Back to homepage

Cultural

ಸಾಂಸ್ಕ್ರತಿಕ ಕಾರ್ಯಕ್ರಮ


ಘಟಕ ವೈಭವ- 2012

ದಿನಾಂಕ: 25-12-2012 ರಂದು ಉಡುಪಿಯ ಶ್ಯಾಮಿಲಿ ಹಾಲ್ನಲ್ಲಿ ಮೊಗವೀರ ಯುವ ಸಂಘಟನೆಯ ಅಂತರ್ ಘಟಕಗಳ ಸಾಂಸ್ಕೃತಿಕ ಸ್ಪರ್ದೆ “ಘಟಕ ವೈಭವ -2012” ಆಯೋಜಿಸಲಾಯಿತು. ಈ ಸಮಾರಂಭದ ಉದ್ವಾಟನೆಯನ್ನು ಡಾ: ಜಿ. ಶಂಕರ್ ಇವರು ನೆರವೇರಿಸಿದ್ದು, ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಶ್ರೀ ಯು.ಆರ್. ಸಭಾಪತಿ, ದ.ಕ. ಉಡುಪಿ ಜಿಲ್ಲಾ ಸಹಕಾರಿ ಮೀನುಮಾರಾಟ ಫೆಡರೇಶನ್ ಇದರ ಅಧ್ಯಕ್ಷರಾದ ಶ್ರೀ ಯಶ್ಪಾಲ್ ಸುವರ್ಣ, ಬಗ್ವಾಡಿ ಹೋಬಳಿ ಶಾಖಾಧ್ಯಕ್ಷರಾದ ಶ್ರೀ ಎಂ.ಎಂ.ಸುವರ್ಣ, ಮೊಗವೀರ ಯುವ ಸಂಘಟನೆಯ ಅಧ್ಯಕ್ಷರಾದ ಶ್ರೀ ಜಯ ಸಿ.ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಗಣೇಶ್ ಕಾಂಚನ್ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀ ಸತೀಶ್ ಪುತ್ರನ್ ದೊಡ್ಡಣಗುಡ್ಡೆ ಇವರು ಉಪಸ್ಥಿತರಿದ್ದರು. ೪ ವಿಭಾಗಗಳಲ್ಲಿ ಸ್ಪರ್ದೆ ಏರ್ಪಡಿಸಲಾಗಿತ್ತು. ಜಿಲ್ಲಾ ಸಂಘಟಣೆಯ ಮಾಜಿ ಅಧ್ಯಕ್ಷರಾದ ಎಂ.ಎಸ್.ಸಂಜೀವ, ಸತೀಶ್ ಎಂ.ನಾಯ್ಕ್, ಉಪಾಧ್ಯಕ್ಷರಾದ ಅಶೋಕ್ ಮಂದಾರ್ತಿ, ಶಿವರಾಮ ಕೆ.ಎಂ. ಹಾಗೂ ರಘುರಾಮ ಹುಣ್ಸೆಮಕ್ಕಿ ಇವರು ಯಕ್ಷಗಾನ ವೇಷದಲ್ಲಿ ಒಡ್ಡೋಲಗದೊಂದಿಗೆ ಡಾ: ಜಿ.ಶಂಕರ್ರವರು “ಘಟಕ ವೈಭವ-2012” ರ ಉದ್ಘಾಟನೆಯನ್ನು ನೆರವೇರಿಸಿದರು.
  • ಶಾಸ್ತ್ರೀಯ ನೃತ್ಯದಲ್ಲಿ ಕೋಟೇಶ್ವರ ಘಟಕವು ಪ್ರಥಮ ಸ್ಥಾನ, ಕೋಟ ಘಟಕವು ದ್ವಿತೀಯ ಸ್ಥಾನ
  • ಜಾನಪದ ನೃತ್ಯ ಸ್ಪರ್ಧೆ ವಿಭಾಗದಲ್ಲಿ ಕೋಟ ಘಟಕವು ಪ್ರಥಮ ಸ್ಥಾನ, ಕೋಡಿಬೆಂಗ್ರೆ ಘಟಕವು ದ್ವಿತೀಯ ಸ್ಥಾನ
  • ಸಿನಿಮಾ ನೃತ್ಯ ಸ್ಪರ್ಧೆ ವಿಭಾಗದಲ್ಲಿ ದೊಡ್ಡಣಗುಡ್ಡೆ ಘಟಕವು ಪ್ರಥಮ ಸ್ಥಾನ, ಮಂದಾರ್ತಿ ಘಟಕವು ದ್ವಿತೀಯ ಸ್ಥಾನ
  • ಉತ್ತಮ ಸಂದೇಶವನ್ನು ಹೊತ್ತ ಪ್ರಹಸನ ಸ್ಪರ್ಧೆ ವಿಭಾಗದಲ್ಲಿ ಕೋಟ ಘಟಕವು ಪ್ರಥಮ ಸ್ಥಾನ, ಹಿರಿಯಡ್ಕ ಘಟಕವು ದ್ವಿತೀಯ ಸ್ಥಾನ ಪಡೆಯಿತು.
  • ಸಮಗ್ರ ತಂಡ ಪ್ರಶಸ್ತಿಯಲ್ಲಿ ಕೋಟೇಶ್ವರ ಘಟಕವು ಪ್ರಥಮ ಸ್ಥಾನ, ಕೋಟ ಘಟಕವು ದ್ವಿತೀಯ ಸ್ಥಾನ ಪಡೆಯಿತು.

