Back to homepage

Gurikara Samavesha

ಗುರಿಕಾರರ ಸಮಾವೇಶ

ದಿನಾಂಕ:09-03-2013 ರಂದು ನಡೆದ ಗುರಿಕಾರರ ಸಮಾವೇಶ

ಗುರಿಕಾರರು ಮೊಗವೀರ ಸಮಾಜದ ಹರಿಕಾರರು ಎಂಬ ಧೈಯದೊಂದಿಗೆ ಪ್ರತಿವರ್ಷದಂತೆ ಈ ವರ್ಷವೂ ದಿನಾಂಕ 09-03-2013 ರಂದು ಶ್ಯಾಮಿಲಿ ಸಭಾಂಗಣದಲ್ಲಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಸಹಯೋಗದೊಂದಿಗೆ ಗುರಿಕಾರರ ಸಮಾವೇಶ ಏರ್ಪಡಿಸಲಾಯಿತು.. ಶತಶತಮಾನಗಳ ಹಿಂದಿನ ಗುರುಪರಂಪರೆ ಹಾಗೂ ಇನ್ನಿತರ ಧಾರ್ಮಿಕ ಹಾಗೂ ಭಾವನಾತ್ಮಕ ವಲಯಗಳಿಗೆ ಪ್ರಚೋದನೆ ನೀಡುವ ನಿಟ್ಟಿನಲ್ಲಿ, ಉಪ್ಪಳದಿಂದ ಶಿರೂರುವರೆಗಿನ ಎಲ್ಲಾ ಗುರಿಕಾರರನ್ನು ಒಗ್ಗೂಡಿಸಿ ವಿಚಾರ ವಿನಿಮಯ ಮಾಡಲಾಯಿತು. ಮೊಗವೀರ ಕುಲರತ್ನ ಡಾ.ಜಿ.ಶಂಕರ್ ರವರು ಸಮಾವೇಶ ಉದ್ಘಾಟಿಸಿದರು ಹಾಗು ಗೌರವಾನ್ವಿತ ಗುರಿಕಾರರಿಗೆ ತಾಂಬೂಲ ನೀಡಿ, ಶಾಲು ಹೊದಿಸಿ ಗೌರವ ಧನ ನೀಡಿ ಸತ್ಕರಿಸಿದರು..
ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮೊಗವೀರ ಯುವ ಸಂಘಟನೆಯ ಪದಪ್ರಧಾನ ಸಮಾರಂಭದೊಂದಿಗೆ ಗುರಿಕಾರರ ಸಮಾವೇಶವನ್ನು ಹಮ್ಮಿಕೊಂಡಿದ್ದೆವೆ. ಹಳೆ ಬೇರು, ಹೊಸ ಚಿಗುರು-ಕೂಡಿರಲು ಮರ ಸೊಬಗು ಎಂಬಂತೆ ಸಮಾಜದ ಹಿರಿಯರ ಮತ್ತು ಕಿರಿಯರ, ಯುವಕರ ಸಮಾಗಮ ಇದಾಗಿದ್ದು, ಪರಸ್ಪರ ಸಮನ್ವಯತೆ ಸಮಾಜದ ಏಳಿಗೆಗೆ ಅತ್ಯಗತ್ಯ. ಆ ನಿಟ್ಟಿನಲ್ಲಿ ಮುಂದೆ ಹಮ್ಮಿಕೊಳ್ಳಲಾಗುವ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಹೆಚ್ಚಿನ ರೀತಿಯಲ್ಲಿ ಶ್ರಮಿಸಬೇಕು ಹಾಗೂ ಯುವಕರು ವರದಕ್ಷಿಣೆ ರಹಿತ, ಸರಳ ಆದರ್ಶ ವಿವಾಹಕ್ಕೆ ಮನ ಮಾಡಬೇಕೆಂದು ತಿಳಿಸಿದರು. ಮೆಹೆಂದಿಯಂತಹ ಕಾರ್ಯಕ್ರಮಗಳಲ್ಲಿ ಮಧ್ಯಪಾನದಂತಹ ವ್ಯವಸ್ಥೆಯನ್ನು ಬೇರುಸಮೇತ ಕಿತ್ತೋಗೆಯಬೇಕು ಎಂದು ತಿಳಿಸಿದರು.
