉದ್ಘಾಟಿಸಿದರು. ಈ ಶಿಬಿರದಲ್ಲಿ 786 ಯೂನಿಟ್ ರಕ್ತದ ಸಂಗ್ರಹ ಮಾಡಿ, ಸ್ಥಳೀಯ ರಕ್ತನಿಧಿಗಳಿಗೆ ನೀಡಲಾಯಿತು.

ಸ್ವಯಂ ಪ್ರೇರಿತ ರಕ್ತದಾನಿಗಳ ದಿನಾಚರಣಿ

ಬೆಂಗಳೂರಿನಲ್ಲಿ ರಕ್ತದಾನ ಶಿಬಿರ:- ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ ಹಾಗೂ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ನ ನೇತೃತ್ವದಲ್ಲಿ, ಭಾರತೀಯ ರೆಡ್ಕ್ರಾಸ್ ಸಂಸ್ಥೆ, ಕರ್ನಾಟಕ ರಾಜ್ಯ ಶಾಖೆ, ಮೊಗವೀರ ಸಂಘ ಬೆಂಗಳೂರು ಇವರುಗಳ ಸಹಯೋಗದೊಂದಿಗೆ, ಬೆಂಗಳೂರಿನಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ದಿನಾಂಕ 04ನೇ ನವೆಂಬರ್, 2012 ರಂದು ನಗರದ ಹೋರಾಟ ಭೂಮಿ, ಫ್ರೀಡಂ ಪಾರ್ಕ್ನಲ್ಲಿ ಹಮ್ಮಿಕೊಳ್ಳಲಾಯಿತು. ಈ ಶಿಬಿರವನ್ನು ಭಾರತ ಸರ್ಕಾರದ ಮಾನ್ಯ ಕಾರ್ಮಿಕ ಸಚಿವರಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ಯವರು ಉದ್ಘಾಟಿಸಿದರು.

ಕರ್ನಾಟಕ ಸರ್ಕಾರದ ಮಾನ್ಯ ಆರೋಗ್ಯ ಸಚಿವರಾದ ಸನ್ಮಾನ್ಯ ಶ್ರೀ ಅರವಿಂದ ಲಿಂಬಾವಳಿ ಯವರು ರಕ್ತದಾನಿಗಳಿಗೆ ಪ್ರಶಂಸಾ ಪತ್ರ ವಿತರಿಸಿದರು. ಗಾಂಧಿನಗರ ಕ್ಷೇತ್ರದ ಶಾಸಕರಾದ ಶ್ರೀ ದಿನೇಶ್ ಗುಂಡೂರಾವ್ ರವರು ಅಧ್ಯಕ್ಷತೆ ವಹಿಸಿದ್ದು, ಸನ್ಮಾನ್ಯ ನಾಡೋಜ ಡಾ.ಜಿ.ಶಂಕರ್, ಜಯ ಸಿ ಕೋಟ್ಯಾನ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪೂಜ್ಯ ಮಹಾಪೌರರಾದ ಶ್ರೀ ಡಿ. ವೆಂಕಟೇಶ ಮೂರ್ತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎಂ ಮದನ್ ಗೋಪಾಲ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕರ್ನಾಟಕ ರಾಜ್ಯ ಶಾಖೆಯ ಸಭಾಪತಿಗಳಾದ ಡಾ! ಎಸ್ ಬಿ ಕುಲಕರ್ಣೆ, ಕೆ.ಆರ್ ಧರ್ಮಪ್ಪ, ಡಾ.ಸುಧಾ ಭಟ್, ವಾಮನ ಸಾಲ್ಯಾನ್ ಹಾಗೂ ವಿದ್ಯಾವಾಚಸ್ಪತಿ ಶ್ರೀಶ್ರೀಶ್ರೀ ಸಂತೋಷ್ ಗೂರೂಜಿ ಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಶಿಬಿರದಲ್ಲಿ ಉಡುಪಿ ಜಿಲ್ಲಾ ಸಂಘಟನೆಯ ಅನೇಕ ಪದಾಧಿಕಾರಿಗಳು ಮತ್ತು ಬೆಂಗಳೂರಿನ ಪದಾಧಿಕಾರಿಗಳು ಭಾಗವಹಿಸಿ ರಕ್ತದಾನ ಮಾಡುವ ಮೂಲಕ ಶ್ರೇಷ್ಠತೆ ಮರೆದರು ಹಾಗೂ ಶಿಬಿರದಲ್ಲಿ 807 ಯೂನಿಟ್ ರಕ್ತ ಸಂಗ್ರಹಿಸಿ, ನಗರದ ಪ್ರಮುಖ ರಕ್ತನಿಧಿಗಳಾದ ಭಾರತೀಯ ರೆಡ್ ಕ್ರಾಸ್ ಸೊಸೈಟಿ, ರಾಷ್ಟ್ರೋತ್ಥಾನ ರಕ್ತನಿಧಿ, ಜೈದೇವ್, ರೋಟರಿ, ನಿಮ್ಹಾನ್ಸ್ ಆಸ್ಪತ್ರೆ, ಕಿದ್ವಾಯಿ ಮೆಮೋರಿಯಲ್ ಇನ್ಸಿಟ್ಯೂಟ್, ಬೆಂಗಳೂರು ಇವರಿಗೆ ಹಸ್ತಾಂತರಿಸಲಾಯಿತು.


