ಕ್ರೀಡಾಕೂಟ

ಮೊಗವೀರ ಯುವ ಸಂಘಟನೆಯ ಆಶ್ರಯದಲ್ಲಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಮಾಜ ಭಾಂದವರಿಗೆ ಕ್ರೀಡಾಕೂಟಗಳನ್ನು ನಡೆಸಲಾಗುತ್ತಿದ್ದು, ವಿಜೇತರಿಗೆ ಪ್ರಮಾಣಪತ್ರ ಹಾಗೂ ಬಹುಮಾನಗಳನ್ನು ವಿತರಿಸಲಾಗುತ್ತಿದೆ. ಕ್ರೀಡಾ ಪಟುಗಳಿಗೆ ಕ್ರೀಡಾ ಸ್ಪೂರ್ತಿಯನ್ನು ಈ ಕಾರ್ಯಕ್ರಮದ ಮೂಲಕ ಹೆಚ್ಚಿಸಲಾಗುತ್ತಿದೆ. ಅಲ್ಲದೆ ಜಿಲ್ಲಾ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುತ್ತಿದ್ದು, ಈ ಸಮಾರಂಭಗಳಲ್ಲಿ ಕ್ರೀಡೆಯಲ್ಲಿ ಸಾಧನೆಗೈದ ಕ್ರೀಡಾಪಟುಗಳನ್ನು ಗುರುತಿಸಿ ಸನ್ಮಾನವನ್ನು ಮಾಡಲಾಗುತ್ತಿದೆ.

ಮೊಗವೀರ ಯುವ ಕ್ರೀಡಾಕೂಟ- 2011

ಜಿಲ್ಲಾ ಸಂಘಟನೆಯ ನೇತೃತ್ವದಲ್ಲಿ ದಿನಾಂಕ 27-02-2011 ರಂದು ಕೋಟೇಶ್ವರ ಸರಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಕೋಟೇಶ್ವರ ಘಟಕದ ಆತಿಥ್ಯದಲ್ಲಿ “ಮೊಗವೀರ ಯುವ ಕ್ರೀಡಾಕೂಟ 2011” ನೆರೆವೇರಿಸಲಾಯಿತು. ಈ ಕ್ರೀಡಾಕೂಟದಲ್ಲಿ ಜಿಲ್ಲೆಯ 20 ಘಟಕಗಳಿಂದ ಸೂಮರು 1200 ಕ್ರೀಡಾಳುಗಳು ಭಾಗವಹಿಸಿರುತ್ತಾರೆ. ಈ ಕ್ರೀಡಾಕೂಟದಲ್ಲಿ ಯುವಕರು-ಯುವತಿಯರು, ಬಾಲಕರು-ಬಾಲಕಿಯರಿಗಾಗಿ ಬಾಲಿಬಾಲ್, ತ್ರೋಬಲ್, ಹಗ್ಗಜಗ್ಗಾಟ, ಅಥ್ಲೆಟಿಕ್ಸ್, ಎತ್ತರ ಜಿಗಿತ, ಉದ್ದ ಜಿಗಿತ, ಗುಂಡೆಸೆತ, ಚಕ್ರ ಎಸೆತ, ಸ್ಪರ್ದೇಗಳನ್ನು ನಡೆಸಲಾಯಿತು. ಈ ಕ್ರೀಡಾಕೂಟವನ್ನು ಡಾ| ಜಿ.ಶಂಕರ್ ಉದ್ಗಾಟಿಸಿದರು ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷರಾದ ಸತೀಶ್ ಎಮ್.ನಾಯ್ಕ್ ವಹಿಸಿರುತ್ತಾರೆ.
ಮುಖ್ಯಅತಿಥಿಗಳಾದ ಶ್ರೀ ಸುರೇಶ್ ಆರ್.ಕಾಂಚನ್ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಅತಿಥಿಗಳಾಗಿ ಶ್ರೀ ಗೋಪಾಲ ಎಸ್ ಪುತ್ರನ್, ಶ್ರೀ ಕೇಶವ ಕುಂದರ, ಶ್ರೀ ದಿನೇಶ್ ಕುಂದರ್, ಶ್ರೀ ಸತೀಶ ಅಮೀನ್ ಪಡುಕೆರೆ, ಶ್ರೀಲಕ್ಷ್ಮೀ ನಾರಾಯಣ ತರಂಗ ಪಾಂಶುಪಾಲರು, ಶ್ರೀ ಶೇಖರ್ ಚಾತ್ರಬೆಟ್ಟು, ಇವರುಗಳು ಭಾಗವಹಿಸಿರುತ್ತಾರೆ. ಸಂಜೆ 4 ಗಂಟೆಗೆ ಕ್ರೀಡಾಕೂಟದ ಬಹುಮಾನ ವಿತರಣಿ ಮತ್ತು ಸಮಾರೋಪ ಸಮಾರಂಭದಲ್ಲಿ, ಉದ್ಯಮಿ ಶ್ರೀ ಆನಂದ ಸಿ. ಕುಂದರ್ ವೀಜೆತರುಗಳಿಗೆ ಬಹುಮಾನ ವಿತರಣೆ ಮಾಡಿದರು. ಡಾ | ಜಿ.ಶಂಕರ್, ಶ್ರೀ ಪ್ರಮೋದ್ ಮಧ್ವರಾಜ್, ಶ್ರೀ ಗೋಪಾಲ ಎಸ್ ಪುತ್ರನ್, ಶ್ರೀ ಸುರೇಶ್ ಆರ್.ಕಾಂಚನ್, ಶ್ರೀ ಕೆ.ಕೆ ಕಾಂಚನ್, ಶ್ರೀ ಎಮ್ ಎಸ್ ಸಂಜೀವ, ಶ್ರೀ ಗಣಪತಿ .ಟಿ.ಶ್ರೀಯಾನ್, ಸತೀಶ್ ಎಮ್ .ನಾಯ್ಕ್ ಅತಿಥಿಗಳಾಗಿ ಭಾಗವಹಿಸಿರುತ್ತಾರೆ.
ಕ್ರೀಡಾಕೂಟದಲ್ಲಿ ವಯಕ್ತಿಕ ಚಾಂಪಿಯಾನ್ ಮತ್ತು ಸಮಗ್ರ ಪ್ರಶಸ್ತಿ ಪಡೆದವರ ವಿವರ : 1. ಬಾಲಕರ ವಿಭಾಗದಲ್ಲಿ ಸಾಲಿಗ್ರಾಮ ಘಟಕದ ಪ್ರಜ್ವಲ್, ಬಾಲಕಿಯರ ವಿಭಾಗದಲ್ಲಿ ಬಡನಿಡಿಯೂರು ಘಟಕದ ಚೇತನ್ ವಯಕ್ತಿಕ ಚಾಂಪಿಯಾನ್ ಪ್ರಶಸ್ತಿ ಪಡೆದಿರುತ್ತಾರೆ.
2. ಪುರುಷರ ವಿಭಾಗದಲ್ಲಿ ಬಡಾನಿಡಿಯೂರು ಘಟಕದ ಭವೀಷ್ ಕರ್ಕೇರ, ಮಹಿಳಾ ವಿಭಾಗದಲ್ಲಿ ಹೆಮ್ಮಾಡಿ ಘಟಕದ ಜೋತಿ ಎಚ್, ಕೊಲ್ಲರು , ವಯಕ್ತಿಕ ಚಾಂಪಿಯನ್ ಪ್ರಶಸ್ತಿ ಗಳಿಸಿರುತ್ತಾರೆ.
3. ಸಮಗ್ರ ಘಟಕ ಪ್ರಶಸ್ತಿ ಮಹಿಳಾ ಮತ್ತು ಪುರುಷರ ಎರಡು ವಿಭಾಗಳಲ್ಲೂ ಕೋಟ ಘಟಕ ಪ್ರಶಸ್ತಿ ಗಳಿಸಿರುತ್ತದೆ.