ನೂತನ ಅಧ್ಯಕ್ಷರಾದ ಜಯ ಸಿ ಕೋಟ್ಯಾನ್ ರವರು ಮೊಗವೀರ ಸಮಾಜದ ಅಂಗಸಂಸ್ಥೆಗಳಾದ ಗ್ರಾಮಸಭೆ, ಸಂಯುಕ್ತ ಸಭೆ, ಮಹಾಜನ ಮಂಡಳಿ, ಮಹಾಜನ ಸಂಘ ಹಾಗೂ ಎಲ್ಲಾ ಕೂಡಿಗೆಗೆ ಸಂಭಂದಿಸಿದ ಗುರಿಕಾರರು, ಮತ್ತು ಸಂಭಂದಿಸಿದ ೩ ಹೋಬಳಿಗಳು ಸಂಘಟನೆ ಹಾಗೂ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಹಮ್ಮಿಕೊಳ್ಳುವ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಯಶಸ್ಸಿಗೆ ಸಹಕರಿಸುವ ಮೂಲಕ ಮೊಗವೀರ ಸಮಾಜದ ಉನ್ನತಿಗಾಗಿ ಪರಸ್ಪರ ಕೈ ಜೋಡಿಸಬೇಕಾಗಿ ವಿನಂತಿಸಿಕೊಂಡರು. ಈ ಭವ್ಯ ಸಮಾರಂಭಕ್ಕೆ ಸಮಾಜದ ಗಣ್ಯರಾದ ಶ್ರೀ ಲಾಲಾಜಿ ಆರ್.ಮೆಂಡನ್ ಶಾಸಕರು ಕಾಪು ,ಶ್ರೀ ಕೇಶವ ಕುಂದರ್, ಶ್ರೀ ಪ್ರಮೋದ್ ಮಧ್ವರಾಜ್ ಮಲ್ಪೆ , ಶ್ರೀ ಆನಂದ ಸಿ.ಕುಂದರ್, ಶ್ರೀ ಯಶ್ಪಾಲ್ ಎ. ಸುವರ್ಣ, ಶ್ರೀ ಹಿರಿಯಣ್ಣ ಚಾತ್ರಬೆಟ್ಟು, ಶ್ರೀ ತಿಮ್ಮ ಮರಕಾಲ, ಶ್ರೀ ಸತೀಶ್ ಎಮ್.ನಾಯ್ಕ್, ಸಂಜೀವ ಎಮ್ ಎಸ್., ಸಾಕ್ಷಿಯಾದರು. ಈ ಸಮಾರಂಭದಲ್ಲಿ ಮೂರು ಹೋಬಳಿಗಳ ಸುಮಾರು 650 ಕ್ಕೂ ಹೆಚ್ಚು ಗುರಿಕಾರರು ಹಾಗೂ ಮೊಗವೀರ ಯುವ ಸಂಘಟನೆಯ ಎಲ್ಲಾ ಘಟಕಗಳ ಪದಾಧಿಕಾರಿಗಳು, ಜಿಲ್ಲಾ ಸಮಿತಿಯ ಪದಾಧಿಕಾರಿಗಳು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದರು.