ನೃತ್ಯ ವೈಭವ - 2007

ಜಿಲ್ಲೆಯ ಜಾನಪದ ಕಲೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಯುವಕ ಯುವತಿಯರಿಗೆ ಜಾನಪದ ನೃತ್ಯ ಸ್ವರ್ದೆಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಅಂತರ್ ಘಟಕಗಳ ನೃತ್ಯ ಸ್ಪರ್ಧೆ “ನೃತ್ಯ ವೈಭವ-2007” ದಿನಾ೦ಕ 27-10-2007 ರ ಶನಿವಾರ ಬೆಳಿಗ್ಗೆ 9.30 ಕ್ಕೆ ಉಡುಪಿ ಅಂಬಲ್ಪಾಡಿಯ ’ಶ್ಯಾಮಿಲಿ’ ಸಭಾಂಗಣದಲ್ಲಿ ನಡೆದಿದು, ಡಾ: ಜಿ.ಶಂಕರ್ ಈ ಕಾರ್ಯಕ್ರಮ ಉದ್ಘಾಟಿಸಿದ್ದು, ವಿವಿಧ ಘಟಕಗಳ ಯುವಕ ಯುವತಿಯರು ತಮ್ಮ ಪ್ರತಿಭೆಯನ್ನು ಈ ವೇದಿಕೆಯಲ್ಲಿ ತೋರಿಸಿಕೊಟ್ಟರು. ತಂಸ ಸ್ಪರ್ದಾ ವಿಭಾಗದಲ್ಲಿ ಜಾನಪದ ಮತ್ತು ಸಿನೇಮಾ ನೃತ್ಯ ಹಾಗೂ ವೈಯಕ್ತಿಕ ವಿಭಾಗದಲ್ಲಿ ಶಾಸ್ತ್ರೀಯ ನೃತ್ರಯ ಸ್ಪರ್ದೆ ನಡೆಯಿತು.
ನೃತ್ಯ ಸ್ಪರ್ದೆ ಮುಗಿದ ನಂತರ ಬಹುಮಾನ ವಿತರಣಾ ಸಮಾರಂಭವು ನಡೆದಿದ್ದು, ಜಿಲ್ಲಾ ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ಸತೀಶ್ ಅಮೀನ್ ಪಡುಕರೆ ಅಧ್ಯಕ್ಷತೆ ವಹಿಸಿರುತ್ತಾರೆ. ಉದ್ಯಮಿಗಳಾದ ಜಿ.ಶಂಕರ್, ಆನಂದ್ ಸಿ.ಕುಂದರ್ ಕೋಟ, ಆನಂದ್ ಪಿ.ಸುವರ್ಣ ಮಲ್ಪೆ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಿಜೇತರಿಗೆ ಸನ್ಮಾನಪತ್ರ, ಸ್ಮರಣಿಕೆ ಮತ್ತು ನಗದು ಬಹುಮಾನವನ್ನು ನೀಡಲಾಯಿತು