Back to homepage

Installation

ಪದಾಧಿಕಾರಿಗಳ ಪದಪ್ರಧಾನ ಸಮಾರಂಭ


2012-2013 ರ ಸಾಲಿನ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ
ಜಿಲ್ಲಾ ಸಂಘಟನೆಯ 2012-2013 ರ ಸಾಲಿನ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭವು ದಿನಾಂಕ: 09-03-2013 ರಂದು ಶ್ಯಾಮಿಲಿ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷರಾದ ಸತೀಶ್ ಎಮ್. ನಾಯ್ಕ್ ರವರು ಸಂಘಟನೆಯ ಲಾಂಛನವನ್ನು ನೂತನ ಅಧ್ಯಕ್ಷರಾದ ಜಯ ಸಿ ಕೋಟ್ಯಾನ್ ರವರಿಗೆ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ಹಾಗೆಯೇ ನಿರ್ಗಮನ ಕಾರ್ಯದರ್ಶಿಗಳಾದ ಶಿವರಾಮ್ ಕೆ.ಎಮ್. ಅವರು ನೂತನ ಕಾರ್ಯದರ್ಶಿಗಳಾದ ಗಣೇಶ್ ಕಾಂಚನ್ ರವರಿಗೆ ಸಂಘಟನೆಯ ಸಮಗ್ರ ಮಾಹಿತಿಯೊಳಗೊಂಡ ಕಡತವನ್ನು ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ಹಾಗೂ 37 ಮಂದಿ ನೂತನ ಪದಾಧಿಕಾರಿಗಳು ಪ್ರತಿಜ್ಝಾವಿಧಿ ಸ್ವೀಕರಿಸಿದರು.
ಜಿಲ್ಲಾ ಸಂಘಟನೆಯ 2012-2013 ರ ಸಾಲಿನ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭವು ದಿನಾಂಕ: 09-03-2013 ರಂದು ಶ್ಯಾಮಿಲಿ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷರಾದ ಸತೀಶ್ ಎಮ್. ನಾಯ್ಕ್ ರವರು ಸಂಘಟನೆಯ ಲಾಂಛನವನ್ನು ನೂತನ ಅಧ್ಯಕ್ಷರಾದ ಜಯ ಸಿ ಕೋಟ್ಯಾನ್ ರವರಿಗೆ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ಹಾಗೆಯೇ ನಿರ್ಗಮನ ಕಾರ್ಯದರ್ಶಿಗಳಾದ ಶಿವರಾಮ್ ಕೆ.ಎಮ್. ಅವರು ನೂತನ ಕಾರ್ಯದರ್ಶಿಗಳಾದ ಗಣೇಶ್ ಕಾಂಚನ್ ರವರಿಗೆ ಸಂಘಟನೆಯ ಸಮಗ್ರ ಮಾಹಿತಿಯೊಳಗೊಂಡ ಕಡತವನ್ನು ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ಹಾಗೂ 37 ಮಂದಿ ನೂತನ ಪದಾಧಿಕಾರಿಗಳು ಪ್ರತಿಜ್ಝಾವಿಧಿ ಸ್ವೀಕರಿಸಿದರು.