ದಿನಾಂಕ:19-02-2012 ರಂದು ನಡೆದ ಗುರಿಕಾರರ ಸಮಾವೇಶ

ಈ ಸಮಾವೇಶದಲ್ಲಿ ಮಂಗಳೂರು, ಬಾರ್ಕೂರು, ಮತ್ತು ಬಗ್ವಾಡಿ ಹೋಬಳಿಗಳ ಮೊಗವೀರ ಗುರಿಕಾರರು ಭಾಗವಹಿಸಿದ್ದರು. ಈ ಸಮಾವೇಶನದಲ್ಲಿ ಭಾಗವಹಿಸಿದ್ದ ಗುರಿಕಾರರು ತಮ್ಮ ಅನಿಸಿಕೆಗಳನ್ನು ನೀಡಿದರು. ಡಾ: ಜಿ.ಶಂಕರ್ ಹಾಗೂ ಉಪಸ್ಥಿತರಿದ್ದ ಅತಿಥಿಗಳು ಗುರಿಕಾರರಿಗೆ ಸೂಕ್ತ ಸ್ಥಾನಮಾನ ನೀಡುವಂತೆ ಸೂಚಿಸಿರುತ್ತಾರೆ. ಈ ಸಮಾವೇಶದಲ್ಲಿ ಭಾಗವಹಿಸಿದ್ದ 475 ಗುರಿಕಾರರನ್ನು ಸನ್ಮಾನಿಸಿ, ಗುರಿಕಾರ ಪದ್ದತಿಯ ನೀತಿ ಸಂಹಿತೆ ಪ್ರತಿಯನ್ನು ವಿತರಿಸಲಾಯಿತು. ಹಾಗೂ ಗುರಿಕಾರರು ತಮ್ಮ ಜವಾಬ್ದಾರಿಯನ್ನು ಮುಂದಿನ ದಿನದಲ್ಲಿ ಉತ್ತಮವಾಗಿ ನಿರ್ವಹಿಸಲು ಕೋರಲಾಯಿತು

ದಿನಾಂಕ:12-02-2011 ರಂದು ನಡೆದ ಗುರಿಕಾರರ ಸಮಾವೇಶ

ಶ್ಯಾಮಿಲಿ ಸಂಭಾಗಣದಲ್ಲಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಸಹಯೋಗದೊಂದಿಗೆ ಮಂಗಳೂರು, ಬಾರ್ಕೂರು, ಮತ್ತು ಬಗ್ವಾಡಿ ಹೋಬಳಿಗಳ ಎಲ್ಲಾ ಗುರಿಕಾರರನ್ನು ಒಗ್ಗೂಡಿಸಿ ಪರಸ್ಪರ ವಿಚಾರ ವಿನಿಮಯ ನಡೆಸಲು ಗುರಿಕಾರರ ಸಮಾವೇಶ ಮತ್ತು ವಿಚಾರ ಸಂಕಿರಣ ನಡೆಸಲಾಯಿತು. ನಮ್ಮ ಮಾರ್ಗದರ್ಶಕಾರದ ಡಾ| ಜಿ. ಶಂಕರ್ ಎಲ್ಲಾ ಗೌರವಾನ್ವಿತ ಗುರಿಕಾರರುಗಳಿಗೂ ತಾಂಬೂಲ ನೀಡಿ, ಶಾಲು ಹೊದಿಸಿ, ಗೌರವಧನ ನೀಡಿ ಗೌರವಿಸಿದರು, ಸಮಾವೇಶ ಉದ್ಗಾಟಿಸಿದ ಡಾ | ಜಿ.ಶಂಕರ್ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ಹೋಬಳಿ, ಭಾಷೆ ಮತ್ತು ಪ್ರಾಂತ್ಯ ಮೂದಲಾದ ಕಟ್ಟುಪಾಡುಗಳಿಂದಗಿ ಹರಿದು ಹಂಚಿ ಹೋಗಿರುವ, ಉಪ್ಪಳದಿಂದ ಶಿರೂರಿನ ವರೆಗಿನ ಮೊಗವೀರ ಸಮಾಜ ಬಾಂಧವರಲ್ಲಿ ನಾವೆಲ್ಲ ಒಂದೇ ಎಂಬ ಭಾವನೆ ಮೂಡಿಸುವುದು, ಮತ್ತು ಈ ವಿಶಿಷ್ಠವಾದ ಗುರಿಕಾರ ಪದ್ದತಿಯ ಮಹತ್ಮದ ಬಗ್ಗೆ ಸಮಾಜದ ಯುವ ಪೀಳಿಗೆಯಲ್ಲಿ ಅರಿವು ಮುಡಿಸುವುದು ಈ ಸಮಾವೇಶದ ಉದ್ದೇಶವಾಗಿದೆ ಮತ್ತು ಗ್ರಾಮ ಸಭೆ ಮತ್ತು ಕೂಡಿಗೆಯಲ್ಲಿ ಯುವಕರು ಸಕ್ರಿಯವಾಗಿ ಭಾಗವಹಿಸುವಂತೆ ವಿನಂತಿಸಿದರು.
