Back to homepage

Other Activities

ಇತರ ಕಾರ್ಯಕ್ರಮ

ಬಡವರಿಗೆ ಮನೆ ನಿರ್ಮಾಣ

1. ಉದ್ಯಾವರ ಸ೦ಪಿಗೆನಗರದ ನಿವಾಸಿ, ಮನೆಯೂ ಇಲ್ಲದೆ ಅಸಹಾಯಕ ಸ್ಥಿತಿಯಲ್ಲಿದ್ದ ಸ೦ಜೀವ ಕರ್ಕೇರ ದ೦ಪತಿಗಳಿಗೆ ಇನ್ನೊ೦ದು ಸ೦ಘಟನೆಯೊ೦ದಿಗೆ ಜ೦ಟಿಯಾಗಿ ಮನೆಯನ್ನು ನಿರ್ಮಿಸಿಕೊಟ್ಟು, ಮೊಗವೀರ ಯುವ ಸ೦ಘಟನೆಯ ಉದ್ಯಾವರ ಘಟಕವು ಪ್ರಶ೦ಸೆಗೆ ಪಾತ್ರವಾಗಿದೆ.
2. ಮೊಗವೀರ ಯುವ ಸ೦ಘಟನೆಯ ಕೋಟೇಶ್ವರ ಘಟಕ ಕು೦ದಾಪುರ ತಾಲೂಕಿನ ಬೇಳೂರು ಗ್ರಾಮದ ರತ್ನ ಮೊಗೇರ್ತಿ ಅವರ ಕುಟು೦ಬಕ್ಕೆ ಸುಮಾರು 50,000 ರೂಪಾಯಿ ವೆಚ್ಚದಲ್ಲಿ "ಮಹಿಷ ಮರ್ದಿನಿ" ಮನೆಯನ್ನು ನಿರ್ಮಿಸಿ ಕೊಟ್ಟು ಮಾನವೀಯತೆಯನ್ನು ಮೆರೆದಿದೆ. ಹಣದ ಅಡಚಣೆಯಿ೦ದ ಅರ್ಧದಲ್ಲಿಯೇ ಸ್ಥಗಿತಗೊ೦ಡಿರುವ ಇನ್ನೊ೦ದು ಮನೆಯನ್ನು ಪೂರ್ಣಗೊಳಿಸಿದೆ.
3. ಕುಂದಾಪುರ ತಾಲೂಕು ಬೀಜಾಡಿ ಗ್ರಾಮದಲ್ಲಿ ವಯೋವೃದ್ದ ನರಸಿಂಹ ಮರಕಾಲರಿಗೆ ದಿನಾಂಕ: 23-08-2008 ರಂದು ಮನೆಯನ್ನು ಕಟ್ಟಿಸಿ ಕೊಡಲಾಯಿತು.
4. ಯುವ ಸ೦ಘಟನೆಯ ಕೋಟ ಘಟಕವು ದಾನಿಗಳ ಸಹಕಾರದೊ೦ದಿಗೆ ಬಡತನದಲ್ಲಿದ್ದ ಶ್ರೀ ರಾಜು ಮರಕಾಲ, ಮಣೂರು ಪಡುಕರೆಯವರಿಗೆ ಮನೆಯನ್ನು ನಿರ್ಮಿಸಿಕೊಟ್ಟು ತಮ್ಮ ಉದಾರತೆಯನ್ನು ಮೆರೆದಿರುತ್ತದೆ.
5. ಉಪ್ಪೂರು ಘಾಕವು ಅಮ್ಮು೦ಜೆಯಲ್ಲಿರುವ ಒ೦ದು ಬಡ ಕುಟು೦ಬದ ಛಾವಣಿಯ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ

ಬಸ್ಸು ತಂಗುದಾಣ ನಿರ್ಮಾಣ

ಸಮಾಜದ ದಾನಿಗಳಿಂದ ಸಹಾಯಧನ ಸಂಗ್ರಹಿಸಿ ನಮ್ಮ ಸಂಘಟನೆಯ ವ್ಯಾಪ್ತಿಯಲ್ಲಿ ವಿವಿಧ ಭಾಗಗಳಲ್ಲಿ ಬಸ್ಸು ತಂಗುದಾಣ ನಿರ್ಮಿಸಲಾಯಿತು.