2011 ರ ಸಾಲಿನ ಬೃಹತ್ ಸರಣಿ ರಕ್ತದಾನ ಶಿಬಿರಗಳು

ಮೊಗವೀರ ಯುವ ಸಂಘಟನೆ (ರಿ.)ಯು ಡಾ: ಜಿ.ಶಂಕರ್ ರವರ ಮಾರ್ಗದರ್ಶನದಲ್ಲಿ ಜಿ. ಶಂಕರ್ ಪ್ಯಾಮಿಲಿ ಟ್ರಸ್ಟ್(ರಿ.) ಉಡುಪಿ ಹಾಗೂ ಮಣಿಪಾಲ ವಿಶ್ವವಿದ್ಯಾಲಯದ ರಕ್ತನಿಧಿ ಕೇಂದ್ರದ ಸಹಕಾರದೊಂದಿಗೆ ವಿವಿಧ ಘಟಕಗಳ ಆಶ್ರಯದಲ್ಲಿ 2011 ರ ಸಾಲಿನಲ್ಲಿ ಸ್ವಯಂ ಪ್ರೇರಿತ ಬೃಹತ್ ಸರಣಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಯಿತು. ಈ ಶಿಬಿರದ ಉದ್ವಾಟನೆಯು ಬೆಳ್ಳಂಪಳ್ಳಿ ಮತ್ತು ದೊಡ್ಡಣಗುಡ್ಡೆ ಘಟಕಗಳ ಅತಿಥೇಯತ್ವದಲ್ಲಿ ದಿನಾಂಕ: 10-05-2011 ರಂದು ಮಣಿಪಾಲ ಕೆ.ಎಂ.ಸಿ. ಹಳೆ ಗ್ರಂಥಾಲಯ ಕಟ್ಟಡದಲ್ಲಿ ನಡೆಯಿತು. ಡಾ| ಜಿ.ಶಂಕರ್ ಶಿಬಿರ ಉದ್ಘಾಟಿಸಿದರು, ಜಿಲ್ಲಾಧ್ಯಕ್ಷ ಸತೀಶ್ ಎಮ್ ನಾಯ್ಕ್ ಹಾಗೂ ಮಣಿಪಾಲ ವಿಶ್ವವಿದ್ಯಾಲಯದ ಮುಖ್ಯಸ್ಥರು, ರಕ್ತನಿಧಿ ಮಣಿಪಾಲ ಇದರ ನಿದೇರ್ಶಕರು ಭಾಗವಹಿದ್ದರು. ಅಂದಿನ ಶಿಬಿರದಲ್ಲಿ ೫೧೦ ಯೂನಿಟ್ ರಕ್ತವನ್ನು ಸಂಗ್ರಹಿಸಿ ಯಶಸ್ವೀ ರಕ್ತದಾನ ಶಿಬಿರವಾಗಿ ಮೂಡಿಬಂದಿರುತ್ತದೆ. ನಂತರ ಗ್ರಾಮೀಣ ಪ್ರದೇಶಗಳಲ್ಲಿ ಸರಣಿ ಶಿಬಿರಗಳನ್ನು ಹಮ್ಮಿಕೊಂಡಿರುತ್ತದೆ.