ಪ್ರಸ್ತುತ ಗುರುಕಾರರು ಎದುರುಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿ , ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುದಾಗಿ ತಿಳಿಸಿದರು. ಗುರಿಕಾರ ಸಂಪ್ರದಾಯವನ್ನು ಮುಂದು ವರಿಸಿಕೊಂಡು ಹೋಗಲು ಎಲ್ಲಾ ಗುರಿಕಾರರು ಜವಬ್ದಾರಿಯಿಂದ ಕೆಲಸ ಮಾಡಿ ಸಮಾಜ ಕಟ್ಟುವ ಕೆಲಸದಲ್ಲಿ ತೊಂಡಗಿಸಿಕೊಂಡು ತಮ್ಮ ಅಮೂಲ್ಯ ಸೇವೆ ನೀಡುದರೊಂದಿಗೆ ಮುಂದಿನ ಯುವ ಪೀಳಿಗೆಗೆ ಮಾದರಿಯಾಗಬೇಕೆಂದು ಮನವಿ ಮಾಡಿದರು . ಜಿಲ್ಲಾಧ್ಯಕ್ಷರಾದ ಸತೀಶ್ ಎಮ್ .ನಾಯ್ಕ್ ಮಾತನಾಡಿ ಕೂಡಿಗೆ, ಗ್ರಾಮ ಸಭೆ, ಸಂಯಕ್ತ ಸಭೆ, ಮಹಾಜನ ಮಂಡಳಿ, ಮಹಾಜನ ಸಂಘ, ಮೊಗವೀರ ಯುವ ಸಂಘಟನೆ ಇವುಗಳ ನಡುವಣ ಪರಸ್ಪರ ಸಮನ್ವಯತೆ ಮತ್ತು ಮೊಗವೀರ ಸಮಾಜದ ಸಂವಿಧಾನ ವ್ಯವಸ್ಥೆ ಪುನರಪಿಯಾಗಿ ಮೊಗವೀರ ಸಮಾಜದ ಮೂರು ಹೋಬಳಿಗಳು ಒಂದಾಗಿ ಸಮಾಜಮುಖಿ ಚಿಂತನೆಗೆ ಈ ಗುರಿಕಾರ ಸಮಾವೇಶ ಅವಕಾಶ ಮಾಡಿಕೊಟ್ಟಿದೆ ಎಂದು ತಮ್ಮ ಅಧ್ಯಕ್ಷೀಯ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಶ್ರೀ ಲಾಲಾಜಿ ಆರ್. ಮೆಂಡನ್, ಶ್ರೀ ಕೇಶವ ಕುಂದರ್, ಶ್ರೀ ಪ್ರಮೋದ್ ಮಧ್ವರಾಜ್, ಶ್ರೀ ಆನಂದ ಸಿ.ಕುಂದರ್, ಶ್ರೀ ಸುರೇಶ್ ಆರ್.ಕಾಂಚನ್, ಶ್ರೀ ಹಿರಿಯಣ್ಣ ಚಾತ್ರಬೆಟ್ಟ. ಶ್ರೀ ತಿಮ್ಮ ಮರಕಾಲ, ಶ್ರೀ ಸತೀಶ್ ಅಮೀನ್ ಪಡುಕೆರೆ , ಶ್ರೀ ಎಮ್ ಎಸ್ ಸಂಜೀವ ಭಾಗವಹಿಸಿರುತ್ತಾರೆ . ಸಮಾವೇಶದಲ್ಲಿ ಮೂರು ಹೋಬಳಿಗಳ ಸಮಾರು 600ಕ್ಕೂ ಅಧಿಕ ಗುರಿಕಾರರು ಮತ್ತು ಜಿಲ್ಲಾ ಸಂಘಟನೆಯ ಪದಾಧಿಕಾರಿಗಳು, ವಿವಿದ ಘಟಕಗಳ ಪದಾಧಿಕಾರಿಗಳು,ಸದ್ಯಸರು ಭಾಗವಹಿಸಿರುತ್ತಾರೆ.

