Back to homepage

Mass Marriage

ಸಾಮೂಹಿಕ ವಿವಾಹ


ನಮ್ಮ ಸಂಘಟನೆಯ ಆಶ್ರಯದಲ್ಲಿ ವರದಕ್ಷಿಣೆ ರಹಿತವಾದ ಮತ್ತು ಸರಳ ವಿವಾಹವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮೊಗವೀರ ಸಮಾಜ ಬಾಂಧವರ ಉಚಿತ ಸಾಮೂಹಿಕ ವಿವಾಹ ಸಮಾರಂಭವನ್ನು ಆಯೋಜಿಸಲಾಯಿತು. ಮೊಗವೀರ ಸಮಾಜದಲ್ಲಿ ನಡೆಯುವ ವಿವಾಹ ಸಮಾರಂಭಗಳಲ್ಲಿ ಹೆಚ್ಚುತ್ತಿರುವ ದು೦ದುವೆಚ್ಚ ಮತ್ತು ಆಡ೦ಬರಗಳಿಗೆ ಕಡಿವಾಣ ಹಾಕಲು ಪ್ರಯತ್ನಿಸುವ ನಿಟ್ಟಿನಲ್ಲಿ ಹಾಗೂ ಮೊಗವೀರ ಯುವಕ ಯುವತಿಯರು ಬಡತನದಿಂದ ಕಂಕಣಭಾಗ್ಯದಿಂದ ವ೦ಚಿತರಾಗದಿರುವಂತೆ ನೋಡಿಕೊಳ್ಳುವ ಉದ್ದೇಶದಿಂದ ನಮ್ಮ ಸಂಘಟನೆಯ ನೇತೃತ್ವದಲ್ಲಿ ಡಾ: ಜಿ.ಶಂಕರ್ ಪ್ಯಾಮಿಲಿ ಟ್ರಸ್ಟ್ ಮತ್ತು ಊರ-ಪರವೂರ ಸಮಾಜದ ಕೊಡುಗೈ ದಾನಿಗಳು ಹಾಗೂ ಸಮಾಜ ಬಾಂದವರ ಸಹಕಾರದೊಂದಿಗೆ ಸಮೂಹಿಕ ಮದುವೆ ನೆರವೇರಿಸಲಾಯಿತು.

ದಿನಾಂಕ: 29-04-2007 ರಂದು 59 ಜೋಡಿಗಳ ಸಾಮೂಹಿಕ ವಿವಾಹವು ನೆರವೇರಿಸಲಾಯಿತು
ಬೆಣ್ಣೆಕುದ್ರು ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದ ಮಾಧವ ಮಂಗಲ ಮಂಟಪದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಮೊಗವೀರ ಸಮಾಜದ ಇತಿಹಾಸದಲ್ಲೇ ಮೊದಲ ಬಾರಿಗೆ 59 ಜೋಡಿಗಳು ಸತಿಪತಿಗಳಾದರು. ಮೊಗವೀರ ಸಮಾಜದಲ್ಲಿ ಹೆಚ್ಚುತ್ತಿರುವ ವರದಕ್ಷಿಣೆ ಹಾಗೂ ಆಡಂಬರದ ಮದುವೆಯನ್ನು ತಡೆಯುವ ನಿಟ್ಟಿನಲ್ಲಿ ಸರಳ ವಿವಾಹಕ್ಕೆ ಉತ್ತೇಜನ ನೀಡಲು ಮೊಗವೀರ ಜಿಲ್ಲಾ ಸಂಘಟನೆ ಸಾಮೂಹಿಕ ವಿವಾಹ ಆಯೋಜಿಸಿತ್ತು. ಯುವ ಸಂಘಟನೆಯ ಜಿಲ್ಲಾಧ್ಯಕ್ಷ ಸತೀಶ್ ಅಮೀನ್ ಪಡುಕರೆ, ಕಾರ್ಯದರ್ಶಿ ಪ್ರಕಾಶ್ ಸುವರ್ಣ ಕಟಪಾಡಿ, ಸಾ೦ಸ್ಕೃತಿಕ ಕಾರ್ಯದರ್ಶಿ ಚಂದ್ರೇಶ್ ಪಿತ್ರೋಡಿ ಈ ಸಾಮೂಹಿಕ ವಿವಾಹದಲ್ಲಿ ಗ್ರಹಸ್ಥಾಶ್ರಮ ಪ್ರವೇಶಿಸಿದರು.