ಇದರ ಸಮಾರೋಪ ಸಮಾರಂಭವು ದಿನಾಂಕ: 25-09-2011 ರಂದು ಮೊಗವೀರ ಯುವ ಸಂಘಟನೆ ಮಂದಾರ್ತಿ ಘಟಕ ಇವರ ಆಶ್ರಯದಲ್ಲಿ ದುರ್ಗಾಪರಮೇಶ್ವರಿ ಸಭಾಭವನ ಮಂದಾರ್ತಿಯಲ್ಲಿ ನೆರವೇರಿಸಲಾಯಿತು. ಡಾ| ವಿ .ಎಸ್ ಆಚಾರ್ಯ ಮಾನ್ಯ ಉನ್ನತ ಶಿಕ್ಷಣ ಸಚಿವರು ಸಮಾರಂಭ ಉದ್ವಾಟಸಿ, ಮಾತನಾಡುತ್ತ ಮೊಗವೀರ ಸಮಾಜ ಬೆಳೆದುಬಂದ ದಾರಿಯನ್ನು ಅವಲೋಕನ ಮಾಡಿ, ನಮ್ಮ ಸಮಾಜದ ಸಂಘಟನಾ ಶಕ್ತಿ, ದೈವ ಭಕ್ತಿ, ಸೇವಾ ಮನೋಭಾವನೆ, ಇತ್ಯಾದಿ ವೈಶಿಷ್ಟ್ಯತೆಗಳನ್ನು ವಿವರಿಸಿದರು ಹಾಗೂ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡ ಬೃಹತ್ ಸರಣೆ ರಕ್ತದಾನ ಶಿಬಿರವನ್ನು ಹಮ್ಮಿಕೊಂಡ ನಮ್ಮ ಸಂಘಟನೆಯನ್ನು ಮತ್ತು ಮೊಗವೀರ ಸಮಾಜಕ್ಕೆ ಮತ್ತು ಜಿಲ್ಲೆಯ ಸಮಸ್ತ ಜನರಿಗೆ ಜಿ. ಶಂಕರ್ ಕೊಡುಗೆಯನ್ನು ವಿವರಿಸಿ ಶ್ಲಾಘಿಸಿದರು. ನಮ್ಮ ಮಾರ್ಗದರ್ಶಕರಾದ ಡಾ| ಜಿ. ಶಂಕರ್ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ, ’ಸರ್ವೇಜನಾಃ ಸುಖಿನೋಃ ಭವಂತು’ ಎಂಬ ಧ್ಯೇಯವಾಕ್ಯದಂತೆ ಅಗತ್ಯವುಳ್ಳವರಿಗೆ ರಕ್ತಪೂರೈಕೆಯನ್ನು ಸಕಾಲದಲ್ಲಿ ಮಾಡಬೇಕೆಂಬ ಸದುದ್ದೇಶದಿಂದ ಸ್ವಯಂಪ್ರೇರಿತ ಬೃಹತ್ ಸರಣಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಈ ಶಿಬಿರದಿಂದ ಗ್ರಾಮಿಣ ಜನರಿಗೆ ರಕ್ತದಾನದ ಮಹತ್ವತೆ ಮತ್ತು ರಕ್ತದಾನದ ಅರಿವು ಮೂಡಿಸಿ ಹಾಗೂ ಜಿಲ್ಲೆಯಲ್ಲಿ ಉಂಟಾದ ರಕ್ತದ ಕೊರತೆ ನೀಗಿಸುವಲ್ಲಿ ಜಿಲ್ಲಾಸಂಘಟನೆ ಹಾಗೂ ಎಲ್ಲಾ ಘಟಕಗಳ ನಿಸ್ವಾರ್ಥ ಮತ್ತು ಪ್ರಾಮಾಣಿಕ ಪ್ರಯತ್ನ ಪ್ರಶಂಶನಿಯವೇಂದರು. ಜಿಲ್ಲಾಧ್ಯಕ್ಷ ಶ್ರೀ ಸತೀಶ್ ಎಂ.