ಉದ್ಯೋಗ ಮಾಗದರ್ಶನ ಶಿಬಿರ , ವ್ಯಕ್ತಿತ್ವ ವಿಕಸನ ಶಿಬಿರ

ರಾಷ್ಟ್ರೀಯ ತರಬೇತಿದಾರರಿಂದ ಯುವಕ ಯುವತಿಯರಿಗೆ ಉದ್ಯೋಗ ಮಾರ್ಗದರ್ಶನ ಶಿಬಿರ, ವ್ಯಕ್ತಿತ್ವ ವಿಕಸನ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಕಾರ್ಯಕ್ರಮದಿಂದ ಸ್ಥಳೀಯ ಪರಿಸರದ ಅನೇಕ ಅಭ್ಯರ್ಥಿಗಳು ಭಾಗವಹಿಸಿ, ಶಿಬಿರದ ಪ್ರಯೋಜನೆ ಪಡೆದಿರುತ್ತಾರೆ.

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯಪಾಲರು, ಮುಖ್ಯಮಂತ್ರಿ, ಸಚಿವರು, ಹಾಗೂ ಇತರ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಭೇಟಿ

1. ರಾಜ್ಯ ಸರ್ಕಾರವು ಹೊರಡಿಸಿದ ಪ್ರವರ್ಗ-1 ರ ಮಿಸಲಾತಿಯ ಆದಾಯ ಮಿತಿಯ ಆದೇಶದ ಕುರಿತಂತೆ, ಆದಾಯ ಮಿತಿ ಸಡಿಲಿಸಿ, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ, ನಮ್ಮ ಸಮಾಜದ ಮುಂದಾಳುಗಳಾದ ಡಾ.ಜಿ.ಶಂಕರ್ ರವರು, ಸಂಘಟನೆಯ ಮೂಲಕ ಮಾನ್ಯ ಈಶ್ವರಪ್ಪ ಮತ್ತಿತರ ನಾಯಕರುಗಳಿಗೆ ಮನವಿ ಮಾಡಲಾಯಿತು. ಇದಕ್ಕೆ ಸಂದಿಸಿದ ಮಾನ್ಯ ಉಪಮುಖ್ಯಮಂತ್ರಿಗಳು, ಈ ಕುರಿತು ಪರಿಶೀಲಿಸಲಾಗುವುದು ಎಂಬ ಭರವಸೆ ನೀಡಿರುತ್ತಾರೆ.
2. ಮೀನುಮಾರುಕಟ್ಟೆ ಅಭಿವೃದ್ದಿಗೊಳಿಸಲು ಜಿಲ್ಲಾಧಿಕಾರಿಯವರಿಗೆ ಮನವಿ :- ಉಡುಪಿ ಮತ್ತು ಇತರ ಪ್ರದೇಶಗಳಲ್ಲಿರುವ ಮೀನುಮಾರುಕಟ್ಟೆಯನ್ನು ಅಭಿವೃದ್ದಿಗೊಳಿಸಿ, ಅಲ್ಲಿ ಮೂಲಭೂತ ಸೌಕರ್ಯವನ್ನು ಕಲ್ಪಿಸಿಕೊಡುವಂತೆ ಜಿಲ್ಲಾಧಿಕಾರಿಯವರಿಗೆ ದಿನಾಂಕ: 15-08-2005. 200 ಮೀನುಗಾರ ಮಹಿಳೆಯರ ಅರ್ಜಿಯನ್ನು ಸ್ಪಂದಿಸಿ ಈ ಮನವಿ ಸಲ್ಲಿಸಲಾಗಿದೆ.
3. ಮೀನುಗಾರಿಕೆಗೆ ಬಜೆಟ್ನಲ್ಲಿ ಅನುದಾನ ಹೆಚ್ಚಿಸಲು ಆಗ್ರಹಿಸಿ ಮುಖ್ಯಮಂತ್ರಿಯವರಿಗೆ ಮನವಿ :- ಮೀನುಗಾರಿಕೆಗೆ ಬಳಸುವ ತೆರಿಗೆ ರಹಿತ ಡೀಸಿಲ್ನ್ನು 75000 ಲೀಟರ್ಗೆ ಏರಿಸಲು ಹಾಗೂ ನಾಡದೋಣಿ ಮೀನುಗಾರರಿಗೆ ಸೀಮೆಎಣ್ಣೆ ಪೂರೈಕೆಯನ್ನು ಹೆಚ್ಚಿಸಲು ದಿನಾಂಕ: 12-03-2007 ರಂದು ಮಾನ್ಯ ಮುಖ್ಯಮಂತ್ರಿಯವರಿಗೆ ಮನವಿ ಮಾಡಲಾಯಿತು.
4. ಜಿಲ್ಲಾ ಮೊಗವೀರ ಯುವ ಸ೦ಘಟನೆ ನೇತೃತ್ವದಲ್ಲಿ ಕು೦ದಾಪುರದಲ್ಲಿ ನಡೆದ ಸಮಾವೇಶದಲ್ಲಿ ಮ೦ಡಿಸಿದ ಬೇಡಿಕೆ ಈಡೇರಿಕೆಗೆ ಮೀನುಗಾರ ಪ್ರತಿನಿಧಿಗಳನ್ನೊಳಗೊ೦ಡ ನಿಯೋಗ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಿತ್ತು.