ಭಾನುವಾರ ಮುಂಜಾನೆ 8 ಗಂಟೆಗೆ ಶುಭ ಮುಹೂರ್ತದಲ್ಲಿ ಸಾಮೂಹಿಕ ವಿವಾಹ ಶಾಸ್ತ್ರೋಕ್ತವಾಗಿ ಆರಂಭವಾಯಿತು. ವಧುವರರ ತಂದೆ ತಾಯಿ ಧಾರೆ ಎರೆದ ಬಳಿಕ ನವಜೋಡಿಗಳು ಸಪ್ತಪದಿ ಪೂರೈಸಿದರು. ಉದ್ಯಮಿ, ಮೊಗವೀರ ಮುಂದಾಳು ಜಿ.ಶಂಕರ್ ಐವರು ವರರಿಗೆ ಮಾಂಗಲ್ಯ ವಿತರಿಸಿದರು. ಇದೇ ಸ೦ದರ್ಭದಲ್ಲಿ ಸಮಾರ೦ಭದ ಯಶಸ್ಸಿಗೆ ಸಹಕರಿಸಿದವರನ್ನು ಸನ್ಮಾನಿಸಿದರು. ನ೦ತರ ಮಾ೦ಗಲ್ಯಸೂತ್ರವನ್ನು ದಾನವಾಗಿ ನೀಡಿದ ದಾನಿಗಳಿ೦ದಲೇ ವರರಿಗೆ ಹಸ್ತಾ೦ತರಿಸಲಾಯಿತು. ಆಡ೦ಬರವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ವಧುವರರಿಗೆ ಉಚಿತವಾಗಿ ಮಾಂಗಲ್ಯ ಸೂತ್ರ, ಸೀರೆ, ಕುರ್ತಾ ಪೈಜಾಮ, ಪೇಟವನ್ನು ನೀಡಲಾಯಿತು. ಮೊಗವೀರ ಸಂಪ್ರದಾಯದಂತೆ ಕಲಾವತಿ ದಯಾನಂದ ಶೋಭಾನೇ ಹಾಡಿದರು. ಮೇಘನಾ ಸಾಲಿಗ್ರಾಮ ಸ್ಯಾಕ್ಸೋಫೋನ್ ವಾದನ ನಡೆಸಿದರು. 21 ಮ೦ದಿ ಪುರೋಹಿತರು ಮದುವೆ ವಿಧಿವಿಧಾನ ನೆರವೇರಿಸಿದರು. ಸಾಮೂಹಿಕ ವಿವಾಹದಲ್ಲಿ ಕೋಟೇಶ್ವರ ಘಟಕದಿ೦ದ 12 ಜೋಡಿ, ಕೋಟ 9, ಮ೦ದಾರ್ತಿ 9, ಹಾಲಾಡಿ, ಹೆಮ್ಮಾಡಿ ತಲಾ 6, ಸಾಲಿಗ್ರಾಮ 5, ಉದ್ಯಾವರ ಬ್ರಹ್ಮಾವರ, ಪಡುಕರೆ, ಮಲ್ಪೆ, ಗುಜ್ಜರ್ಬೆಟ್ಟು, ಉಪ್ಪೂರು ತಲಾ ಒ೦ದು ಹಾಗೂ ಬೆಳ್ಳ೦ಪಳ್ಳಿ ಹಾಗೂ ಕಲ್ಯಾಣಪುರದಿ೦ದ ತಲಾ 2 ಜೋಡಿ ಪಾಲ್ಗೊ೦ಡಿದ್ದರು. ಹರಿದು ಬಂದ ಜನಸಾಗರ: ಸಾಮೂಹಿಕ ವಿವಾಹದ ಸೊಬಗನ್ನು ಸವಿಯಲು ಮುಂಬಯಿ, ಬೆಂಗಳೂರು ಮುಂತಾದೆಡೆಗಳಿಂದ ಮೊಗವೀರ ಸಮಾಜದ ಬಾಂಧವರು ಆಗಮಿಸಿದ್ದರು. ನಾಲ್ಕು ಚಪ್ಪರಗಳಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಎಲ್ಲಾವೂ ಅಚ್ಚುಕಟ್ಟಾಗಿ ನಡೆಯಿತು.