ನಾಯ್ಕ್ ಮಾತನಾಡುತ್ತ ಸ್ವಯಂಪ್ರೇರಿತ ರಕ್ತದಾನ ಅಭಿಯಾನ ಎಷ್ಟೋಂದು ಪರಿಣಾಮ ಬೀರಿದೆಯೆಂದರೆ ಮೊಗವೀರ ಯುವ ಸಂಘಟನೆ ರಕ್ತದಾನಿಗಳ ದೊಡ್ಡ ಸಂಕುಲವನ್ನೆ ಜಿಲ್ಲೆಯಾದ್ಯಂತ ಸೃಷಿಸಿದೆ ಎಂದರೆ ತಪ್ಪಾಗಲಾರದು.ಜಿಲ್ಲೆಯ ಯಾವುದೆ ಭಾಗದಲ್ಲಿ ರಕ್ತದ ಅವಶ್ಯಕತೆ ಬೇಡಿಕೆ ಬಂದಲ್ಲಿ ರಕ್ತ ನೀಡುವಂತಹ ಒಂದು ಸನ್ನಿವೇಶ ಸೃಷ್ಟಿಯಾಗಿದರೆ ಅದರ ಸಂಪೂರ್ಣ ಯಶಸ್ಸು ಮೊಗವೀರ ಯುವ ಸಂಘಟನೆಗೆ ಹಾಗೂ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ಗೆ ಸಲ್ಲುತ್ತದೆ ಎಂದರು. ಡಾ| ಎಚ್.ಎಸ್ ಬಲ್ಲಾಳ, ಸಹಕುಲದಿಪತಿಗಳು ಮಣಿಪಾಲ ವಿಶ್ವ ವಿದ್ಯಾಲಯ ಇವರ ಅಧ್ಯತೆಯಲ್ಲಿ ಹಾಗೂ ಅತಿಥಿಗಳಾಗಿ ಆಗಮಿಸಿದ ಸ್ಥಳೀಯ ಶಾಸಕರು, ವಿಧಾನಪರಿಷತ ಸದಸ್ಯರು,ಸಮಾಜ ಮುಖಂಡರು, ಜಿಲ್ಲಾಪಂಚಾಯತ್ ಅಧ್ಯಕ್ಷರು, ಮಂದಾರ್ತಿ ಘಟಕ ಅಧ್ಯಕ್ಷ ಶ್ರೀ ರಾಘವೇಂದ್ರ ಅಲೆಯ ಇವರ ಉಪಸ್ಥಿತಿಯಲ್ಲಿ ಶಿಬಿರವು ಅತ್ಯಂತ ಯಶಸ್ವಿಯಾಗಿ ಜರುಗಿತು. ಅಂದಿನ ಸಮಾರೋಪ ರಕ್ತದಾನ ಶಿಬಿರದಲ್ಲಿ ದಾಖಲೆಯ 1327 ಯೂನಿಟ್ ರಕ್ತ ಸಂಗ್ರಹಿಸಿ, ಸರಣಿ ರಕ್ತದಾನ ಶಿಬಿರಗಳಲ್ಲೇ ಅತ್ಯಂತ ಯಶಸ್ವೀ ಶಿಬಿರವಾಗಿ ಮೂಡಿಬಂದಿತು. ನಿರಂತರವಾಗಿ ರಕ್ತದಾನ ಮಾಡಿ ದಾಖಲೆಯ ರಕ್ತದಾನವನ್ನು ಮಾಡಿದ ದಾನಿಗಳನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಈ ಸಾಲಿನ ರಕ್ತದಾನ ಶಿಬಿರಗಳಲ್ಲಿ ಒಟ್ಟು 6380 ಯೂನಿಟ್ ರಕ್ತವನ್ನು ಸಂಗ್ರಹಿಸಿ ಕೆ.ಎಂ.ಸಿ. ಮಣಿಪಾಲ ಮತ್ತು ಜಿಲ್ಲಾ ಆಸ್ಪತ್ರೆ ರಕ್ತನಿಧಿ, ರೋಟರಿ ರಕ್ತನಿಧಿ, ಶಿವಮೊಗ್ಗ ಇವರಿಗೆ ನೀಡಲಾಗಿದೆ. ರಕ್ತದ ಅಗತ್ಯತೆ ಉಳ್ಳವರು ಸ್ಥಳೀಯ ಸಂಘಟನೆಯ ಅಧ್ಯಕ್ಷರು/ಪದಾಧಿಕಾರಿಗಳನ್ನು ಸಂಪರ್ಕಿಸಿದಾಗ ರಕ್ತವನ್ನು ಒದಗಿಸುವ ವ್ಯವಸ್ಥೆ ಮಾಡುತ್ತಿದ್ದು, ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