5. ಮೊಗವೀರ ಮುಖ೦ಡರನ್ನೊಳಗೊ೦ಡ ಮೊಗವೀರ ಯುವ ಸ೦ಘಟನೆಯ ನಿಯೋಗವು ಕೇ೦ದ್ರ ಸಚಿವ ಆಸ್ಕರ್ ಪೆರ್ನಾ೦ಡಿಸ್ ಅವರೊ೦ದಿಗೆ ಮೊಗವೀರ ಮು೦ದಾಳು ಜಿ.ಶ೦ಕರ್ ಅವರ ನೇತೃತ್ವದಲ್ಲಿ ಕೇ೦ದ್ರ ಹಣಕಾಸು ಸಚಿವ ಪಿ.ಚಿದ೦ಬರ೦ ರವರನ್ನು ದಿನಾಂಕ: 5-03-2008 ರಂದು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿತು.
6. ಮುಖ್ಯಮಂತ್ರಿ ಬಳಿಗೆ ನಿಯೋಗ :- ಮೊಗವೀರ ಸಮಾಜದ ಮುಂದಾಳು ಡಾ: ಜಿ. ಶಂಕರ್ ಇವರ ನೇತೃತ್ವದಲ್ಲಿ ನಮ್ಮ ಸಂಘಟನೆಯ ನಿಯೋಗವು ಕರಾವಳಿ ಜಿಲ್ಲೆಗಳ ಸಮಸ್ತ ಮೊಗವೀರರ ಪರವಾಗಿ ಮೀನುಗಾರಿಕೆ ಮತ್ತು ಬಂದರು ಖಾತೆಗಳನ್ನು ಒಗ್ಗೂಡಿಸಿ ಒಬ್ಬರೇ ಸಚಿವರನ್ನು ನೀಡುವ ಕುರಿತು, ಕಡಲುಕೊರೆತಕ್ಕೆ ಶಾಶ್ವತ ತಡೆಗೋಡೆ ನಿರ್ಮಾಣ ಮತ್ತು ತುರ್ತು ನಿರ್ಮಾಣ ಕೈಗೊಳ್ಳುವ ಕುರಿತು. ಬ್ಯಾಂಕ್ಗಳಲ್ಲಿ 3 ಶೇಕಡಾ ಬಡ್ಡಿದರದಲ್ಲಿ ಸಾಲಸೌಲಭ್ಯ ನೀಡುವ ಕುರಿತು ಮತ್ತು ಮತ್ಸಾಶ್ರಯ ಯೋಜನೆಯಡಿ ಬಾಕಿ ಇರುವ ಎಲ್ಲಾ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಿ, ಈ ಯೋಜನೆಯಡಿಯಲ್ಲಿ ಮೀನುಗಾರಿಕೆ ಮನೆಗಳ ಸಂಖ್ಯೆ ಹೆಚ್ಚಿಸುವ ಕುರಿತು ಮತ್ತು ಕರಾವಳಿ ಪ್ರದೇಶವನ್ನು ಮೀನುಗಾರಿಕಾ ಚಟುವಟಿಕೆ ಮತ್ತು ಮೀನುಗಾರರ ವಾಸಕ್ಕೆ ಮೀಸಲಿರಿಸುವ ಕುರಿತು ಮನವಿ ನೀಡಿ ಮಾನ್ಯ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಲಾಯಿತು.
7. ರಾಜ್ಯಪಾಲರ ಸಲಹೆಗಾರರಾದ ಮಾನ್ಯ ಪಿ.ಪಿ.ಪ್ರಭು ಇವರಿಗೆ ಮನವಿ :-ಮೀನುಗಾರರ ಹಲವಾರು ಬೇಡಿಕೆಗಳನ್ನು ಉಡುಪಿ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ರಾಜ್ಯಪಾಲರ ಸಲಹೆಗಾರರಿಗೆ ವಿವರಿಸಿ ಮೀನುಗಾರರ ಪರವಾಗಿ ಮನವಿ ನೀಡಲಾಯಿತು. ಅವರೊಂದಿಗೆ ಮತ್ಸಾಶ್ರಯ ಮನೆಗಳ ಸಂಖ್ಯೆ ಹೆಚ್ಚಿಸುವ ಕುರಿತು ಮತ್ತು ಮಲ್ಪೆ, ಮಂಗಳೂರು ಬಂದರಿನ 3ನೇ ಹಂತದ ಕಾಮಗಾರಿ ಆರಂಭಿಸುವ ಕುರಿತು. ಹೆಜಮಾಡಿ ಹಂಗಾರಕಟ್ಟೆ, ಕೋಡಿ, ಗಂಗೊಳ್ಳಿ ಹಾಗೂ ಇತರ ಕಿರುಬಂದರುಗಳ ಅಭಿವೃದ್ದಿ ಬಗ್ಗೆ ಚರ್ಚಿಸಲಾಯಿತು.