ದಿನಾಂಕ:31-01-2010 ರಂದು ನಡೆದ ಗುರಿಕಾರರ ಸಮಾವೇಶ

ಡಾ: ಜಿ.ಶಂಕರ್ ಇವರ ಆಶಯದಂತೆ ಗುರಿಕಾರರ ಸಮಾವೇಶವು ಶ್ಯಾಮಿಲಿ ಸಭಾಂಗಣದಲ್ಲಿ ಜಿಲ್ಲಾಧ್ಯಕ್ಷ ಶ್ರೀ ಸತೀಶ್ ಎಂ. ನಾಯ್ಕ್ ಕೋಟೇಶ್ವರ ಅಧ್ಯಕ್ಷತೆಯಲ್ಲಿ ಮೊಗವೀರ ಮುಂದಾಳು ಡಾ: ಜಿ. ಶಂಕರ್ರವರು ಕಾರ್ಯಕ್ರಮ ಉದ್ವಾಟಿಸಲ್ಪಟ್ಟಿತು. ಈ ಸಮಾರಂಭದಲ್ಲಿ ಉಪ್ಪಳ ಮಂಜೇಶ್ವರದಿಂದ, ಬೈಂದೂರು ಶೀರೂರು ತನಕದ ಬಾರ್ಕೂರು, ಬಗ್ವಾಡಿ, ಮಂಗಳೂರು ಹೋಬಳಿಯ ಗುರಿಕಾರರು, ಮೊಗವೀರ ಯುವ ಸಂಘಟನೆಯ ಪದಾಧಿಕಾರಿಗಳು, ಸದಸ್ಯರು ಮತ್ತು ಸಮಾಜ ಭಾಂದವರು ಭಾಗವಹಿಸಿರುತ್ತಾರೆ. ಈ ಸಮಾರಂಭದಲ್ಲಿ ಗೌರವಾನ್ವಿತ ಗುರಿಕಾರರನ್ನು ಗೌರವಧನ ನೀಡಿ, ಶಾಲು ಹಾಕಿ ಸನ್ಮಾನಿಸಲಾಯಿತು. 3 ಹೋಬಳಿಗಳ ಕುರಿತು ಕೆ.ಕೆ. ಕಾಂಚನ್, ವಿಶ್ವನಾಥ ಎಂ. ಕೂರಾಡಿ, ಪ್ರಮೋದ್ ಮಧ್ವರಾಜ್ ಮಾತನಾಡಿದರು.