2010 ರ ಸಾಲಿನ ಬೃಹತ್ ಸರಣಿ ರಕ್ತದಾನ ಶಿಬಿರಗಳು

ಈ ಸಾಲಿನ ಬೃಹತ್ ಸರಣಿ ರಕ್ತದಾನ ಶಿಬಿರ-2010 ವು ದಿನಾಂಕ: 04-07-2010 ರಂದು ಮಣಿಪಾಲ ಕೆ.ಎಂ.ಸಿ. ಹಳೆ ಗ್ರಂಥಾಲಯ ಕಟ್ಟಡದಲ್ಲಿ ಬೆಳ್ಳಂಪಳ್ಳಿ, ದೊಡ್ಡಣಗುಡ್ಡೆ, ಹಿರಿಯಡ್ಕ ಘಟಕಗಳ ಅತಿಥೇಯತ್ವದಲ್ಲಿ ಡಾ: ಜಿ.ಶಂಕರ್ ರವರಿಂದ ಉದ್ವಾಟನೆಗೊಂಡಿತು. ಈ ಸಭೆಯಲ್ಲಿ ಮಣಿಪಾಲ ರಕ್ತನಿಧಿ ನಿರ್ದೇಶಕಿ ಡಾ: ಸುಧಾ ಭಟ್, ಮೊಗವೀರ ಯುವ ಸಂಘಟನೆಯ ಸ್ಥಾಪಕಾಧ್ಯಕ್ಷ ಸತೀಶ್ ಅಮೀನ್, ಕೇಶವ ಕುಂದರ್, ಸಂಜೀವ ಎಂ.ಎಸ್, ಭಾಗವಹಿಸಿರುತ್ತಾರೆ. ಜಿಲ್ಲಾಧ್ಯಕ್ಷ ಶ್ರೀ ಸತೀಶ್ ಎಂ.ನಾಯ್ಕ್ ಅಧ್ಯಕ್ಷತೆಯನ್ನು ವಹಿಸಿರುತ್ತಾರೆ. ಈ ಶಿಬಿರದಲ್ಲಿ 105 ಯೂನಿಟ್ ರಕ್ತವನ್ನು ಸಂಗ್ರಹಿಸಿ ಯಶಸ್ವೀ ರಕ್ತದಾನ ಶಿಬಿರವಾಗಿ ಮೂಡಿಬಂದಿದೆ. ನಂತರ ವಿವಿಧ ಘಟಕಗಳ ಆಶ್ರಯದೊಂದಿಗೆ ವಿವಿಧ ಪ್ರದೇಶಗಳಲ್ಲಿ ರಕ್ತದಾನ ಶಿಬಿರ ನೆರವೇರಿತು. ಸಮಾರೋಪ ಸಮಾರಂಭವು ದಿನಾಂಕ: 26-09-2010 ರಂದು ಕುಂದಾಪುರ ಘಟಕದ ಅಧ್ಯಕ್ಷ ಶ್ರೀ ಪ್ರಕಾಶ್ ಮೆಂಡನ್ ನೇತೃತ್ವದಲ್ಲಿ ಕುಂದಾಪುರದಲ್ಲಿ ನಡೆಯಿತು. ಮಾರ್ಗದರ್ಶಕರಾದ ಡಾ: ಜಿ. ಶಂಕರ್ ರವರಿಂದ ಉದ್ವಾಟಿಸಿದರು. ಸ್ಥಳೀಯ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ರವರ ಅಧ್ಯಕ್ಷತೆಯಲ್ಲಿ, ಗಣ್ಯರು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು, ಸಮಾರೋಪ ಶಿಬಿರದಲ್ಲಿ ದಾಖಲೆಯ 525 ಯೂನಿಟ್ ರಕ್ತ ಸಂಗ್ರಹಿಸಿ, ಸರಣಿ ರಕ್ತದಾನ ಶಿಬಿರಗಳಲ್ಲೇ ಅತ್ಯಂತ ಯಶಸ್ವೀ ಶಿಬಿರವಾಗಿ ಮೂಡಿಬಂದಿತು.