ದಿನಾಂಕ: 17-05-2010 ರಂದು 25 ಜೋಡಿಗಳ ಸಾಮೂಹಿಕ ವಿವಾಹವು ನೆರವೇರಿಸಲಾಯಿತು
ಮೊಗವೀರ ಸಮಾಜದ ಇತಿಹಾಸದಲ್ಲಿ 2ನೇ ಬಾರಿಗೆ 25 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಸಮಾರಂಭವು ಮಾನ್ಯ ಡಾ: ಜಿ.ಶಂಕರ್ ಇವರ ಆಶಯದಂತೆ ಯುವ ಸಂಘಟನೆಯ ನೇತೃತ್ವದಲ್ಲಿ ಉಡುಪಿ ತಾಲೂಕಿನ ಬೆಣ್ಣೆಕುದ್ರು ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದ ಮಾಧವ ಮಂಟಪದಲ್ಲಿ ಸಂಪ್ರದಾಯ ಬದ್ಧವಾಗಿ ನಡೆದಿದ್ದು, ಮಾನ್ಯ ಸಚಿವರು, ಜನಪ್ರತಿನಿಧಿಗಳು, ವಿವಿಧ ಸಮಾಜದ ಗಣ್ಯರು, ಕೊಡುಗೈ ದಾನಿಗಳು, ಸಮಾಜ ಬಾಂದವರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿರುತ್ತಾರೆ. ವಧುವಿಗೆ ಕರಿಮಣಿ ಸರ, ಧಾರೆಸೀರೆ, ಕಾಲುಂಗುರ ಮತ್ತು ವರನಿಗೆ ಕುರ್ತಾ ಪೈಜಾಮ, ಪೇಟಾ ಹಾಗೂ ಸರಳವಿವಾಹದಲ್ಲಿ ಭಾಗವಹಿಸಿದ ಎಲ್ಲರಿಗೂ ಊಟೋಪಚಾರವನ್ನು ಡಾ. ಜಿ.ಶಂಕರ್ ಮತ್ತು ಇತರ ದಾನಿಗಳ ಸಹಕಾರದಿಂದ ಸಂಘಟನೆಯ ವತಿಯಿಂದಲೇ ನೀಡಲಾಯಿತು. ಹಾಗೂ ಸರಕಾರದ ನಿಯಮಾವಳಿಗಳಂತೆ ವಿವಾಹ ನೋಂದಣಿಯನ್ನು ಸ್ಥಳದಲ್ಲೆಯೇ ನೆರವೇರಿಸಲಾಯಿತು. ಹಾಗೂ ಸರಕಾರದಿಂದ ಸಿಗುವ ಸರಳ ವಿವಾಹದ ಪ್ರೋತ್ಸಾಹ ಧನವನ್ನು ಪಡೆದು ಸಂಬಂಧಪಟ್ಟವರಿಗೆ ಹಸ್ತಾಂತರಿಸಲಾಗಿದೆ.

ದಿನಾಂಕ: 20-05-2011 ರಂದು 11 ಜೋಡಿಗಳ ಸಾಮೂಹಿಕ ವಿವಾಹವು ನೆರವೇರಿಸಲಾಯಿತು
ಜಿ. ಶಂಕರ್ ಪ್ಯಾಮಿಲಿ ಟ್ರಸ್ಟ್ ಇವರ ಸಹಯೋಗದೊಂದಿಗೆ ವರದಕ್ಷಿಣಿ/ಉಡುಗೊರೆ ರಹಿತವಾದ ಸರಳ ವಿವಾಹವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ, ಮೊಗವೀರ ಸಮಾಜದ ಇತಿಹಾಸದಲ್ಲಿ ತೃತೀಯ ಬಾರಿಗೆ ಮೊಗವೀರ ಸಮಾಜ ಭಾಂದವರ 11 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಸಮಾರಂಭವನ್ನು ದಿನಾಂಕ: 20-05-2011 ರಂದು ಬಗ್ವಾಡಿ ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನದ, ಶ್ರೀ ಮಹಿಷಾಸುರ ಮರ್ದಿನಿ ಸಭಾಂಗಣದಲ್ಲಿ ಸಮಾಜ ಬಾಂಧವರ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಯಿತು. ಸಮಾಜದಲ್ಲಿ ನಡೆಯವ ವಿವಾಹ ಸಮಾರಂಭಗಳಲ್ಲಿ ಹೆಚ್ಚುತ್ತಿರುವ ದುಂದು ವೆಚ್ಚ ಮತ್ತು ಅಡಭಾರಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನಮ್ಮ ಸಂಘಟನೆ ಮತ್ತು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಈ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿರುತ್ತದೆ.
