Back to homepage

Health Card

ಆರೋಗ್ಯ ಸುರಕ್ಷಾ ಕಾರ್ಡು

ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡು ವಿತರಣಾ ಸಮಾರಂಭ -2012

ಮೊಗವೀರ ಯುವ ಸಂಘಟನೆ ಹಾಗೂ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಜಂಟಿ ಕಾರ್ಯಕ್ರಮಗಳಲ್ಲೆ ಅತ್ಯಂತ ಜನಮನ್ನಣೆ ಪಡೆದ ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡು ವಿತರಣಾ ಕಾರ್ಯಕ್ರಮವು ಮಣಿಪಾಲ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ದಿನಾಂಕ 01-09-2012 ರಂದು ಪೂರ್ವಾಹ್ನ 10.00 ಗಂಟೆಗೆ ಶ್ಯಾಮಿಲಿ ಸಭಾಂಗಣದಲ್ಲಿ ನೆರವೇರಿತು.
ಈ ಕಾರ್ಯಕ್ರಮದಲ್ಲಿ ಸುಮಾರು 15500 ಕುಟುಂಬಗಳ 70000 ಕ್ಕೂ ಅಧಿಕ ಫಲಾನುಭವಿಗಳಿಗೆ ಆರೋಗ್ಯ ಸುರಕ್ಷಾ ಕಾರ್ಡುಗಳನ್ನು ವಿತರಿಸಲಾಯಿತು. ಕರ್ನಾಟಕ ಸರ್ಕಾರದ ಗೌರವಾನ್ವಿತ ಉಪಮುಖ್ಯಮಂತ್ರಿಗಳಾದ ಕೆ.ಎಸ್. ಈಶ್ವರಪ್ಪನವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು ಮತ್ತು ಸಂಘಟನೆ ಹಾಗೂ ಟ್ರಸ್ಟ್ ನ ಸಾಮಾಜಿಕ ಕಳಕಳಿಯನ್ನು ಶ್ಲಾಘಿಸಿದರು. ಉಡುಪಿಯ ಶಾಸಕರಾದ ಮಾನ್ಯ ರಘುಪತಿ ಭಟ್ರವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮೀನುಗಾರಿಕಾ ಮತ್ತು ಬಂದರು ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಲಾಲಾಜಿ ಮೆಂಡನ್, ಲೋಕಸಭಾ ಸದಸ್ಯರಾದ ಜಯಪ್ರಕಾಶ್ ಹೆಗ್ಡೆ, ಶ್ರೀ ಎ.ಜಿ.ಕೊಡ್ಗಿ, ಶ್ರೀ ಹೆಚ್.ಎಸ್.ಬಲ್ಲಾಳ್, ಶ್ರೀ ಕಟಪಾಡಿ ಶಂಕರ ಪೂಜಾರಿ , ಶ್ರೀ ಯು.ಆರ್. ಸಭಾಪತಿ , ಶ್ರೀ ಪ್ರಮೋದ್ ಮಧ್ವರಾಜ್ , ಶ್ರೀ ಕಿರಣ್ಕುಮಾರ್ , ಶ್ರೀ ಯಶ್ಪಾಲ್ ಸುವರ್ಣ , ಶ್ರೀ ಆನಂದ ಸಿ.ಕುಂದರ್ , ಶ್ರೀ ಎಮ್ .ಎಮ್. ಸುವರ್ಣ , ಶ್ರೀ ಕೇಶವ ಕುಂದರ್ , ಶ್ರೀ ತಿಮ್ಮ ಮರಕಾಲ ಇತರ ಗಣ್ಯರು ಅತಿಥಿಗಳಾಗಿ ಉಪಸ್ಥಿತರಿದ್ದರು. ಈ ಯೋಜನೆಯಲ್ಲಿ ರೂ. 30,000 ಮೊತ್ತದ ಉಚಿತ ಚಿಕಿತ್ಸಾ ಸೌಲಭ್ಯ ಆರೋಗ್ಯ ಕಾರ್ಡು ಪಡೆದಿರುವವರಿಗೆ ಇರುತ್ತದೆ ಹಾಗೂ ಅಪಘಾತ ವಿಮೆಯು ಒಳಗೊಂಡಿದೆ. ಮಣಿಪಾಲ ಆರೋಗ್ಯ ಕಾರ್ಡುಗಳನ್ನು ಪಡೆದಿರುವ ಫಲಾನುಭವಿಗಳು ಈ ಕಾರ್ಡಿನ ಸದುಪಯೋಗ ಪಡೆದುಕೊಂಡಿರುತ್ತಾರೆ.

ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡು ವಿತರಣಾ ಸಮಾರಂಭ -2011

ನಮ್ಮ ಸಂಘಟನೆ ಹಾಗೂ ಜಿ. ಶಂಕರ್ ಪ್ಯಾಮಿಲಿ ಟ್ರಸ್ಟ್ ಹಾಗೂ ಮಣಿಪಾಲ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಸುಮಾರು 10,000 ಕುಟುಂಬಗಳಿಗೆ (40 ಸಾವಿರ ಫಲಾನುಭವಿಗಳಿಗೆ) ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡನ್ನು ವಿತರಿಸುವ ಸಮಾರಂಭವು ದಿನಾಂಕ: 26-11-2011 ಶನಿವಾರ ಶ್ಯಾಮಿಲಿ ಸಭಾಂಗಣದ ಮುಂಭಾಗದ ಮೈದಾನದಲ್ಲಿ ಹಮ್ಮಿಕೊಳ್ಳಲಾಯಿತು. ಈ ಯೋಜನೆಯಲ್ಲಿ ರೂ. 30,000 ಮೊತ್ತದ ಉಚಿತ ಚಿಕಿತ್ಸಾ ಸೌಲಭ್ಯ ಆರೋಗ್ಯ ಕಾರ್ಡು ಹೋಲ್ಡರ್ಗೆ ಇರುತ್ತದೆ.

ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡು ವಿತರಣಾ ಸಮಾರಂಭ -2010

ನಮ್ಮ ಸಂಘಟನೆ ಹಾಗೂ ಜಿ. ಶಂಕರ್ ಪ್ಯಾಮಿಲಿ ಟ್ರಸ್ಟ್ ಹಾಗೂ ಮಣಿಪಾಲ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಸುಮಾರು 7500 ಕುಟುಂಬಗಳಿಗೆ (40 ಸಾವಿರ ಫಲಾನುಭವಿಗಳಿಗೆ) ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡನ್ನು ವಿತರಿಸುವ ಸಮಾರಂಭವು ಸುಮಾರು 10000 ಜನರ ಉಪಸ್ಥಿತಿಯಲ್ಲಿ ದಿನಾಂಕ: 23-10-2010 ರಂದು ಕುಂದಾಪುರ ಗಾಂಧಿ ಮೈದಾನದಲ್ಲಿ ಕರ್ನಾಟಕ ಸರಕಾರದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪರವರಿಂದ ಉದ್ವಾಟನೆಗೊಂಡಿತು.
ಈ ಸಮಾರಂಭದ ಅಧ್ಯಕ್ಷತೆಯನ್ನು ಡಾ: ವಿ.ಎಸ್.ಆಚಾರ್ಯ, ಮಾನ್ಯ ಉನ್ನತ ಶಿಕ್ಷಣ ಸಚಿವರು ವಹಿಸಿರುತ್ತಾರೆ. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಜನಪ್ರತಿನಿಧಿಗಳಾದ ಶ್ರೀ ಕೃಷ್ಣ ಪಾಲೇಮಾರ್, ಶ್ರೀ ಡಿ.ವಿ. ಸದಾನಂದಗೌಡ, ಶ್ರೀ ಬಿ.ವೈ. ರಾಘವೇಂದ್ರ, ಶ್ರೀ ಕೆ.ಪ್ರತಾಪಚಂದ್ರ ಶೆಟ್ಟಿ, ಶ್ರೀ ಕೆ. ರಘುಪತಿ ಭಟ್, ಶ್ರೀ ಹಾಲಾಡಿ ಶ್ರೀನಿವಾಸ ಶೆಟ್ಟಿ, ಶ್ರೀ ಲಾಲಾಜಿಆರ್.ಮೆಂಡನ್, ಶ್ರೀ ಲಕ್ಷ್ಮೀ ನಾರಾಯಣ, ಶ್ರೀ ಶ್ರೀನಿವಾಸ ಪೂಜಾರಿ, ಹಾಗೂ ಮಣಿಪಾಲ ವಿಶ್ವವಿದ್ಯಾಲಯದ ಸಹಕುಲಪತಿಗಳಾದ ಡಾ: ಎಚ್.ಎಸ್.ಬಲ್ಲಾಳ್, ಉದ್ಯಮಿಗಳಾದ ಶ್ರೀ ಪ್ರಮೋದ್ ಮಧ್ವರಾಜ್, ಶ್ರೀ ಸುರೇಶ್ಕಾಂಚನ್, ಶ್ರೀ ಗೋಪಾಲ ಎಸ್. ಪುತ್ರನ್, ಶ್ರೀ ಕೇಶವ ಕುಂದರ್ ಭಾಗವಹಿಸಿರುತ್ತಾರೆ. ಈ ಯಶಸ್ವೀ ಕಾರ್ಯಕ್ರಮವು ನಮ್ಮ ಸಮಾಜದ ಮಾರ್ಗದರ್ಶಕರಾದಡಾ: ಜಿ. ಶಂಕರ್ ಹಾಗೂ ನಮ್ಮ ಸಂಘಟನೆಯಅಧ್ಯಕ್ಷರಾದ ಶ್ರೀ ಸತೀಶ್ ಎಂ. ನಾಯ್ಕ್ ರವರ ನೇತೃತ್ವದಲ್ಲಿ ಹಾಗೂ ಜಿಲ್ಲಾ ಸಮಿತಿ ಮತ್ತು ಎಲ್ಲಾ ಘಟಕದ ಅಧ್ಯಕ್ಷರುಗಳು, ಪದಾದಿಕಾರಿಗಳು, ಸದಸ್ಯರ ಸಹಕಾರದೊಂದಿಗೆ ಯಶಸ್ವಿಯಾಗಿ ಮೂಡಿಬಂದಿರುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಪಡಕೊಂಡಿದ್ದು, ಸಾರ್ವತ್ರಿಕ ಪ್ರಶಂಸೆಗೆ ಪಾತ್ರವಾಗಿದೆ.

ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡು ವಿತರಣಾ ಸಮಾರಂಭ -2009

ಸಂಘಟನೆಯು ಜಿ. ಶಂಕರ್ ಪ್ಯಾಮಿಲಿ ಟ್ರಸ್ಟ್ ಮತ್ತು ಮಣಿಪಾಲ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಕಡಿಮೆ ವಾರ್ಷಿಕ ವರಮಾನವಿರುವ ಎಲ್ಲಾ ವರ್ಗದ 4500 ಬಡ ಕುಟುಂಬಗಳಿಗೆ ವಿತರಿಸಲಾಯಿತು. ಶ್ಯಾಮಿಲಿ ಹಾಲ್ನಲ್ಲಿ ನಡೆದ ಈ ಆರೋಗ್ಯ ಕಾರ್ಡು ವಿತರಣಾ ಸಮಾರಂಭದ ಉದ್ವಾಟನೆಯನ್ನು ಭಾರತ ಸರಕಾರದ ಸಚಿವರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ರವರು ನೆರವೇರಿಸಿದರು. ಮಣಿಪಾಲ ವಿಶ್ವ ವಿದ್ಯಾಲಯದ ಸಹ ಕುಲಪತಿಗಳಾದ ಡಾ. ಎಚ್. ಎಸ್. ಬಲ್ಲಾಳ್ ರವರ ಅಧ್ಯಕ್ಷತೆಯಲ್ಲಿ ಜರಗಿದ ಈ ಸಮಾರಂಭದಲ್ಲಿ ಕರ್ನಾಟಕದ ಗೌರವಾನ್ವಿತ ಲೋಕಾಯುಕ್ತರಾದ ಜಸ್ಟೀಸ್ ಸಂತೋಷ್ ಎನ್.ಹೆಗ್ಡೆಯವರು ಆರೋಗ್ಯಕಾರ್ಡ್ ಬಿಡುಗಡೆಗೊಳಿಸಿದರು.
ಸರ್ವಶ್ರೀ ಡಾ. ಜಿ. ಶಂಕರ್, ಸತೀಶ್ಅಮೀನ್ ಪಡುಕರೆ, ಎಮ್. ಎಸ್. ಸಂಜೀವ, ಡಾ. ಶ್ರೀಪತಿ ರಾವ್, ಲಾಲಾಜಿಆರ್. ಮೆಂಡನ್ ಮತ್ತು ಪ್ರಮೋದ್ ಮಧ್ವರಾಜ್ರವರು ಉಪಸ್ಥಿತರಿದ್ದರು. ಈ ಯೋಜನೆಯಲ್ಲಿ ರೂ. 30,000 ಮೊತ್ತದ ಉಚಿತ ಚಿಕಿತ್ಸಾ ಸೌಲಭ್ಯ ಮತ್ತು ರೂ. 1.00 ಲಕ್ಷ ಮೌಲ್ಯದ ಅಪಘಾತ ವಿಮಾ ಸೌಲಭ್ಯ ಆರೋಗ್ಯ ಕಾರ್ಡು ಹೋಲ್ಡರ್ಗೆ ಇರುತ್ತದೆ. ಇತರ ಸದಸ್ಯರಿಗೆ 30000-00 ವಿಮಾ ಸೌಲಭ್ಯ 1 ವರ್ಷದವರೆಗೆ ಹೊಂದಿರುತ್ತದೆ. ಎಲ್ಲಾ ವರ್ಗದ ಜನರು ಈ ಆರೋಗ್ಯ ಸುರಕ್ಷಾ ಕಾರ್ಡಿನ ಸದುಪಯೋಗ ಪಡಕೊಂಡಿರುತ್ತಾರೆ.

ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡು ವಿತರಣಾ ಸಮಾರಂಭ -2008

ಸಂಘಟನೆಯು ಜಿ.ಶಂಕರ್ ಇವರ ಮಾರ್ಗದರ್ಶನದಲ್ಲಿ ಯುವ ಸಂಘಟನೆಯ ಎಲ್ಲಾ ಪದಾಧಿಕಾರಿಗಳ ಸಹಕಾರದೊಂದಿಗೆ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಮತ್ತು ಮಣಿಪಾಲ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ 2008 ರಲ್ಲಿ ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ 2000 ಕುಟುಂಬಗಳಿಗೆ ಆರೋಗ್ಯ ಸುರಕ್ಷಾಕಾರ್ಡು ವಿತರಿಸಲಾಯಿತು. ಉಡುಪಿ ಅಮ್ಮಣ್ಣಿ ರಾಮಣ್ಣ ಸಭಾಂಗಣದಲ್ಲಿ ವಿತರಣಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಶ್ರೀ ಜಿ.ಶಂಕರ್ ಈ ಕಾರ್ಯಕ್ರಮವನ್ನು ಉದ್ವಾಟಿಸಿದ್ದು, ಅಧ್ಯಕ್ಷತೆಯನ್ನು ಎಂ.ಎಸ್. ಸಂಜೀವ ಇವರು ವಹಿಸಿರುತ್ತಾರೆ. ಮಣಿಪಾಲ ವಿಶ್ವವಿದ್ಯಾಲಯದ ರಾಮ್ದಾಸ್ ಪೈ ಇವರನ್ನು ಸನ್ಮಾನಿಸಲಾಯಿತು. ಉಡುಪಿ ಶಾಸಕ ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಮೆಂಡನ್, ಮಾಜಿ ಶಾಸಕ ವಿನಯಕುಮಾರ್ ಸೊರಕೆ ಇವರು ಉಪಸ್ಥಿತರಿದ್ದರು. ಸ್ಥಾಪಕ ಅಧ್ಯಕಷ ಸತೀಶ್ ಅಮೀನ ಪಡುಕರೆಇವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಆರೋಗ್ಯ ಸುರಕ್ಷಾ ಯೋಜನೆ :

ಈ ಯೋಜನೆಯಲ್ಲಿ 30000 ಮೊತ್ತದ ಉಚಿತ ಚಿಕಿತ್ಸಾ ಸೌಲಭ್ಯ ಮತ್ತು ಅಪಘಾತ ವಿಮಾ ಸೌಲಭ್ಯ ಒಂದು ವರ್ಷದ ಅವಧಿಗೆ ಹೊಂದಿರುತ್ತದೆ.

2008-09 ರಲ್ಲಿ 2000 ಕುಟುಂಬಗಳಿಗೆ
2009-10 ರಲ್ಲಿ 4500 ಕುಟುಂಬಗಳಿಗೆ
2010-11 ರಲ್ಲಿ 7500 ಕುಟುಂಬಗಳಿಗೆ
2011-12 ರಲ್ಲಿ 10,000 ಕುಟುಂಬಗಳಿಗೆ
2012-13 ರಲ್ಲಿ 15,500 ಕುಟುಂಬಗಳಿಗೆ
2013-14 ರಲ್ಲಿ 18,700 ಕುಟುಂಬಗಳಿಗೆ ವಿತರಿಸಲಾಗಿದೆ.