ನಿರಂತರವಾಗಿ ರಕ್ತದಾನ ಮಾಡಿ ದಾಖಲೆಯ ರಕ್ತದಾನವನ್ನು ಮಾಡಿದ ದಾನಿಗಳನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. 2010-11 ರ ಸಾಲಿನಲ್ಲಿ ನಡೆದ ರಕ್ತದಾನ ಶಿಬಿರಗಳಲ್ಲಿ ಸಂಗ್ರಹವಾದ ಒಟ್ಟು 2588 ಯೂನಿಟ್ ರಕ್ತವನ್ನು ಮಣಿಪಾಲ ಕೆ.ಎಂ.ಸಿ ರಕ್ತನಿಧಿ ಮತ್ತು ಉಡುಪಿ ಸರಕಾರಿ ಆಸ್ಪತ್ರೆಯ ರಕ್ತನಿಧಿ ಕೇಂದ್ರಕ್ಕೆ ನೀಡಲಾಗಿದೆ.

2009 ರ ಸಾಲಿನ ಬೃಹತ್ ಸರಣಿ ರಕ್ತದಾನ ಶಿಬಿರಗಳು

Blood Donation 2009 ರ ರಕ್ತದಾನ ಶಿಬಿರ ಮೊಗವೀರ ಯುವ ಸಂಘಟನೆಯ ವತಿಯಿಂದ ಸರಣಿ ರಕ್ತದಾನ ಶಿಬಿರಕ್ಕೆ ಮೇ 1, 2009 ರಂದು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ರಕ್ತನಿಧಿಯಲ್ಲಿ ಚಾಲನೆ ನೀಡಲಾಯಿತು. ಆ ದಿನ 150 ಮಂದಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಮಾನವೀಯತೆಯನ್ನು ಮೆರೆದರು. ಈ ಬೃಹತ್ ರಕ್ತದಾನ ಶಿಬಿರದ ಸಮಾರೋಪ ಸಮಾರಂಭವು ತಾ.12-09-2009 ರಂದು ಹೆಮ್ಮಾಡಿ ಘಟಕದ ಆತಿಥೇಯತ್ವದಲ್ಲಿ ತ್ರಾಸಿಯ ಕ್ಲಾಸಿಕ್ ಆಡಿಟೋರಿಯಂನಲ್ಲಿ ಜರಗಿತು.ಡಾ. ಜಿ. ಶಂಕರ್ರವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಸಮಾರಂಭದ ಉದ್ಘಾಟನೆಯನ್ನು ಕರ್ನಾಟಕ ಸರಕಾರದ ಮಾನ್ಯ ಗೃಹ ಸಚಿವರಾದ ಡಾ. ವಿ. ಎಸ್. ಆಚಾರ್ಯರವರು ನೆರವೇರಿಸಿದರು ಹಾಗೂ ಅತಿಥಿಗಳಾಗಿ ಸರ್ವಶ್ರೀ ಲಕ್ಶ್ಮೀ ನಾರಾಯಣ, ಎಮ್.ಎಸ್. ಸಂಜೀವ ಕೋಟ, ಗೋಪಾಲ ಪೂಜಾರಿ, ಗೋಪಾಲ ಪುತ್ರನ್, ಸುರೇಶ್ ಕಾಂಚನ್, ಬಿ.ಹಿರಿಯಣ್ಣ, ಮಂಜುನಾಥ ಅರಾಟೆಯವರು ಭಾಗವಹಿಸಿದ್ದರು.
ಒಟ್ಟು 1950 ಯೂನಿಟ್ ರಕ್ತವನ್ನು ಸಂಗ್ರಹಿಸಿ ಕೆ.ಎಂ.ಸಿ ರಕ್ತನಿಧಿ ಮತ್ತು ಉಡುಪಿ ಸರಕಾರಿ ಆಸ್ಪತ್ರೆಯ ರಕ್ತನಿಧಿ ಕೇಂದ್ರಕ್ಕೆ ನೀಡಲಾಗಿದೆ. ಅಲ್ಲದೆ ಸಂಘದ ಪದಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿನ ಅನಾರೋಗ್ಯ ಪೀಡಿತರಿಗೆ ರಕ್ತದ ಅಗತ್ಯತೆ ಇದ್ದಲ್ಲಿ ರಕ್ತವನ್ನು ಒದಗಿಸುವ ಕಾರ್ಯವನ್ನು ಮಾಡುತ್ತಿದ್ದು, ಸರ್ವರ ಪ್ರಶಂಸೆಗೆ ಪಾತ್ರರಾಗಿದ್ದಾರೆ.