ಸಾಮೂಹಿಕ ವಿಳ್ಯಶಾಸ್ತ್ರ: ಸಾಮೂಹಿಕ ವಿವಾಹಕ್ಕೆ ನೊಂದಾಹಿಸಿಕೊಂಡ ಸೂಮಾರು 11 ಜೋಡಿ ವಧು-ವರರಿಗೆ ಸಾಮೂಹಿಕ ವಿವಾಹ ಪೂರ್ವಭಾವಿಯಾಗಿ ಸಾಮೂಹಿಕ ವಿಳ್ಯಶಾಸ್ತ್ರ ಮತ್ತು ಮದುವೆ ಉಡುಗೆಗಳಾದ, ಸೀರೆ ,ರವಿಕೆ ಕಣ, ಕಾಲುಂಗುರ, ಕುರ್ತಾ ಪೈಜಾಮು, ಪೇಟಾ, ಇವುಗಳ ವಿತರಣಾ ಕಾರ್ಯಕ್ರಮ ದಿನಾಂಕ: 29-04-2011 ರಂದು ಕೋಟ ಕರಾವಳಿ ಮೊಗವೀರ ಮಹಾಜನ ಸಭಾಭವನ ಸಾಲಿಗ್ರಾಮ ಇಲ್ಲಿ ನೇರವೇರಿಸಲಾಯಿತು . ವಧು-ವರರು ತಮ್ಮ ಹೆತ್ತವರು ಹಾಗೂ ಗುರುಕಾರರೊಂದಿಗೆ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿರುತ್ತಾರೆ. ಡಾ| ಜಿ.ಶಂಕರ , ಜಿಲ್ಲಾಧ್ಯಕ್ಷ ಸತೀಶ್ ಎಮ್ .ನಾಯ್ಕ್ , ಆನಂದ ಸಿ. ಕುಂದರ್, ಶ್ರೀ ಹಿರಿಯಣ್ಣ ಚಾತ್ರಬೆಟ್ಟ , ತಿಮ್ಮ ಮರಕಾಲ, ಜಿಲ್ಲಾ ಸಂಘಟನೆ ಮತ್ತು ವಿವಿಧ ಘಟಕಗಳ ಪದಾಧಿಕಾರಿಗಳ ಉಪಸ್ಪಿತಿಯಲ್ಲಿ ಕಾರ್ಯಕ್ರಮ ಯಶ್ವಸಿಯಾಗಿ ನಡೆಸಲಾಯಿತು. ಸಾಮೂಹಿಕ ವಿವಾಹದ ನಿಯಮ -ನಿಬಂಧನೆಗಳನ್ನು ವಿವಾಹ ಜೋಡಿಗಳಿಗೆ, ಹೆತ್ತವರಿಗೆ, ಮತ್ತು ಗುರಿಕಾರರಿಗೆ ತಿಳಿಸಲಾಯಿತು . ಆಗಮಿಸಿದ ಸರ್ವರಿಗೂ ಉಟೋಪಚಾರವನ್ನು ನೀಡಲಾಯಿತು.