2010-2011 ರ ಸಾಲಿನ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ
2010-2011 ರ ಸಾಲಿನ ಅಧ್ಯಕ್ಷರಾಗಿ ಶ್ರೀ ಸತೀಶ್ ಎಂ. ನಾಯ್ಕ್ ಕೋಟೇಶ್ವರ ಇವರು ಸರ್ವಾನುಮತದಿಂದ ಆಯ್ಕೆಯಾಗಿದ್ದು, ನೂತನ ಪದಾಧಿಕಾರಿಗಳ ಪದಪ್ರಧಾನ ಸಾಮಾರಂಭವು ದಿನಾಂಕ: 31-01-2010 ರಂದು ಉಡುಪಿ ಶಾಮಿಲಿ ಸಭಾಂಗಣದಲ್ಲಿ ನಡೆಸಲಾಯಿತು. ಮೊಗವೀರ ಯುವ ಸಂಘಟನೆ(ರಿ) ಉಡುಪಿ ಜಿಲ್ಲೆ ಇದರ ಪದಪ್ರದಾನ ಸಮಾರಂಭವನ್ನು ಮಾರ್ಗದರ್ಶಕರೂ ಮೊಗವೀರ ಮುಂದಾಳು ಡಾ: ಜಿ. ಶಂಕರ್ರವರು ಉದ್ಘಾಟಿಸಿದರು. ಸ್ಥಾಪಕಾಧ್ಯಕ್ಷರಾದ ಸತೀಶ್ ಅಮೀನ್ ಪಡುಕೆರೆ ಪ್ರತಿಜ್ಞಾವಿಧಿ ನೆರವೇರಿಸಿದರು. ನಿಗರ್ಮನ ಅಧ್ಯಕ್ಷರಾದ ಶ್ರೀ ಸಂಜೀವ ಎಂ.ಎಸ್. ರವರನ್ನು, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಶ್ರೀ ಸುರೇಶ್ ಮರಕಾಲ ಪೋಲೀಸ್ ಇಲಾಖೆ, ಶ್ರೀ ಚಂದ್ರಶೇಖರ ಆರ್. ಸಾಲ್ಯಾನ್ ಸುರತ್ಕಲ್, ಕು: ಸುಜಯ ಪರೀಕ, ಇವರನ್ನು ಸನ್ಮಾನಿಸಲಾಯಿತು. ನಂತರ ಪ್ರೊ. ಎಸ್.ಕೆ. ಮೇಲಕಾ ರವರ ಅಂಬಿಗರ ಸಮುದಾಯ ಮತ್ತು ಸಂಸ್ಕೃತಿ ಪುಸ್ತಕ ಬಿಡುಗಡೆ ಮಾಡಲಾಯಿತು.
ಅತಿಥಿಗಳಾಗಿ ಲಾಲಾಜಿ ಆರ್. ಮೆಂಡನ್, ಶಾಸಕರು, ಉದ್ಯಮಿಗಳಾದ: ಶ್ರೀ ಪ್ರಮೋದ್ ಮಧ್ವರಾಜ್, ಭುವನೇಂದ್ರ ಕಿದಿಯೂರು, ಅಜಿತ್ ಸುವರ್ಣ, ಗೋಪಾಲ ಎಸ್.ಪುತ್ರನ್, ಸುರೇಶ್ ಆರ್.ಕಾಂಚನ್, ಆನಂದ ಸಿ.ಕುಂದರ್, ಕೇಶವ ಕುಂದರ್, ಸದಾನಂದ ಕೋಟ್ಯಾನ್, ಅಧ್ಯಕ್ಷರು, ಯುವಕ ಸಂಘ ಮುಂಬೈ, ಪುರುಷೋತ್ತಮ ಶ್ರೀಯಾನ್, ಉಪಾದ್ಯಕ್ಷರು, ಮುಂಬೈ ಯುವಕ ಸಂಘ, ಯಶಪಾಲ್ ಎ.ಸುವರ್ಣ, ಅಧ್ಯಕ್ಷರು, ದ.ಕ. ಉಡುಪಿ ಜಿಲ್ಲಾ ಮೀನು ಮಾರಾಟ ಪೆಡರೇಶನ್, ಹಿರಿಯಣ್ಣ ಚಾತ್ರಬೆಟ್ಟ. ಶಾಖಾಧ್ಯಕ್ಷರು, ಬಗ್ವಾಡಿ ಹೋಬಳಿ, ತಿಮ್ಮ ಮರಕಾಲ, ಅಧ್ಯಕ್ಷರು ಬಾರಕೂರು ಸಂಯುಕ್ತ ಸಭೆ ಇವರು ಭಾಗವಹಿಸಿರುತ್ತಾರೆ. ಸಮಾರಂಭವನ್ನು ಉದ್ದೇಶಿಸಿ ಡಾ: ಜಿ.ಶಂಕರ್, ಮಾತನಾಡಿದರು. ಜಿಲ್ಲಾ ಅಧ್ಯಕ್ಷರಾದ ಶ್ರೀ ಸತೀಶ್ ಎಂ. ನಾಯ್ಕ್ ಅಧ್ಯಕ್ಷೀಯ ಭಾಷಣ ಮಾಡಿದರು.