ಸಾರ್ವಜನಿಕರ ಮನವಿಗೆ ಸ್ಪಂದನೆ

ಜಿಲ್ಲಾ ಸಂಘಟನೆಯ ವಿವಿಧ ಘಟಕಗಳ ಮೂಲಕ ಬರುವ ಮತ್ತು ನೇರವಾಗಿ ಜಿಲ್ಲಾ ಸಂಘಟನೆಗೆ ಸಹಾಯ ಕೋರಿ ಬರುವ ಅರ್ಜಿಗಳನ್ನು ಪರಿಶೀಲಿಸಿ ಅರ್ಹ ಫಲಾನುಗಳಿಗೆ ಸಂಘಟನೆ ವತಿಯಿಂದ ಸಹಾಯಧನವನ್ನು ನೀಡುವುದಲ್ಲದೇ, ಸಮಾಜದ ಕೊಡುಗೈ ದಾನಿಗಳಿಂದ ಸಹಾಯಹಸ್ತ ನೀಡಲು ಸಹಕರಿಸುತ್ತಿದ್ದೇವೆ. ಅಲ್ಲದೇ ಸರಕಾರದ ಸವಲತ್ತುಗಳನ್ನು ಕೂಡಾ ಅರ್ಹರಿಗೆ ಸಿಗುವಂತೆ ಪ್ರಯತ್ನಿಸುತ್ತಿದ್ದೇವೆ

ಸಮಾಜದ ಸಾಧಕರು ಹಾಗೂ ಗಣ್ಯರಿಗೆ ಸಮ್ಮಾನ

ನಮ್ಮ ಸಂಘಟನೆಯ ಮತ್ತು ವಿವಿಧ ಘಟಕಗಳ ಆಶ್ರಯದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಸ್ಥಳೀಯ ಪರಿಸರದ ಎಲ್ಲಾ ಸಮಾಜದ ಸಾಧಕರನ್ನು, ಪ್ರತಿಭಾನ್ವಿತ ವಿಧ್ಯಾರ್ಥಿಗಳನ್ನು, ಕಲಾವಿದರನ್ನು, ಕೊಡುಗೈ ದಾನಿಗಳನ್ನು, ಸಮಾಜಸೇವಕರನ್ನು ಗುರುತಿಸಿ, ಗೌರವಿಸುವ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಬಂದಿರುತ್ತೇವೆ.