Back to homepage

conference

ಸಮಾವೇಶ

ದಿನಾಂಕ: 03-02-2008 ರಂದು ನಡೆದ ಮೊಗವೀರರ ಬೃಹತ್ ಸಮಾವೇಶ

ಮೊಗವೀರ ಯುವ ಸಂಘಟನೆ(ರಿ), ಉಡುಪಿ ಜಿಲ್ಲೆ ಇದರ ಆಶ್ರಯದಲ್ಲಿ, ಡಾ: ಜಿ.ಶಂಕರ್ ಅವರ ಮಾರ್ಗದರ್ಶನದಲ್ಲಿ ಒಳನಾಡು ಮತ್ತು ಕರಾವಳಿ ಮೊಗವೀರರ ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರವನ್ನು ಒತ್ತಾಯಿಸಿ, ಮೊಗವೀರರ ಬೃಹತ್ ಸಮಾವೇಶವು 2008 ಫೆಬ್ರವರಿ 3 ರ ಬೆಳಿಗ್ಗೆ ಗ೦ಟೆ 10.00 ಕ್ಕೆ ಕುಂದಾಪುರದ ಗಾಂಧಿ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಮೊಗವೀರ ಯುವ ಸಂಘಟನೆಯ ಹಿತಚಿಂತಕರಾದ ಡಾ| ಜಿ.ಶಂಕರ್, ಸಂಘಟನೆಯ ಜಿಲ್ಲಾಧ್ಯಕ್ಷರಾದ ಎಮ್.ಎಸ್. ಸಂಜೀವ, ಸ್ಥಾಪಕಾಧ್ಯಕ್ಷ ಸತೀಶ್ ಅಮೀನ್ ಹಾಗೂ ಜಿಲ್ಲಾ ಸಮಿತಿ ಮತ್ತು ಘಟಕಗಳ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಸಮಾವೇಶದ ಪೂರ್ವಭಾವಿಯಾಗಿ ಉಡುಪಿ ಮತ್ತು ದ.ಕ. ಜಿಲ್ಲೆಯಾದ್ಯಂತ ಸುಮಾರು 300 ಜನಸಂಪರ್ಕ ಸಭೆ ನಡೆಸಿದ್ದು, ಉತ್ತಮ ಜನಸ್ಪಂದನೆ ವ್ಯಕ್ತವಾಗಿತ್ತು.
ಸಮಾಜ ಬಾಂಧವರಿಗೆ ಸಮಾವೇಶದಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಫೆ 3 ರಂದು ಮೀನುಗಾರಿಕೆಗೆ ಮತ್ತು ಮೀನು ಮಾರಾಟಕ್ಕೆ ದ.ಕ ಮೊಗವೀರ ಮಹಾಜನ ಸಂಘ ಕಡ್ಡಾಯವಾಗಿ ರಜೆ ಘೋಷಿಸಿತ್ತು. ಮತ್ತು ಎಲ್ಲಾ ಮೀನುಗಾರಿಕಾ ಸ೦ಘಟನೆಗಳು ತಮ್ಮ ಬೆಂಬಲ ಸೂಚಿಸಿತ್ತು.
ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷರು ಎಂ.ಎಸ್. ಸಂಜೀವ ಇವರ ಅಧ್ಯಕ್ಷತೆಯಲ್ಲಿ ಮೊಗವೀರ ಮುಂದಾಳು, ಉದ್ಯಮಿ ಡಾ| ಜಿ.ಶಂಕರ್ ಅವರು ಸಮಾವೇಶವನ್ನು ಉದ್ಘಾಟಿಸಿದರು.ಸಮಾರಂಭದಲ್ಲಿ ಅಖಿಲ ಭಾರತ ಕೋಳಿ (ಕಬ್ಬಲಿಗ) ಸಮಾಜದ ಅಧ್ಯಕ್ಷರಾದ ಸತ್ಯನಾರಾಯಣ ಪವಾರ್, ಕರ್ನಾಟಕ ರಾಜ್ಯ ಕಬ್ಬಲಿಗರ ಸಂಘದ ಅಧ್ಯಕ್ಷರಾದ ವಿಠಲ ಹೆರೂರ, ಮೊಗವೀರ ಯುವ ಸಂಘಟನೆ(ರಿ.), ಉಡುಪಿ ಜಿಲ್ಲೆ ಇದರ ಸ್ಥಾಪಕಾಧ್ಯಕ್ಷ ಸತೀಶ್ ಅಮೀನ್ ಪಡುಕರೆಯವರು ಗೌರವ ಉಪಸ್ಥಿತರಿದ್ದರು. ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬೈಯ ಅಧ್ಯಕ್ಷರಾದ ಅಜಿತ್ ಸುವರ್ಣ, ಬಗ್ವಾಡಿ ಹೋಬಳಿ ಮೊಗವೀರ ಮಹಾಜನ ಸಂಘ, ಮುಂಬೈ ಇದರ ಅಧ್ಯಕ್ಷರಾದ ಕರುಣಾಕರ ಜಿ ಪುತ್ರನ್, ದ.ಕ.ಮೊಗವೀರ ಮಹಾಜನ ಸಂಘ, ಉಚ್ಚಿಲ ಇದರ ಅಧ್ಯಕ್ಷರಾದ ಪ್ರಮೋದ್ ಮಧ್ವರಾಜ್, ಮುಂಬೈಯ ಉದ್ಯಮಿಗಳಾದ ಸುರೇಶ್ ಆರ್ ಕಾಂಚನ್, ಗೋಪಾಲ ಎಸ್ ಪುತ್ರನ್, ಕುಂದಾಪುರದ ಉದ್ಯಮಿ ಕಟ್ಟೆ ಗೋಪಾಲಕೃಷ್ಣ ರಾವ್(ಭೋಜಣ್ಣ) ಮಂಗಳೂರಿನ ಉದ್ಯಮಿ ಲೋಕನಾಥ್ ಬೋಳಾರ್, ಕೋಟದ ಉದ್ಯಮಿ ಆನಂದ ಸಿ ಕುಂದರ್, ಮಾಜಿ ಶಾಸಕರಾದ ಯು. ಆರ್ ಸಭಾಪತಿ, ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಮುಂತಾದವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದರು. ಸಮಾರಂಭದಲ್ಲಿ ಉರ್ವ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಗೋಪಾಲಕೃಷ್ಣ ಸುವರ್ಣ ಬೋಳೂರು, ಮು೦ಬೈಯ ಉದ್ಯಮಿ ಮ೦ಜುನಾಥ ಮೊಗವೀರ ಹಕ್ಲಾಡಿಯವರನ್ನು ಸನ್ಮಾನಿಸಲಾಯಿತು. ಮೊಗವೀರ ಯುವ ಸಂಘಟನೆಯಿಂದ ಕೊಡಮಾಡುವ ಯುವ ಸಾಧಕ ಪ್ರಶಸ್ತಿ ಯನ್ನು ಸಣ್ಣ ಉದ್ದಿಮೆಗಳ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ, ರೂಫ್ ಪ್ಲಾಸ್ಟ್ ಉಡುಪಿ ಇದರ ಮಾಲೀಕರಾದ ಕೆ.ಸಿ.ಅಮೀನ್ರವರಿಗೆ ನೀಡಲಾಯಿತು.
ಉಡುಪಿ ಮತ್ತು ದ.ಕ ಜಿಲ್ಲೆಯ ಮೊಗವೀರ ಸಮಾಜದ 59 ಮಂದಿ ಗಣ್ಯರು ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿದ್ದರು ಮತ್ತು ಮೊಗವೀರ ಸಮಾಜದ ಎಲ್ಲಾ ಗುರಿಕಾರರು ಸಮಾವೇಶದಲ್ಲಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಉಪಸ್ಥಿತರಾಗಿದ್ದ ಗಣ್ಯರು ಮೊಗವೀರ ಸಮಾಜದ ಅತಿ ಶ್ರೇಷ್ಟವಾದ ಗುರು ಪರಂಪರೆ, ಮೊಗವೀರರ ಕೂಡು ಕಟ್ಟುಗಳು, ಗುರಿಕಾರರ ಸಂಪ್ರದಾಯ, ಮೊಗವೀರರ ಶೈಕ್ಷಣಿಕ ಅಭಿವೃಧ್ದಿ ಒಳನಾಡು ಮತ್ತು ಕರಾವಳಿ ಮೊಗವೀರರ ಬಾಂಧವ್ಯ, ಸಮಾಜದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಮುಂತಾದ ಹಲವಾರು ವಿಷಯಗಳ ಬಗ್ಗೆ ವಿಚಾರ ಮಂಡಿಸಿದರು.
ಉಡುಪಿಯಿಂದ ಸಮಾವೇಶ ನಡೆದ ಕುಂದಾಪುರದ ಗಾಂಧಿ ಮೈದಾನದವರೆಗೆ ಸುಮಾರು 1000 ಬೈಕುಗಳ ರ್ಯಾಲಿಯು ನಡೆಯಿತು. ಈ ಸಮಾವೇಶದಲ್ಲಿ ಸುಮಾರು 75 ಸಾವಿರಕ್ಕೂ ಅಧಿಕ ಸಮಾಜ ಬಾಂಧವರು ಭಾಗವಹಿಸಿದ್ದರು. ಆಗಮಿಸಿದ ಎಲ್ಲರಿಗೂ ಭೋಜನದ ವ್ಯವಯನ್ನು ಕಲ್ಪಿಸಲಾಗಿತ್ತು. ನಂತರ ಖ್ಯಾತ ನೃತ್ಯ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಜಿಲ್ಲಾ ಮೊಗವೀರ ಯುವ ಸಂಘಟನೆ ನೇತೃತ್ವದಲ್ಲಿ ಕುಂದಾಪುರದಲ್ಲಿ ನಡೆದ ಸಮಾವೇಶದಲ್ಲಿ ಮಂಡಿಸಿದ ಬೇಡಿಕೆ ಈಡೇರಿಕೆಗೆ ಮೀನುಗಾರ ಪ್ರತಿನಿಧಿಗಳನ್ನೊಳಗೊ೦ಡ ನಿಯೋಗ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಿತ್ತು.
ಮೊಗವೀರ ಯುವ ಸಂಘಟನೆ(ರಿ.) ಉಡುಪಿ ಜಿಲ್ಲೆ ಇದರ ನೇತೃತ್ವದಲ್ಲಿ ಕುಂದಾಪುರದಲ್ಲಿ ನಡೆದ ಸಮಾವೇಶದಲ್ಲಿ ಮಂಡಿಸಲ್ಪಟ್ಟ ಬೇಡಿಕೆಗಳ ಈಡೇರಿಕೆಗಾಗಿ ಸನ್ಮಾನ್ಯ ರಾಜ್ಯಪಾಲರಿಗೆ ಸಲ್ಲಿಸಿದ ಮನವಿ ಮೇರೆಗೆ ರಾಜ್ಯಪಾಲರ ಆಪ್ತ ಸಲಹೆಗಾರರಾದ ಪಿ.ಪಿ.ಪ್ರಭುರವರು ಉಡುಪಿಗೆ ಆಗಮಿಸಿ ಮೀನುಗಾರ ಪ್ರತಿನಿಧಿಗಳನ್ನೊಂಡ ಮೊಗವೀರ ಯುವ ಸಂಘಟನೆಯ ನಿಯೋಗದೊಂದಿಗೆ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಮೀನುಗಾರಿಕೆ ಇಲಾಖೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ಮೀನುಗಾರರ ಸಮಸ್ಯೆಗಳ ಬಗ್ಗೆ ಆಳವಾಗಿ ಚರ್ಚಿಸಿ ಹಲವಾರು ಬೇಡಿಕೆಗಳನ್ನು ಈಡೇರಿಸುವ ಸ್ಪಷ್ಟ ಭರವಸೆಯನ್ನು ನೀಡಿದರು. ಹಾಗೂ ಅದರಂತೆ ಸರಕಾರವು ಕೆಲವು ಬೇಡಿಕೆಗಳನ್ನು ಈಡೇರೆಸಿವೆ.