2007-2009 ರ ಸಾಲಿನ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ
ಮೊಗವೀರ ಯುವ ಸಂಘಟನೆಯ 2007-2009 ರ ಸಾಲಿನ ನೂತನ ಅಧ್ಯಕ್ಷರಾಗಿ ಶ್ರೀ ಎಂ.ಎಸ್. ಸಂಜೀವ ಇವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ದಿನಾಂಕ 01-12-2007 ರ ಶನಿವಾರ ಬೆಳಿಗ್ಗೆ 10.00 ಕ್ಕೆ ಉಡುಪಿ ಅಂಬಲ್ಪಾಡಿಯ ’ಶ್ಯಾಮಿಲಿ’ ಸಭಾ೦ಗಣದಲ್ಲಿ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭವು ನಡೆಯತು. ಉದ್ಯಮಿ ಡಾ| ಜಿ.ಶಂಕರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಉರ್ವ ಮ೦ಗಳೂರು ಶ್ರೀ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ಗೋಪಾಲಕೃಷ್ಣ ಸುವರ್ಣ ಬೋಳೂರು ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಮುಂಬೈ ಮೊಗವೀರ ಯುವಕ ಸಂಘದ ಅಧ್ಯಕ್ಷ ಸದಾನಂದ ಕೋಟ್ಯಾನ್, ಉದ್ಯಮಿ ಸುರೇಶ್ ಆರ್. ಕಾ೦ಚನ್, ಮಲ್ಪೆ ಮೀನುಗಾರರ ಸ೦ಘದ ಅಧ್ಯಕ್ಷ ಹಿರಿಯಣ್ಣ ಟಿ.ಕಿದಿಯೂರು ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ಸತೀಶ್ ಅಮೀನ್ ಪಡುಕರೆಯವರು ಅಧ್ಯಕ್ಷತೆ ವಹಿಸಿದ್ದರು. ನ೦ತರ ಜಿಲ್ಲೆಯ ಪ್ರತಿಷ್ಠಿತ ನೃತ್ಯ ತಂಡಗಳಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ ಜರುಗಿತು.

ಉದ್ಘಾಟನಾ ಸಮಾರಂಭ ಮತ್ತು 2005-2007 ರ ಸಾಲಿನ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ
ಅಸಂಘಟಿತ ಮೊಗವೀರ ಯುವಕ ಯುವತಿಯರನ್ನು ಒಗ್ಗೂಡಿಸಬೇಕೆಂಬ ಕರ್ನಾಟಕ ಕರಾವಳಿಯ ಎಲ್ಲಾ ಮೊಗವೀರರ ಆಶಯದಂತೆ ತಾ. 06-03-2005 ರಂದು ಮೊಗವೀರ ಮುಂದಾಳು ಸನ್ಮಾನ್ಯ ಜಿ.ಶಂಕರ್ರವರಿಂದ ಉದ್ಘಾಟಿಸಲ್ಪಟ್ಟ ಮೊಗವೀರ ಯುವ ಸ೦ಘಟನೆ(ರಿ.), ಉಡುಪಿ ಜಿಲ್ಲೆ, ಇದರ ಅಧ್ಯಕ್ಷರಾಗಿ ಶ್ರೀ ಸತೀಶ್ ಅಮೀನ್ ಇವರು ಅಧಿಕಾರ ಪಡೆದಿರುತ್ತಾರೆ. ಸಂಘಟನೆಯು ಕರ್ನಾಟಕ ಸಂಘಗಳ ನೋಂದಾವಣೆ ಅಧಿನಿಯಮ, 1960 ನೆಯ ಇಸವಿ 17 ಕ್ರಮಾಂಕದ ಕರ್ನಾಟಕ ಅಧಿನಿಯಮದ ಮೇರೆಗೆ ನೋಂದಾಯಿಸಲ್ಪಟ್ಟು ಜಿಲ್ಲಾ ಮೊಗವೀರ ಯುವ ಸಂಘಟನೆಯು ಈ ಹಿಂದೆ ಉಡುಪಿ ಹೃದಯ ಭಾಗದಲ್ಲಿರುವ ಶ್ರೀ ಗುರು ಕಟ್ಟಡದ ಮೊದಲ ಮಹಡಿಯಲ್ಲಿರುವ ಜಿಲ್ಲಾ ಕಛೇರಿಯಲ್ಲಿ ಕಾರ್ಯಾಚರಿಸುತ್ತಿತ್ತು.
ಮೊಗವೀರ ಯುವ ಸಂಘಟನೆಯ ಜಿಲ್ಲಾ ಕೇಂದ್ರ ಸಮಿತಿಯು ಅಧ್ಯಕ್ಷ ಸತೀಶ್ ಅಮೀನ್ ಪಡುಕರೆ ಸೇರಿದಂತೆ 35 ಮ೦ದಿ ಕ್ರಿಯಾಶೀಲ ಪದಾಧಿಕಾರಿಗಳನ್ನು ಒಳಗೊಂಡಿದ್ದು, ಉಡುಪಿ ಜಿಲ್ಲೆಯಾದ್ಯಂತ ಇರುವ ಮೊಗವೀರ ಯುವ ಯುವತಿಯರನ್ನು ಒಗ್ಗೂಡಿಸಿ 30 ಘಟಕಗಳನ್ನು ಸ್ಥಾಪಿಸಿ ಒಟ್ಟು 8,000 ಸದಸ್ಯರನ್ನು ನೋಂದಾಯಿಸಿಕೊಂಡಿದೆ.