ದಿನಾಂಕ : 20-05-2011 ರಂದು ಬಗ್ವಾಡಿ ಶ್ರೀ ಮಹಿಷಾಸುರ ಮರ್ದಿನಿ ಸನ್ನಿಧಿಯಲ್ಲಿ ಡಾ| ಜಿ.ಶಂಕರ್ರವರ ಮಾರ್ಗದರ್ಶನದೊಂದಿಗೆ ಮತ್ತು ಸಮಾಜದ ಹಿರಿಯ ಗಣ್ಯರ, ಹೋಬಳಿ ಮುಖಂಡರ, ಜನಪ್ರತಿನಿಧಿಗಳ, ವಿವಾಹ ಜೋಡಿಗಳ ಪೋಷಕರ/ಬಂಧುಗಳ ಮತ್ತು ಜಿಲ್ಲಾಸಂಘಟನೆ ಹಾಗೂ ಎಲ್ಲಾ ಘಟಕಗಳ ಅಧ್ಯಕ್ಷ/ ಕಾರ್ಯದರ್ಶಿ/ ಪದಾಧಿಕಾರಿಗಳು / ಸದಸ್ಯರುಗಳ ಸಮ್ಮುಖದಲ್ಲಿ ವೇದಮೂರ್ತಿ ಭಾಸ್ಕರ ಭಟ್ಟ ಬಗ್ವಾಡಿ ಇವರ ಪುರೋಹಿತ್ಯದಲ್ಲಿ ಸಂಪ್ರದಾಯ ಬದ್ದವಾಗಿ ಸೂಮಾರು 11 ಜೋಡಿಗಳಿಗೆ ಉಚಿತ ಸಾಮೂಹಿಕ ವಿವಾಹ ಅತ್ಯಂತ ಯಶಸ್ವಿಯಾಗಿ ನೇರವೇರಿಸಲಾಯಿತು. 11 ವಿವಾಹಜೋಡಿಗಳಿಗೂ ಉಚಿತವಾಗಿ ಮಾಂಗಲ್ಯ ಸರವನ್ನು ಮದುವೆ ಮಂಟಪದಲ್ಲಿ ಉಚಿತವಾಗಿ ಡಾ| ಜಿ.ಶಂಕರ್ ಮತ್ತು ಶ್ರೀಮತಿ ಶಾಲಿನಿ ಶಂಕರ್ ದಂಪತಿಗಳು ತಮ್ಮ ಟ್ರಸ್ಟ್ವತಿಯಿಂದ ನೀಡಿರುತ್ತಾರೆ. ಸಾಮೂಹಿಕ ವಿವಾಹದಲ್ಲಿ ಭಾಗವಹಿಸಿದ ಸರ್ವರಿಗೂ ಉಟೋಪಚಾರವನ್ನು ನೀಡಲಾಯಿತು.

ದಿನಾಂಕ: 30-05-2012 ರಂದು 10 ಜೋಡಿಗಳ ಸಾಮೂಹಿಕ ವಿವಾಹವು ನೆರವೇರಿಸಲಾಯಿತು
ಮೊಗವೀರ ಸಮಾಜದ ಇತಿಹಾಸದಲ್ಲೆ ಸತತವಾಗಿ 4ನೇ ಬಾರಿಗೆ ಮೊಗವೀರ ಸಮಾಜದ 10 ಜೋಡಿಗಳ ಉಚಿತ ಸಾಮೂಹಿಕ ವಿವಾಹವನ್ನು ದಿನಾಂಕ 30-05-2012 ರಂದು ಕುಲಮಾತೆ ಶ್ರೀ ಉಚ್ಚಿಲ ಮಹಾಲಕ್ಷ್ಮೀ ಅಮ್ಮನವರ ಸನ್ನಿಧಿಯಲ್ಲಿರುವ ನೂತನ ಸಭಾಗೃಹ ಶ್ರೀ ಮಹಾಲಕ್ಷ್ಮೀ ಸಭಾಭವನ ದಲ್ಲಿ ಹಮ್ಮಿಕೊಳ್ಳಲಾಯಿತು. ಇದಕ್ಕೆ ಪೂರ್ವಬಾವಿಯಾಗಿ ಸಂಪ್ರದಾಯದಂತೆ ಸಾಮೂಹಿಕ ವೀಳ್ಯಶಾಸ್ತ್ರ ವನ್ನು ಶ್ಯಾಮಿಲಿಯ ಮಿನಿಹಾಲ್ ನಲ್ಲಿ ನಡಸಲಾಯಿತು.