ಮೊಗವೀರ ಕ್ರೀಡಾಕೂಟ- 2007

ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ ಮತ್ತು ಮೊಗವೀರ ಯುವ ಸಂಘಟನೆಯ ಕೋಟ ಘಟಕದ ಆಶ್ರಯದಲ್ಲಿ ಕೋಟದ ವಿವೇಕ ಪದವಿ ಪೂರ್ವ ಕಾಲೇಜಿನ ಕ್ರೀಡಾ೦ಗಣದಲ್ಲಿ ಜಿಲ್ಲಾ ಮಟ್ಟದ “ಮೊಗವೀರ ಕ್ರೀಡಾಕೂಟ – 2007” ಜನವರಿ 20, 21 ರಂದು ಯಶಸ್ವಿಯಾಗಿ ನಡೆಯಿತು. ಎರಡು ದಿನಗಳ ಕಾಲ ನಡೆದ ಈ ಕ್ರೀಡಾಕೂಟವನ್ನು ದ.ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಮತ್ತು ಫೆಡರೇಶನ್ನ ಅಧ್ಯಕ್ಷ ವೈ.ಗಂಗಾಧರ ಸುವರ್ಣ ಉದ್ಘಾಟಿಸಿದರು. ಸಮಾರೋಪ ಸಮಾರ೦ಭದಲ್ಲಿ ಉಡುಪಿಯ ಉದ್ಯಮಿ ಶ್ರೀ ಜಿ.ಶಂಕರ್ ಪ್ರಶಸ್ತಿ ವಿಜೇತರಿಗೆ ಬಹುಮಾನ ವಿತರಿಸಿದರು.
ಜಿಲ್ಲಾ ಮಟ್ಟದ ಮೊಗವೀರ ಕ್ರೀಡಾ ಕೂಟದಲ್ಲಿ ಮಹಿಳೆಯರ ವಿಭಾಗದಲ್ಲಿ ಕೋಟ ಘಟಕದ ಅಶ್ವಿನಿ ಮತ್ತು ಪುರುಷರ ವಿಭಾಗದಲ್ಲಿ ದೊಡ್ಡಣಗುಡ್ಡೆ ಘಟಕದ ಸಮರ್ಥ ಸದಾಶಿವ ವೈಯಕ್ತಿಕ ಚಾಂಪಿಯನ್ ಯಕ್ತಿಕ ಆಗಿ ಮೂಡಿ ಬಂದಿದ್ದರು.

ಮೊಗವೀರ ಕ್ರೀಡಾಕೂಟ- 2006

ಮೊಗವೀರ ಯುವ ಸಂಘಟನೆಯ ಆಶ್ರಯದಲ್ಲಿ ಜಿಲ್ಲಾ ಮಟ್ಟದ "ಮೊಗವೀರ ಕ್ರೀಡಾಕೂಟ - 2006" ಫೆ 25, 26 ರಂದು ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಶ್ರೀ ಯಶಪಾಲ್ ಸುವರ್ಣರ ನೇತೃತ್ವದಲ್ಲಿ ಎಮ್.ಜಿ.ಎಮ್ ಕಾಲೇಜಿನ ಕ್ರೀಡಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು. ಎರಡು ದಿನಗಳ ಕಾಲ ನಡೆದ ಈ ಕ್ರೀಡಾಕೂಟವನ್ನು ಕೋಟದ ಉದ್ಯಮಿ ಶ್ರೀಯುತ ಆನಂದ ಸಿ. ಕುಂದರ್ರವರು ಉದ್ಘಾಟಿಸಿದರು ಹಾಗೂ ಮಲ್ಪೆಯ ಉದ್ಯಮಿ ಆನಂದ ಸುವರ್ಣ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಕ್ರೀಡಾ ಕೂಟದಲ್ಲಿ ಜಿಲ್ಲೆಯಾದ್ಯಂತ ಘಟಕಗಳು ಸಕ್ರಿಯವಾಗಿ ಭಾಗವಹಿಸಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿತ್ತು. ತೆಂಕ ಬಡನಿಡಿಯೂರು ಘಟಕದ ಶ್ರೀ ಗಣೇಶ್ ಕೋಟ್ಯಾನ್ ಹಾಗೂ ಮಂದರ್ತಿ ಘಟಕದ ಕು. ರಮ್ಯ ಇವರು ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ಚಾಂಪಿಯನ್ಶಿಪ್ ಪಡೆದುಕೊಂಡು ಅಭಿನಂದನೆಗೆ ಪಾತ್ರರಾಗಿರುತ್ತಾರೆ. ಸಮಾರೋಪ ಸಮಾರಂಭದಲ್ಲಿ ಶ್ರೀ ಜಿ.ಶಂಕರ್, ಉದ್ಯಮಿ ಶ್ರೀ ದಿನೇಶ್ ಪುತ್ರನ್, ನಗರಸಭಾ ಸದಸ್ಯೆ ಶ್ರೀಮತಿ ಜಯಶ್ರೀ ಕೃಷ್ಣರಾಜ್, ಲಯನ್ ಗಂಗಾಧರ್ ಜಿ. ಯವರು ಉಪಸ್ಥಿತರಿದ್ದು ವಿಜೇತರಿಗೆ ಬಹುಮಾನಗಳನ್ನು ನೀಡಿ ಗೌರವಿಸಿದ್ದಾರೆ.