ಅತಿಥಿಗಳಾಗಿ ಲಾಲಾಜಿ ಆರ್. ಮೆಂಡನ್, ಶಾಸಕರು, ಉದ್ಯಮಿಗಳಾದ: ಶ್ರೀ ಪ್ರಮೋದ್ ಮಧ್ವರಾಜ್, ಭುವನೇಂದ್ರ ಕಿದಿಯೂರು, ಅಜಿತ್ ಸುವರ್ಣ, ಗೋಪಾಲ ಎಸ್.ಪುತ್ರನ್, ಸುರೇಶ್ ಆರ್.ಕಾಂಚನ್, ಆನಂದ ಸಿ.ಕುಂದರ್, ಕೇಶವ ಕುಂದರ್, ಸದಾನಂದ ಕೋಟ್ಯಾನ್, ಅಧ್ಯಕ್ಷರು, ಯುವಕ ಸಂಘ ಮುಂಬೈ, ಪುರುಷೋತ್ತಮ ಶ್ರೀಯಾನ್, ಉಪಾದ್ಯಕ್ಷರು, ಮುಂಬೈ ಯುವಕ ಸಂಘ, ಯಶಪಾಲ್ ಎ.ಸುವರ್ಣ, ಅಧ್ಯಕ್ಷರು, ದ.ಕ. ಉಡುಪಿ ಜಿಲ್ಲಾ ಮೀನು ಮಾರಾಟ ಪೆಡರೇಶನ್, ಹಿರಿಯಣ್ಣ ಚಾತ್ರಬೆಟ್ಟ. ಶಾಖಾಧ್ಯಕ್ಷರು, ಬಗ್ವಾಡಿ ಹೋಬಳಿ, ತಿಮ್ಮ ಮರಕಾಲ, ಅಧ್ಯಕ್ಷರು ಬಾರಕೂರು ಸಂಯುಕ್ತ ಸಭೆ ಇವರು ಭಾಗವಹಿಸಿರುತ್ತಾರೆ. ಸಮಾರಂಭವನ್ನು ಉದ್ದೇಶಿಸಿ ಡಾ: ಜಿ.ಶಂಕರ್, ಮಾತನಾಡಿದರು. ಜಿಲ್ಲಾ ಅಧ್ಯಕ್ಷರಾದ ಶ್ರೀ ಸತೀಶ್ ಎಂ. ನಾಯ್ಕ್ ಅಧ್ಯಕ್ಷೀಯ ಭಾಷಣ ಮಾಡಿದರು.

ದಿನಾಂಕ:23-11-2008 ರಂದು ನಡೆದ ಗುರಿಕಾರರ ಸಮಾವೇಶ

ಡಾ: ಜಿ.ಶಂಕರ್ ಇವರ ಆಶಯದಂತೆ ಶತಮಾನಗಳ ಹಿಂದಿನ ಇತಿಹಾಸವಿರುವ, ಬಹಳ ಅಪರೂಪವಾದ ಮತ್ತು ವಿಶಿಷ್ಟವಾದ ಮೊಗವೀರರ ಗುರಿಕಾರ ಪದ್ದತಿಯನ್ನು, ಮೊಗವೀರ ಸಮಾಜದ ಯುವ ಜನರ ಸಾಮರಸ್ಯ ಮತ್ತು ಮಾರ್ಗದರ್ಶನಕ್ಕಾಗಿ ಹಾಗೂ ಗುರಿಕಾರ ಪದ್ದತಿಯನ್ನು ಆಧುನಿಕ ಯುಗದ ಯುವ ಪೀಳಿಗೆಯಲ್ಲಿ ಮುಂದುವರೆಸಿಕೊಂಡು ಹೋಗುವರೇ ಪ್ರಯತ್ನಿಸುವ ನಿಟ್ಟಿನಲ್ಲಿ ಮತ್ತು ಅಂದಿನ ವಿಚಾರ ಸಂಕಿರಣದಲ್ಲಿ 1967 ರಲ್ಲಿ ಕಾಲವಾದ ಮೊಗವೀರರ ಕುಲಗುರುಗಳಾದ ಮಾಧವ ಮಂಗಲ ಪೂಜಾರ್ಯರ ನ೦ತರ ತಟಸ್ಥವಾದ ಗುರುಪರಂಪರೆಯನ್ನು ಪುನರಾರಂಬಿಸುವ ಕುರಿತು ಮ೦ಗಳೂರು, ಬಾರ್ಕೂರು ಮತ್ತು ಬಗ್ವಾಡಿ ಹೋಬಳಿಗಳ ಎಲ್ಲಾ ಗುರಿಕಾರರನ್ನು ಒಗ್ಗೂಡಿಸಿ ಪರಸ್ಪರ ವಿಚಾರ ವಿನಿಮಯ ನಡೆಸಲು ಪ್ರಥಮವಾಗಿ ಗುರಿಕಾರರ ಸಮಾವೇಶ ಮತ್ತು ವಿಚಾರ ಸಂಕಿರಣ ವು 2008 ನವಂಬರ್ 23 ರ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 3.00 ಗಂಟೆಯವರೆಗೆ ಉಡುಪಿ ಅಂಬಲಪಾಡಿಯ ಶ್ಯಾಮಿಲಿ ಸಭಾಂಗಣದಲ್ಲಿ ನಡೆಯಿತು. .