ಈ ಕಾರ್ಯಕ್ರಮದಲ್ಲಿ ವಧುವಿಗೆ ಸೀರೆ, ರವಿಕೆ ಕಣ, ಕಾಲುಂಗುರ ಮತ್ತು ವರನಿಗೆ ಕುರ್ತಾ, ಪೈಜಾಮ, ಪೇಟಾಗಳನ್ನು ಡಾ. ಜಿ.ಶಂಕರ್ ದಂಪತಿಗಳು ನೀಡಿದರು. ದಿನಾಂಕ 30-05-2012 ರಂದು ಉಚ್ಚಿಲ ಶ್ರೀ ಮಹಾಲಕ್ಮ್ಷೀಸಭಾಭವನದ ಭವ್ಯ ವೇದಿಕೆಯಲ್ಲಿ ಡಾ. ಜಿ. ಶಂಕರ್ ರವರ ಮಾರ್ಗದರ್ಶನದಲ್ಲಿ ಸಮಾಜದ ಹಿರಿಯರು, ಗಣ್ಯರು, ಹೋಬಳಿಯ ಗುರಿಕಾರರು, ಜನಪ್ರತಿನಿದಿಗಳು ಮತ್ತು ಜಿಲ್ಲಾ ಸಂಘಟನೆಯ ಹಾಗೂ ಎಲ್ಲಾ ಘಟಕದ ಅಧ್ಯಕ್ಷರು ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ವೇದಮೂರ್ತಿ ರವರ ಪೂರೋಹಿತ್ವದಲ್ಲಿ, ವಿವಾಹ ಕಾರ್ಯಕ್ರಮದ ಎಲ್ಲಾ ವಿಧಿ ವಿಧಾನಗಳನ್ನು ಅನುಸರಿಸುವ ಮೂಲಕ 10 ಜೋಡಿಗಳ ಸಾಮೂಹಿಕ ವಿವಾಹ ವು ಅತ್ಯಂತ ವ್ಯವಸ್ಥಿತವಾಗಿ ಯಶಸ್ವಿಯಾಗಿ ನೆರವೇರಿತು. ಎಲ್ಲಾ 10 ಜೋಡಿಗಳಿಗೂ ಉಚಿತವಾಗಿ ಮಾಂಗಲ್ಯ ಸರವನ್ನು ಡಾ. ಜಿ.ಶಂಕರ್ ಮತ್ತು ಶ್ರೀಮತಿ ಶಾಲಿನಿ ಶಂಕರ್ ರವರು ಟ್ರಸ್ಟ್ ವತಿಯಿಂದ ನೀಡಿದರು. ಕಾರ್ಯಕ್ರಮದಲ್ಲಿ ಸುಮಾರು 1200 ಕ್ಕೂ ಅಧಿಕ ಜನರು ಭಾಗವಹಿಸಿದ್ದು, ಸರ್ವರಿಗೂ ಊಟೋಪಚಾರವನ್ನು ಮಾಡಲಾಗಿತ್ತು.

ದಿನಾಂಕ: 30-05-2012 ರಂದು 10 ಜೋಡಿಗಳ ಸಾಮೂಹಿಕ ವಿವಾಹವು ನೆರವೇರಿಸಲಾಯಿತು
ಮೊಗವೀರ ಸಮಾಜದ ಇತಿಹಾಸದಲ್ಲೆ ಸತತವಾಗಿ 5ನೇ ಬಾರಿಗೆ ಮೊಗವೀರ ಸಮಾಜದ 24 ಜೋಡಿಗಳ ಉಚಿತ ಸಾಮೂಹಿಕ ವಿವಾಹವನ್ನು ದಿನಾಂಕ 20-05-2013 ರಂದು ಉಡುಪಿಯ ಶ್ಯಾಮಿಲಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು. ಅನ್ಯರ ಅನುಕರಣೆಯ ಮೂಲಕ ಮದುವೆ ಯಂತಹ ಪವಿತ್ರ ಕಾರ್ಯಕ್ರಮಗಳಲ್ಲಿ ಹೆಚ್ಚುತ್ತಿರುವ ದುಂದುವೆಚ್ಚ, ಆಡಂಭರಗಳಿಗೆ ಕಡಿವಾಣ ಹಾಕಿ, ಸರಳ, ಆದರ್ಶ ವಿವಾಹದ ಸಂದೇಶವನ್ನು ಸಾರುವ ಈ ವಿವಾಹ ಕಾರ್ಯಕ್ರಮವು ಡಾ: ಜಿ.ಶಂಕರ್ ಮತ್ತು ಸಮಾಜ ಬಾಂಧವರ ಸಹಕಾರದೊಂದಿಗೆ ನಡೆಯಿತು. ಸಂಪ್ರದಾಯದಂತೆ ಸಾಮೂಹಿಕ ವೀಳ್ಯಶಾಸ್ತ್ರ ವನ್ನು ಶ್ಯಾಮಿಲಿಯ ಮಿನಿಹಾಲ್ ನಲ್ಲಿ ನಡಸಲಾಯಿತು.