ದಿನಾಂಕ: 12-03-2006 ರಂದು ನಡೆದ ಮೊಗವೀರರ ಬೃಹತ್ ಸಮಾವೇಶ

ಉತ್ತರ ಭಾರತದಲ್ಲಿ ಮೊಗವೀರ ಸಮುದಾಯಕ್ಕೆ ಪರಿಶಿಷ್ಟ ಪಂಗಡದವರೆಂದು ಗುರುತಿಸಿ ಸೌಲಭ್ಯಗಳನ್ನು ನೀಡುತ್ತಿರುವ ಈ ಸಂದರ್ಭದಲ್ಲಿ ನಮ್ಮ ರಾಜ್ಯದಲ್ಲೂ ಮೊಗವೀರ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿಕೊಳ್ಳಬೇಕು ಎಂಬ ಪ್ರಮುಖ ಬೇಡಿಕೆಯೊಂದಿಗೆ ಹಾಗೂ ಮೀನುಗಾರಿಕೆ ಕುರಿತ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾರ್ಚ್ 12 ರ 2006 ರಂದು ಉಡುಪಿ ಸ್ಯಾಮಿಲಿ ಸಭಾಂಗಣದ ಮುಂಭಾಗದ ಮೈದಾನದಲ್ಲಿ ಬೃಹತ್ ಮೊಗವೀರ ಸಮಾವೇಶ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮವು ಜಿಲ್ಲಾಧ್ಯಕ್ಷ ಸತೀಶ್ ಅಮೀನ್ ಪಡುಕರೆ ಯವರ ಅಧ್ಯಕ್ಷತೆಯಲ್ಲಿ ಜರಗಿತು. ಸುಮಾರು 20 ಸಾವಿರಕ್ಕೂ ಮಿಕ್ಕಿ ಜನರು ಭಾಗವಹಿಸಿದ್ದರು. ಕಳೆದ ಬಾರಿ ಮಂಡಿಸಲ್ಪಟ್ಟ ರಾಜ್ಯ ಬಜೆಟ್ನಲ್ಲಿ ನಮ್ಮ ಹೆಚ್ಚಿನ ಎಲ್ಲಾ ಬೇಡಿಕೆಗಳು ಈಡೇರಿಸಲ್ಪಟ್ಟಿರುವುದ ನಮ್ಮ ಯುವ ಸಂಘಟನೆಯ ಹೋರಾಟಕ್ಕೆ ಸಂದ ಬಹುದೊಡ್ಡ ಜಯವಾಗಿರುತ್ತದೆ.