ಈ ವಿಚಾರ ಸಂಕಿರಣದಲ್ಲಿ ಮೊಗವೀರ ಸಂಘಟನೆಯಿಂದ ರಚಿತವಾದ ಮೊಗವೀರ ಸಿಂಚನ ಪುಸ್ತಕ ಬಿಡುಗಡೆಗೊಳಿಸಲಾಯಿತು. ಮೊಗವೀರ ಸಮಾಜದ ಗುರುಪರಂಪರೆ, ಗುರಿಕಾರ ಪದ್ದತಿ, ಮೊಗವೀರ ವಿವಾಹ ಪದ್ದತಿ, ಮಹಾಜನ ಮಂಡಳಿ, ಸಂಯುಕ್ತ ಸಭೆ, ಗ್ರಾಮ ಸಭೆ ಮತ್ತು ದಾರ್ಮಿಕ ಕೇಂದ್ರಗಳ ಇತಿಹಾಸದ ವಿವರಗಳನ್ನೊಳಗೊಂಡ ಸಂಪೂರ್ಣ ಮಾಹಿತಿ ಮೊಗವೀರ ಸಿಂಚನ ಪುಸ್ತಕದಲ್ಲಿ ಒಳಗೊಂಡಿದೆ.
ಈ ಸಮಾರಂಭವನ್ನು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್, ಅಂಬಲಪಾಡಿ ಇದರ ಅಧ್ಯಕ್ಷರಾದ ಡಾ. ಜಿ. ಶಂಕರ್ರವರು ಉದ್ಘಾಟಿಸಿದರು. ಉರ್ವ ಮಂಗಳೂರು ಶ್ರೀ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ಗೋಪಾಲಕೃಷ್ಣ ಸುವರ್ಣ ಬೋಳೂರು ಶುಭಾಶಂಸನೆಗೈದರು. ಅಧ್ಯಕ್ಷತೆಯನ್ನು ಯುವ ಸಂಘಟನೆಯ ಜಿಲ್ಲಾಧ್ಯಕ್ಷ ಎಮ್.ಎಸ್.ಸಂಜೀವ ವಹಿಸಿದ್ದರು. ದ.ಕ.ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಪ್ರಮೋದ್ ಮಧ್ವರಾಜ್, ಮೊಗವೀರ ವ್ಯವಸ್ಥಾಪಕ ಮ೦ಡಳಿ ಅಧ್ಯಕ್ಷ ಅಜಿತ್ ಸುವರ್ಣ, ಮುಂಬೈ ಬಗ್ವಾಡಿ ಮೊಗವೀರ ಮಹಾಜನ ಸ೦ಘದ ಅಧ್ಯಕ್ಷ ನಾಣು ಡಿ.ಚ೦ದನ್, ಕೋಟದ ಉದ್ಯಮಿ ಆನಂದ ಸಿ.ಕುಂದರ್, ಮುಂಬೈ ಮೊಗವೀರ ಯುವಕ ಸಂಘದ ಅಧ್ಯಕ್ಷ ಸದಾನಂದ ಕೋಟ್ಯಾನ್, ಉಪಾಧ್ಯಕ್ಷ ಪುರುಷೋತ್ತಮ ಶ್ರೀಯಾನ್, ಮುಂಬೈ ಉದ್ಯಮಿಗಳಾದ ಸುರೇಶ್ ಆರ್.ಕಾಂಚನ್, ಗೋಪಾಲ್ ಎಸ್.ಪುತ್ರನ್, ಮೊಗವೀರ ಯುವ ಸಂಘಟನೆಯ ಸ್ಥಾಪಾಕಧ್ಯಕ್ಷ ಸತೀಶ್ ಅಮೀನ್ ಪಡುಕರೆ, ಬಗ್ವಾಡಿ ಹೋಬಳಿ ಮೊಗವೀರ ಮಹಾಜನ