ಈ ಕಾರ್ಯಕ್ರಮದಲ್ಲಿ ವಧುವಿಗೆ ಸೀರೆ, ರವಿಕೆ ಕಣ, ಕಾಲುಂಗುರ ಮತ್ತು ವರನಿಗೆ ಕುರ್ತಾ, ಪೈಜಾಮ, ಪೇಟಾಗಳನ್ನು ಡಾ. ಜಿ.ಶಂಕರ್ ದಂಪತಿಗಳು ನೀಡಿದರು. ಶ್ಯಾಮಿಲ್ ಹಾಲ್ನಲ್ಲಿ ನಡೆದ ಸಾಮೂಹಿಕ ವಿವಾಹ ಸಮಾರಂಭವು ಡಾ. ಜಿ. ಶಂಕರ್ ರವರ ಮಾರ್ಗದರ್ಶನದಲ್ಲಿ ಸಮಾಜದ ಹಿರಿಯರು, ಗಣ್ಯರು, ಹೋಬಳಿಯ ಗುರಿಕಾರರು, ಜನಪ್ರತಿನಿದಿಗಳು ಮತ್ತು ಜಿಲ್ಲಾ ಸಂಘಟನೆಯ ಹಾಗೂ ಎಲ್ಲಾ ಘಟಕದ ಅಧ್ಯಕ್ಷರು ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ವೇದಮೂರ್ತಿ ರವರ ಪೂರೋಹಿತ್ವದಲ್ಲಿ, ವಿವಾಹ ಕಾರ್ಯಕ್ರಮದ ಎಲ್ಲಾ ವಿಧಿ ವಿಧಾನಗಳನ್ನು ಅನುಸರಿಸುವ ಮೂಲಕ 24 ಜೋಡಿಗಳ ಸಾಮೂಹಿಕ ವಿವಾಹ ವು ಅತ್ಯಂತ ವ್ಯವಸ್ಥಿತವಾಗಿ ಯಶಸ್ವಿಯಾಗಿ ನೆರವೇರಿತುಉಡುಪಿ ಶ್ಯಾಮಿಲಿ ಸಭಾಂಗಣದಲ್ಲಿ ಸಂಪ್ರದಾಯಬದ್ದವಾಗಿ ಡಾ| ಜಿ.ಶಂಕರ್ ರವರ ಮಾರ್ಗದರ್ಶನ ಹಾಗೂ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ನ ಸಹಕಾರದೊಂದಿಗೆ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಸಮಾಜದ ಹಿರಿಯರು, ಜನಪ್ರತಿನಿಧಿಗಳು, ಗಣ್ಯರು, ಹೋಬಳಿಯ ಗುರಿಕಾರರು, ಜನಪ್ರತಿನಿಧಿಗಳು, ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿರುತ್ತಾರೆ. ವಧುವಿಗೆ ಕರಿಮಣಿ ಸರ, ಧಾರೆಸೀರೆ, ಕಾಲುಂಗುರ ಮತ್ತು ವರನಿಗೆ ಕುರ್ತಾ ಪೈಜಾಮ, ಪೇಟಾ ಹಾಗೂ ಸರಳವಿವಾಹದಲ್ಲಿ ಭಾಗವಹಿಸಿದ ಎಲ್ಲರಿಗೂ ಊಟೋಪಚಾರವನ್ನು ಸಂಘಟನೆ ಮತ್ತು ಟ್ರಸ್ಟ್ ವತಿಯಿಂದ ನೀಡಲಾಯಿತು. ಹಾಗೂ ಸರಕಾರದ ನಿಯಮಾವಳಿಗಳಂತೆ ವಿವಾಹ ನೋಂದಣಿಯನ್ನು ನೆರವೇರಿಸಲಾಯಿತು ಹಾಗೂ ಸರಕಾರದಿಂದ ಸಿಗುವ ಸರಳ ವಿವಾಹದ ಪ್ರೋತ್ಸಾಹ ಧನವನ್ನು ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ 5000 ಕ್ಕೂ ಅಧಿಕ ಜನರು ಭಾಗವಹಿಸಿದ್ದರು.